DiscoverSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttu
Claim Ownership

Secret of Kannada ಕನ್ನಡದ ಗುಟ್ಟು Kannadada Guttu

Author: Vishweshwar Dixit

Subscribed: 12Played: 23
Share

Description

Explore varied topics to unlock the secrets of Kannada Language
ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ
Read at http://kannadakali.com
Watch at http://youtube.com/channel/UCCON6n4lEgj6NsPqCLZdDSw
Kannada Kali : Kannadada Guttu
90 Episodes
Reverse
👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletterHere, by saying `kuto dhanam', the meaning is meant to be money. So, even for 24 hours ...ChennudiThe first meaning of Artha is meaning!Moment by Moment grain by grainKnowledge and Weatth are to be earned.A grain left is wealth lost;A minute wasted is Knowlede unlearned. - Samayocitapadyamalika (Ka-30)Time (kaala) means passing away; no one can hold it back. But time can be transformed, that is, even a little bit of time can be spent working and earning something useful. That is why Time is Money.Here, by saying `kuto dhanamʼ, the meaning of Artha is money. So, it does not mean that we should spend all 24 hours in the stock market, in interest trading, in moneylending, or in counting the money we have earned.Every moment of life, we gain experiences. Good experiences are the companions of life that stay with us till the end. They are our wealth and meaning. The first meaning of Artha is meaning itself! That is, meaning, hope, and goal. If you want to understand the meaning of life, the ultimate goal, and achieve it, you must engage in good deeds that bring joy and understanding, that are good for yourself and others, and that increase your well-being. You must collect every particle, piece, and fragment of your experiences, squeeze out the essence, gain understanding, and gain knowledge and wealth of Life.This is the inner voice of this Chennudi, and its true meaning.Yours,Vishveshwara Dikshita.The First Meaning of Artha is Meaning Itself!Kannada Kali, Bittarike,January 05, 2026ಇಲ್ಲಿ, ʼಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ...ಚೆನ್ನುಡಿಅರ್ಥದ ಮೊದಲ ಅರ್ಥವೇ ಅರ್ಥ!ಕಣ ಕಣವ ಬಿಡದೆ ಚಣ ಚಣವು ಗಳಿಸು ನೀ ಸಿರಿ ತಿಳಿವುಗಳನು. ಬಿಡಲು ಕಣವೊಂದ ಸಿರಿ ಎಂತು? ಕಳೆಯೆ ಚಣವೊಂದ ಕಲಿವೆಂತು?ಸಂಸ್ಕೃತ ಮೂಲ: ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್ ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಂ - ಸಮಯೋಚಿತಪದ್ಯಮಾಲಿಕಾ (ಕ-೩೦)ಸಮಯೋಚಿತಪದ್ಯಮಾಲಿಕೆಯಲ್ಲಿ ಕಕಾರದ ಅಡಿಯಲ್ಲಿ ಬರುವ ೩೦ನೆಯ ಶ್ಲೋಕಒಂದೊಂದು ಚಣವೂ ಶ್ರಮಿಸುತ್ತ, ಒಂದೊಂದು ಚೂರೂ ಬಿಡದೆ, ಕಲಿಕೆ ಮತ್ತು ಸಂಪತ್ತುಗಳನ್ನು ಗಳಿಸಬೇಕು. ಅದನ್ನೆ "ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು" "ತೆನೆ ತೆನೆ ಕೂಡಿದರೆ ರಾಶಿ" ಅಂತ ಕನ್ನಡದ ಗಾದೆಗಳು ಹೇಳುತ್ತವೆ.ಸಮಯ (ಕಾಲ) ಅಂದರೆ ಕಳೆದು ಹೋಗುವುದು ಅಂತಲೇ ಅರ್ಥ; ಅದನ್ನು ಯಾರಿಂದಲೂ ಹಿಡಿದಿಡಲು ಆಗದು.‌ ಆದರೆ ಸಮಯವನ್ನು ರೂಪಾಂತರಿಸಬಹುದು, ಅಂದರೆ ಚಣ ಚಣವೂ ಸಮಯವನ್ನು ಕೆಲಸದಲ್ಲಿ ತೊಡಗಿಸಿ ಉಪಯುಕ್ತವಾದುದನ್ನು ಸಂಪಾದಿಸಬಹುದು. ಅದಕ್ಕೇ Time is Money ಅಂತ.‌ ಇಲ್ಲಿ, ʻಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ಷೇರುಪೇಟೆಯಲ್ಲಿ, ಬಡ್ಡಿ ವ್ಯವಹಾರದಲ್ಲಿ, ಲೇವಾದೇವಿಯಲ್ಲಿ, ಅಥವ ಗಳಿಸಿದ ಹಣವನ್ನು ಎಣಿಸುವುದರಲ್ಲಿ ತೊಡಗಿಸಬೇಕು ಅಂತಲ್ಲ. ಜೀವನದ ಪ್ರತಿ ಕ್ಷಣವೂ ನಾವು ಗಳಿಸುತ್ತಿರುವುದು ಅನುಭವಗಳು. ಒಳ್ಳೆಯ ಅನುಭವಗಳೆ ಕೊನೆಯವರೆಗೂ ನಮ್ಮೊಡನೆ ಇರುವ ಬಾಳ ಸಂಗಾತಿ. ಅವೇ ನಮ್ಮ ಸಂಪತ್ತು ಮತ್ತು ಅರ್ಥ. ಅರ್ಥದ ಮೊದಲ ಅರ್ಥವೇ ಅರ್ಥ! ಅಂದರೆ meaning,ಆಶಯ, ಗುರಿ ಅಂತ. ಬಾಳಿನ ಅರ್ಥ, ಅರ್ಥಾತ ಗುರಿಯನ್ನು ಅರಿತು ಸಾಧಿಬೇಕಾದರೆ ಚಣಚಣವನ್ನೂ ತಿಳಿವನ್ನು ತರುವ, ತನಗೆ ಮತ್ತು ಇತರರಿಗೆ ಒಳ್ಳೆಯದಾಗುವ, ಸೌಖ್ಯವನ್ನು ಹೆಚ್ಚಿಸುವ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಒಂದೊಂದು ಕಣ, ತುಂಡು, ಚೂರು ಅನುಭವಗಳನ್ನೆಲ್ಲ ಸಂಗ್ರಹಿಸಿ, ಸಾರವನ್ನು ಹಿಂಡಿ, ತಿಳಿವನ್ನು ಹೊಂದಿ ಬಾಳಸಿರಿಯನ್ನು ಹೊಂದಬೇಕು. ಇದು ಈ ಚೆನ್ನುಡಿಯ ಒಳದನಿ ಆಗಿದೆ, ನಿಜವಾದ ಅರ್ಥವೂ ಆಗಿದೆ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತ.ಅರ್ಥದ ಮೊದಲ ಅರ್ಥವೇ ಅರ್ಥ!ಕನ್ನಡ ಕಲಿ, ಬಿತ್ತರಿಕೆ, January 05, 2026
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು”ಮೈಸೂರಿನ ಮಾನಸಗಂಗೋತ್ರಿಯ ತತ್ತ್ವಶಾಸ್ತ್ರ ಅಧ್ಯಯನ ಕೇಂದ್ರದವರು, ಸ್ನಾತಕೋತ್ತರ ತತ್ತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ “World Philosophy Day-2025” ಪ್ರಯುಕ್ತ S. G. ಸೀತಾರಾಮ್‍ರವರು ಅಲ್ಲಿ ಮಂಡಿಸಿದ ವಾದದ ಧ್ವನಿ ಪ್ರಸ್ತುತಿ.ಕಂಠದಾನ: Dr. H. ಪಾಂಡುರಂಗ ವಿಠಲ ... ಭರದಿಂದ ಬದಲಾಗುತ್ತಿರುವ ವಿದ್ಯಮಾನಗಳು ಚಿತ್ರ-ವಿಚಿತ್ರ ಸವಾಲುಗಳನ್ನೊಗೆದು, ಒಂದರ ಮೇಲೊಂದು ಆಹ್ವಾನ-ಅವಕಾಶಗಳನ್ನು ’ಉದುರಿಸು’ತ್ತಿರುವ ಈ ಸಂಧಿಯಲ್ಲೂ, ಪ್ರಾಚೀನ ಕಾಲದ, ಪುರಾತನ ಸಮಾಜದ, ಅದರಲ್ಲೂ ಕೆಲವೇ ಆಯ್ದ, ಸೀಮಿತ- ಮತೀಯ, ಪರಸ್ಪರ-ವಿರೋಧಿ ಸಿದ್ಧಾಂತಗಳಷ್ಟನ್ನೇ ಸಾರ್ವತ್ರಿಕ, ಸಾರ್ವಕಾಲಿಕ, ಸತ್ಯಗಳೆಂದೂ, ಅವುಗಳ ಪ್ರವರ್ತಕರ ವಾದಗಳೇ ಪರಮಾರ್ಥಗಳೆಂದೂ, ಭಯ-ಭಕ್ತಿ-ನಿಷ್ಠೆಗಳಿಂದ ತಲೆಬಾಗಿ, ಭೂತಕಾಲಕ್ಕೇ ಜೋತುಬಿದ್ದು, ಇಂದಿಗೂ, ಮುಂದಕ್ಕೂ, ಹಿಂಡಿದ ಹಿಪ್ಪೆಯನ್ನೇ ಚಪ್ಪರಿಸುತ್ತ, ಜಳ್ಳನ್ನೇ ಮತ್ತೆ-ಮತ್ತೆ ಜಗಿದು, ಬಲವಂತವಾಗಿ ನುಂಗಿಕೊಳ್ಳುತ್ತ ಹೋದರೆ, ತತ್ತ್ವವಿಷಯ ವಿಕಾಸಕ್ಕೆ ಪುಷ್ಟಿ ಹೇಗೆ ದೊರೆತೀತು? ...--- Read the fill article here https://kannadakali.com/article/reflection/nuhorizonsforphilosophy.htmlSome “Exciting Horizons” for Contemporary Philosophy A sound presentation of the argument presented by S. G. Seetharam, Mysore, at the Department of Postgraduate Philosophy Studies there on the occasion of “World Philosophy Day-2025”.Vocals: Dr. H. Panduranga Vitthal... Even in this era when rapidly changing phenomena are posing strange challenges and ‘throwing’ one invitation and opportunity after another, if we bow our heads out of fear, devotion and loyalty, clinging to the past, considering only the few selected, limited, and contradictory theories of ancient times and ancient societies as universal, eternal, truths, and the arguments of their proponents as the ultimate meanings, and continue to chew the same straw, chewing the same water again and again, and forcibly swallowing it, how can we find nourishment for the development of philosophy? ...
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ಹೆಸರಿಗಾಗಿ!ನಿಜ ಜೀವನದ ಘಟನೆಗಳ ಹಾಸ್ಯಮಯ ರೋಚಕ ನಿರೂಪಣೆಬರೆಹ * ಓದು: ವಿಶ್ವೇಶ್ವರ ದೀಕ್ಷಿತಮರೆಯಲಾಗದ ಕರೆಗಂಟೆ - ನಾನೂ ಅಪ್ಪ ಆಗುವೆ!ನೀರವತೆ ತುಂಬಿದ ಆಫೀಸಿನಲ್ಲಿ ಎಳೆಯುತ್ತಿರುವ ಮಧ್ಯಾಹ್ನದ ಒಂದು ವಿದ್ಯುತ್ ಕ್ಷಣ. ಟಿಣ್ ಟಿಣಿಸುತ್ತಿದ್ದ ದೂರವಾಣಿಯನ್ನು ಎತ್ತಿಕೊಂಡೆ. ಅತ್ತ ನನ್ನ ಹೆಂಡತಿ. ಅವಳ ಮಾತು ಕೇಳಿ ಮೂಕನಾದ ನಾನು ಕೆಲಸದ ಮೇಲೆ ಗಮನ ಇಡಲಾರದಾದೆ. ಎಲ್ಲ ಮೀಟಿಂಗುಗಳನ್ನು ರದ್ದುಗೊಳಿಸಿದೆ. ಹಿಗ್ಗಿನಿಂದ ಎದೆ ಉಬ್ಬಿಸಿ ಗೂಡಿನಿಂದ ಗೂಡಿಗೆ ಹಾರಾಡಿದೆ. ಎಂದಿಗಿಂತ ಹೆಚ್ಚಿನ ನಗುಮೊಗದಿಂದ ಎದುರು ಬಂದವರೆಲ್ಲರ ಕೈ ಕುಲುಕುತ್ತ ಓಡಾಡಿದೆ. ನಾನೂ ಅಪ್ಪ ಆಗುವೆ ಎಂದು ಪುಲಕಿತನಾದೆ.ಸಂಜೆಯ ವೇಳೆಗೆ ಆ ಪುಳಕವೆಲ್ಲ ಮೈ ಇಳಿದು ಪರಿಸ್ಥಿತಿ ಗಂಭೀರವಾಯಿತು. ಹೆಸರು ಬಹಳ ಮಹತ್ವ. ಹೆಸರೊಂದು ಇಡಿ ಜೀವನದ ಗತಿಯನ್ನೆ ನಿರ್ಧರಿಸಿ ಬಿಡಬಹುದು. ಕೂಸಿಗೆ ಏನು ಹೆಸರು ಇಡುವುದು ಎನ್ನುವ ಸರಳ ಪ್ರಶ್ನೆ ದಂಗು ಬಡಿಸಿತು. ಈ ವಿಷಯವನ್ನು ತಪ್ಪಿಯೂ ಕಲಿಸಿರದ ಸಾಲೆಗಳಿಗೆ ಕಾಲು ಹೊಸೆದಿದ್ದು ದಂಡ ಎನಿಸಿತು.ಯೋಜನೆಗಳು[ಇರಲಿ!] ಹೆಸರಿಗಾಗಿ, ಏನ ಕೇನ ಪ್ರಕಾರೇಣ ಎನ್ನುವಂತೆ, ಒಂದು ಯೋಜನೆ ಹಾಕಿದೆ: ಹೆಸರುಗಳ ಪುಸ್ತಕಗಳನ್ನು ಓದುವುದು; ಗೆಳೆಯರನ್ನು, ಹಿರಿಯರನ್ನು, ಮತ್ತಿತರ ಹೆಮ್ಮೆಯ ತಾಯಿತಂದೆಯರನ್ನು ಕೇಳುವುದು; ಇಂಟರ್‌ನೆಟ್ ಮೂಲಕ ಸಿಗಬಹುದಾದ ಮಾಹಿತಿಯನ್ನು ಜಾಲಾಡಿಸಿ ಹೆಸರು ಹುಡುಕುವುದು. ಕವಿರಾಜ ಮಾರ್ಗವನ್ನು ಹಿಡಿದು, ಹರಿಹರನೊಡನೆ ರಗಳೆ ಗೈದು, ನಾಗರಸನನ್ನು ಕೆದಕಿ, ಮುದ್ದಣನೊಡನೆ ಸರಸವಾಡಿ ಸವಿ ಕನ್ನಡ ಹೆಸರೊಂದನ್ನು ಸಂಪಾದಿಸುವುದು. ಒಂದು ಹೆಸರಿಗಾಗಿ, ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಆ ರನ್ನನೊಡನೆ ಗದಾಯುದ್ಧಕ್ಕೆ ಇಳಿಯಲೂ ಸನ್ನದ್ಧನಾದೆ.ಯೋಜನೆ, ಬರಿ ಯೋಜನೆಎಲ್ಲ ಒಳ್ಳೆಯ ಯೋಜನೆಗಳಂತೆ ಇದೂ, ನಿರ್ವಹಿಸದೆ, ಬರಿ ಯೋಜನೆಯಾಗಿಯೆ ಉಳಿಯಿತು. ತಿಂಗಳುಗಳು ಉರುಳಿ ಹೋಗುತ್ತಿರುವಾಗ, ನನ್ನ ಮುಂದೂಡುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳಲು ತಾತ್ವಿಕತೆಯ ಸುಲಭ ಸೋಗೊಂದು ಥಟ್ಟನೆ ಬೇಕಾಯಿತು. ಈಗ, ನನಗೆ ಅನುಕೂಲವಾದದ್ದು ಶೇಕ್ಸ್‌ಪಿಯರನ ನಾಟಕೀಯ ಮಾತು, "ಹೆಸರಿನಲ್ಲೇನಿದೆ? ಯಾವುದನ್ನು ಗುಲಾಬಿ ಎಂದು ಕರೆಯುತ್ತೇವೆಯೋ ಅದು ಬೇರೆ ಯಾವುದೇ ಹೆಸರಿನಿಂದಲೂ ಅಷ್ಟೇ ಕಂಪು ಬೀರುತ್ತದೆ!" ಮೇಲಾಗಿ, ಇನ್ನೂ ಏಳು ತಿಂಗಳುಗಳು ಇವೆ! ಸದ್ಯಕ್ಕೆ ಸ್ವಲ್ಪ ಚೇತರಿಸಿಕೊಂಡೆ. ಮಗು ಹುಟ್ಟುವ ಮುಂಚೆ ಸಾವಿರ ಹೆಸರುಗಳನ್ನು ಕಂಡು ಹಿಡಿಯುವೆನೆಂಬ ಆತ್ಮ ವಿಶ್ವಾಸ ಒಮ್ಮೆಲೆ ಬಲವಾಯಿತು.ವಿಶೇಷ ಘಟನೆ ಇಲ್ಲದೆ ಆರು ತಿಂಗಳುಗಳು ಕಳೆದು ಹೋದರೂ ಹೆಸರು ಒಂದೂ ಸಿಕ್ಕಿರಲಿಲ್ಲ. ಯಾವಾಗಲೂ ಹೆಸರಿನ ವಿಚಾರ. ಒಂದು ದಾರಿಯನ್ನೂ ಸರಿಯಾಗಿ ಯೋಚಿಸಿರಲಿಲ್ಲ.ಐಡಿಯ ನಂಬರ್‌ ಒನ್[ಅಹಾ!] ಒಂದು ಐಡಿಯ ಹೊಳೆಯಿತು. ಕೂಸು ನನ್ನೊಬ್ಬನದೇ ಅಲ್ಲ. ಮಗು ಆಗುವುದು ನನ್ನ ಹೆಂಡತಿಗೂ ತಾನೆ? ಹೀಗೆ, ಈ ಹೆಸರಿನ ಹೊಣೆಯಿಂದ ನುಸುಳಿಕೊಳ್ಳುವ ಹವಣಿಕೆಯಲ್ಲಿ ಹಗುರವಾಗಿ ಕೇಳಿದೆ, "ಕೂಸಿಗೆ ಹೆಸರು ಏನಾದರು ಹುಡುಕಿರುವೆಯ?" ಅವಳ ಐಡಿಯ ಬೇರೆಯೆ ಆಗಿತ್ತು. "ಆರೋಗ್ಯವಾದ ಉತ್ತಮ ಮಗು ಹುಟ್ಟುವಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಅಳುಕದೆ ಮುಂದುವರಿಸಿದಳು, "ಕೂಸಿಗೊಂದು ಉತ್ತಮ ಹೆಸರು ನೀವು ನೋಡಿಕೊಳ್ಳಿ." ಈಗ, ಜವಾಬುದಾರಿಯ ಪೆಂಡುಲಂ ಪೂರ್ತಿ ನನ್ನ ಕಡೆಗೆ ವಾಲಿತು. ಗಡಿಯಾಳ ಮಾತ್ರ ಟಿಕ್‌ಟಿಕ್‌ಗುಟ್ಟುತ್ತಲೆ ಇತ್ತು.ಕೊರೆಯುವ ಸಮಸ್ಯೆ – ತಿವಿಯುವ ಗೆಳೆಯರುಈಗಂತು, ಮುದ್ದಾದ ಹೆಸರಿಟ್ಟು ಮಕ್ಕಳ ಜೊತೆ ಆಡುತ್ತಿದ್ದ ಗೆಳೆಯರನ್ನು ಕಂಡರೆ ಮನಸ್ಸಿನಲ್ಲಿ ಏನೋ ಕರಕರೆ. ಕಂಡರೂ ಕಾಣದಂತಿದ್ದ ಇವರು ಸಮಸ್ಯೆಯನ್ನು ನೆನಪಿಸುತ್ತ ನನ್ನ ಸುತ್ತ ತಿರುಗುತ್ತಿದ್ದಾರೆ ಎನ್ನಿಸಿತು.ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿನನ್ನ ಹೆಸರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಅದರ ಬೇಕುಬೇಡಗಳನ್ನು ವಿಶ್ಲೇಷಿಸಿ ಎಷ್ಟು ಸಂತೊಷಕೂಟಗಳನ್ನು ಅಂತ್ಯಗೊಳಿಸಿದೆನೋ! ಆಮಂತ್ರಿತ ಮದುವೆಗಳಿಗೆ ಹೋದಾಗ, ವಧೂವರರಿಗೆ ಕಾಣಿಕೆಯೊಂದಿಗೆ "ಕೂಸು ಹುಟ್ಟುವ ಮುಂಚೆ ಕುಲಾವಿ ಎನ್ನುವ ಗಾದೆಯನ್ನು ಮರೆತು ಬಿಡಿ. ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿ" ಎಂದು ಮೌನವಾಗಿ ಹರಸಿ ಬರುತ್ತಿದ್ದೆ.ಗಾಂಧಾರಿಯ ಗುಟ್ಟುನೂರೊಂದು ಕೌರವರನ್ನು ಯಾರು ಅರಿಯರು? ಒಂದು ನೂರ ಒಂದು ಹೆಸರುಗಳನ್ನು ಆ ಗಾಂಧಾರಿ ಧೃತರಾಷ್ಟ್ರರು ಹೇಗೆ ಕಂಡು ಹಿಡಿದರು? ಅವರಿಗೇನು ನೂರು ವರ್ಷಗಳ ಸಮಯ ಇರಲಿಲ್ಲ. ಒಮ್ಮೆಲೆ, ಗಾಂಧಾರಿ ಧೃತರಾಷ್ಟ್ರರಿಗಾಗಿ ನನ್ನಲ್ಲಿದ್ದ ಮೆಚ್ಚಿಕೆ ನೂರ್ಮಡಿ ಆಯ್ತು. ಕೌರವರನ್ನು ಹೊತ್ತ ಗಾಂಧಾರಿಗೆ ಅವು ಸಂತಾಪರಹಿತ ದಿನಗಳೇನು ಆಗಿರಲಿಲ್ಲ. ಕತೆ ಕೇಳಿ. ಬೇಗನೆ ಗಂಡು ಮಗು ಆಗಲಿ ಎಂದು ಬೇಡಿಕೊಂಡವಳು ಹೆರಿಗೆಯನ್ನು ಎರಡು ವರ್ಷಗಳ ವರೆಗೆ ತಡೆ ಹಿಡಿದಳು! ಯಾಕೆ ಗೊತ್ತೆ? ಅವಳಿಗೆ ಸರಿಯಾದ ಹೆಸರು ಸಿಕ್ಕಿರಲಿಲ್ಲ! ಬೇಸತ್ತು, ಕೊನೆಗೆ ಭ್ರೂಣವನ್ನೆ ಕಿತ್ತು ಹಾಕಿದಳು ಗಾಂಧಾರಿ! ನೂರು ಮಕ್ಕಳು ಆಗಲಿ ಎಂದ ವ್ಯಾಸನ ವರ ಅವಳಿಗೆ ನೂರಕ್ಕೆ ನೂರರಷ್ಟು ಶಾಪವಾಗಿದ್ದರಲ್ಲಿ ಸಂಶಯವಿಲ್ಲ. ಮಾತು ಕೊಟ್ಟ ವ್ಯಾಸ ಸುಮ್ಮನೆ ಬಿಡಬೇಕಲ್ಲ. ಭ್ರೂಣವನ್ನು ನೂರು ತುಂಡುಗಳಲ್ಲಿ ಕತ್ತರಿಸಿ ಮಣ್ಣಿನ ಕುಡಿಕೆಗಳಲ್ಲಿ ಮುಚ್ಚಿ ಇಟ್ಟ. ಜಾಣ, ಹೆಸರು ಹುಡುಕುವ ಹೆಚ್ಚಿನ ಜವಾಬುದಾರಿಯನ್ನು ಮಾತ್ರ ತಾನು ತೆಗೆದುಕೊಳ್ಳಲಿಲ್ಲ. ಕಣ್ಣು ಕಟ್ಟಿಕೊಂಡ ಗರತಿ ಗಾಂಧಾರಿಗೆ ಎಂತಹ ಶಿಕ್ಷೆ!ಗಾಂಧಾರಿ ಧೃತರಾಷ್ಟ್ರರು ಯಾವ ಕುರು ... --- ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kanadakali.com/experience/hesarigagi.html ಕನ್ನಡ ಕಲಿ ಬಿತ್ತರಿಕೆ, ಕನ್ನಡದ ಗುಟ್ಟು, ಡಿಸೆಂಬರ್‌ ೩, ೨೦೨೫
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletterಕೋಟೆ ಕಟ್ಟುವರು ಒಂದು ಸ್ವ-ರಚಿತ ಕವನ ವಾಚನವಿಶ್ವೇಶ್ವರ ದೀಕ್ಷಿತಮುನ್ನುಡಿ:ತಾನು ಎನ್ನುವ ಅರಿವು ಜೀವದ ಕುರುಹು. ಅಮೀಬದಂಥ ಏಕಕೋಶ ಜೀವಿಯಿಂದ ಹಿಡಿದು, ಅತ್ಯಂತ ಸಂಕೀರ್ಣ ಮನುಷ್ಯನ ವರೆಗೂ, ತಾನು ಎನ್ನುವುದು ಬೇರೆ ಬೇರೆ ಸ್ತರದಲ್ಲಿ ಇದೆ. ಮನುಷ್ಯನಲ್ಲಿ ಅದು ಪರಾಕಾಷ್ಠತೆಗೆ ಏರಿದೆ. ಒಂದು ರೀತಿಯಲ್ಲಿ, ಅದು ಕರಾಳತೆಯ ಕಡೆಗೆ ಹೊರಳಿದೆ. ತನ್ನ ಬದುಕು ಉಳಿವಿಗಾಗಿ ಅಲ್ಲದೆ, ಪ್ರಾಣಿ ಪ್ರಾಣಿಗಳಲ್ಲಿ ಅಲ್ಲದೆ, ತಮ್ಮತಮ್ಮಲ್ಲೆ ಭೇದ ಭಾವಗಳನ್ನು ಕಲ್ಪಿಸಿಕೊಳ್ಳುತ್ತ, ಇತರರ ಜೀವನವನ್ನು ಹಾಳು ಮಾಡುವುದೆ ಗುರಿಯಾದಂತೆ ಕಾಣುತ್ತದೆ. ಪರರ ನಷ್ಟವೇ ತನ್ನ ಲಾಭ, ಪರರ ದುಃಖವೇ ತನ್ನ ಸುಖ, ಪರರ ಕ್ಷೋಭೆಯೆ ತನಗೆ ಶಾಂತಿ ಎನ್ನುವಂತಾಗಿದೆ. ಇದು ಹಿಂದಿನಿಂದಲೆ ಹತ್ತಿಕೊಂಡ ಪಿಡುಗು. "ಮನುಷ್ಯ ಜಾತಿ ತಾನೊಂದೆ ವಲಂ" ಎಂದ ಪಂಪನ ಮಾತನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಆರು ಶತಮಾನಗಳ ನಂತರದ ಸರ್ವಜ್ಞನ ನುಡಿ "ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೆ ಇರುತಿರಲು, ಕುಲಗೋತ್ರ ನಡುವೆ ಎತ್ತಣದು? ಸರ್ವಜ್ಞ."ಯಾರಿಗೂ ಕೇಳುವುದೆ ಇಲ್ಲ.ಅಸಮಾನತೆ ಇದ್ದಾಗಲೂ ಸಮಾನತೆಯಿಂದ ಬಾಳುವುದು ಮನುಷ್ಯತ್ವ ಎಂದಾದರೆ ಅದು ವಿರಳವಾಗಿದೆ. ಸಮಾನತೆ ಇದ್ದಾಗಲೂ ಅಸಮಾನತೆ ಕಲ್ಪಿಸಿಕೊಳ್ಳುವುದೆ ಈಗ ಮನುಷ್ಯನ ಕುರುಹಾಗಿದೆ. ವಿಚಿತ್ರವೆಂದರೆ, ಇಂಥ ಕರಾಳತೆಯನ್ನು ಮೀರುವ ಶಕ್ತಿ ಕೂಡ ಇರುವುದು ಮನುಷ್ಯನಲ್ಲಿಯೆ. ಹಾಗಾಗಿ, ಆಯ್ಕೆ ಮಾಡಿಕೊಳ್ಳಲು ಮನುಷ್ಯ ಸ್ವತಂತ್ರನೇ ಎಂದು ಪ್ರಶ್ನಿಸುವಂತಾಗಿದೆ.ಕೋಟೆ ಕಟ್ಟುವರು ಕಟ್ಟುವರು : ಮನೆ ಸುತ್ತ, ಮನ ಸುತ್ತ ಕಾಂಕ್ರೀಟು ಕಟ್ಟಿಗೆ ಉಸುಕು ಇಟ್ಟಿಗೆ ಅರಳು ಮರಳು ಏನೆಲ್ಲ ವಿಷಯಗಳ ಬೆರೆಸಿ ಕೋಟೆ ಕಟ್ಟುವರು. ಅದು ಇದು ಎಂದು ಗೆರೆ ಎಳೆಯುವರು; ನಾನು ನನ್ನವರೆಂದು, ನೀನು ನಿನ್ನವರೆಂದು ಗೋಡೆ ಕಟ್ಟುವರು. ಅವರು ಇವರೆಂದು ಕಂದಕ ತೋಡುವರು; ಒಳಗೆ ಹೊರಗೆಂದು ಪೊರೆ ಬೆಳೆಸಿಕೊಳ್ಳುವರು. ಕುಲ ಜಾತಿ ನೀತಿ ಎಂದು ಬೇರೆ ಎಣಿಸಿಕೊಳ್ಳುವರು; ಮತ ಪಂಥ ಎಂದು ಕವಲೊಡೆದುಕೊಳ್ಳುವರು. ಮನಸು ಮುಚ್ಚಿ ಕನಸಲ್ಲಿ ನನಸು ಕಟ್ಟುವರು. ಕಣ್ಣು ಮುಚ್ಚಿ ಇರವನ್ನೆ ಅಲ್ಲಗಳೆಯುವರು;ಕಟ್ಟಿ ಅರಳಿಸಿ ಆದರಿಸುವರು : ಏಳು ಸುತ್ತಿನ ಮಲ್ಲಿಗೆ, ಎಸಳು ಎಸಳಿನ ಗುಲಾಬಿ, ತಂಪು ಕಂಪಿನ ಸವಿಕುಡಿಕೆ; ಮಕರಂದ ಆನಂದ ಪಾನಕ್ಕೆ ಅತ್ಮೀಯ ಆಹ್ವಾನ; ಕೋಟೆ ಕಾವಲಿಗಲ್ಲ - ಕರೆದು ಆದರಿಸಲೆಂದು.ಕಟ್ಟಿ ಕೆಡವುವರು : ಎಳೆ ಎಳೆಯ ಸುತ್ತಿ, ಮೈ ಸುತ್ತ ಪೊರೆ ಬೆಳೆಸಿ, ಗೂಡಲ್ಲಿ ಗೂಢವಾಯಿತು ಧ್ಯಾನಸ್ಥ ಚಿಟ್ಟೆಮರಿ; ರೂಪಾಂತರದ ಚಮತ್ಕಾರ; ಜೀವ ಸಂತತ ಸಾಕ್ಷಾತ್ಕಾರ. ಕೋಟೆ ಕಾವಲಿಗಲ್ಲ‌ - ಹರಿದು ಹೊರಬರಲೆಂದು, ಮನ ತೆರೆದು ತೋರಿಸಲೆಂದು.ಆಯ್ಕೆ ನಮ್ಮದು.ನಿಮ್ಮವನೇ ಆದ, ವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, ನವಂಬರ್‌ ೧, ೨೦೨೫.ಕೋಟೆ ಕಟ್ಟುವರು.ಕವನ ಮತ್ತು ವಾಚನ: ವಿಶ್ವೇಶ್ವರ ದೀಕ್ಷಿತ.--------The Fort BuilderA self-composed poem readingVishweshwara DixitPreface:The awareness of self is the essence of life. From a single-celled organism like an amoeba to the most complex human being, self is at different levels. In man, it has risen to its peak. In a way, it has turned towards darkness. It seems that it is not just for its own survival, not just among animals,but among themselves; while imagining differences where they do not exist, it seems that it's aim is to ⁠... continued hereTherefore, it has become questionable whether man has freedom to choose.Poem: Fort Builders(They) build forts: Around the house, Around the mind Mixing concrete, wood, Sand and bricks, And all kinds of matters. Saying this and that They draw the lines; Saying I and mine, You and yours, They build walls. Saying those and these They dig ditches; Saying inside(rs) and outside(rs) They grow blinders (over their eyes) Saying caste, clan, character The count themselves separate; Saying reigion, creed, sect They fork into ways. With minds closed They build reality in dreams; With eyes closed, They deny the reality.(They) build to Welcome and Cherish: Seven-round jasmine, Rose of many petals, A delicious drink of cool vibration; A dear invitation to drink the nectar; Not a fort to repel and guard - But To invite and cherish.They build and tear down: Wrapped thread by thread, Growing a sheath around, Hidden in the nest, A meditative butterfly; A miracle of transformation; A realization of the life cycle. Not a fort to repel and guard - But to tear out, To open the mind and show.The choice is ours.Yours,Vishweshwara DixitaKannada Kali Bittarike, Nov 1, 2025.
👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ದೂರವಾಣಿ "ಟ್ರಿನ್ ಟ್ರಿನ್" ಎಂದ ತಕ್ಷಣ "ಹಲೋ!" ಎನ್ನುವುದು ಸಾಮಾನ್ಯ. ಹಲೋ(ಹೆಲೋ hello) ಎಂದರೆ ಏನು? ಇದರ ಉತ್ಪತ್ತಿ ಹೇಗೆ? ಹಲೋ ಎನ್ನುವ ಶಬ್ದ ಬಳಕೆಯಲ್ಲಿ ಬಂದದ್ದು ಹೇಗೆ? ಇದನ್ನು ಕಂಡು ಹಿಡಿದವರು ಯಾರು? ಇದು ಅಚ್ಚಗನ್ನಡ ಪದವೆ? ಅಲ್ಲವಾದರೆ ಇದಕ್ಕೊಂದು ಅಚ್ಚಗನ್ನಡದ ಸಮಾನ ಪದ ಇದೆಯೆ? ಹೀಗೆ ಪ್ರಶ್ನೆಗಳನ್ನು ಕೇಳುತ್ತ ಹೋಗಬಹದು.Hello ಶಬ್ದದ ಹುಟ್ಟುಹಲೋ ಯಾವುದೋ ಲ್ಯಾಟಿನ್‌, ಗ್ರೀಕ್‌, ಅಥವಾ ಜರ್ಮನ್‌ ಮೂಲದ ಪದ ಇರಬೇಕು ಅಂದುಕೊಳ್ಳುವುದು ಸಹಜ. ಹೆಕ್ಕಿ ನೋಡಿದರೆ, ಇದು ಪ್ರಾಚೀನ ಶಬ್ದವೇನಲ್ಲ. ಟ್ರಿನ್ ಟ್ರಿನ್ ಎಂದು ಕರೆ ಗಂಟೆ ಹೊಡೆದುಕೊಳ್ಳುತ್ತಿರುವ ದೂರವಾಣಿಯನ್ನು ಎತ್ತಿಕೊಳ್ಳಲಾಗಿದೆ ಎಂದು ಸೂಚಿಸಲು ಆ ಕಡೆ ಫೋನ್ ಎತ್ತಿಕೊಂಡವರು ಹೇಳುವುದಕ್ಕೆ ಈ ಪದ ಹುಟ್ಟಿದ್ದು. ಟೆಲೆಫೋನ್ ಕಂಡು ಹಿಡಿದ ಅಲೆಕ್ಸ್ಯಾಂಡರ್ ಗ್ರಾಹಮ್ ಬೆಲ್ ಇದಕ್ಕೆ ಕಾರಣ ಎಂದುಕೊಳ್ಳುವುದು ಸಹಜ. ಆಶ್ಚರ್ಯವೆಂದರೆ ಇದನ್ನು ಪ್ರಚಲಿತಗೊಳಿಸಿದವ ಥಾಮಸ್ ಆಲ್ವಾ ಎಡಿಸನ್.ದೇಶದ ತುಂಬ ದೂರವಾಣಿ ಕೇಂದ್ರಗಳನ್ನು ಸ್ಥಾಪಿಸುವ ಹೊಣೆಯನ್ನು ಅಮೆರಿಕ ಸರಕಾರ ಎಡಿಸನ್‌ಗೆ ಕೊಟ್ಟಿತ್ತು. ತನ್ನ ಆ ಪ್ರಭಾವವನ್ನು ಉಪಯೋಗಿಸಿ ಎಡಿಸನ್ ಹಲೋ ಬಳಕೆಯನ್ನು ಕಡ್ಡಾಯಗೊಳಿಸಿದನು. ದೂರವಾಣಿ ಹೊತ್ತಿಗೆಗಳಲ್ಲಿ ಹಲೋ ಬಳಕೆಯನ್ನು ನಿಗದಿಸಿದನು.ಅಪರೇಟರುಗಳು ಹಲೋ ಅನ್ನುವುದು ಸಾಮಾನ್ಯವಾಯಿತು. ಅಂತೆಯೆ, ಮುಂಚಿನ ದೂರವಾಣಿ ಆಪರೇಟರುಗಳು "ಹಲೋ ಹುಡುಗಿಯರು" (hello girls)ಎಂದು ಹೆಸರಾಗಿದ್ದರು.೧೮೮೦ರಲ್ಲಿ ನಡೆದ ಟೆಲಿಫ಼ೋನ್ ಕಂಪನಿಗಳ ಮೊದಲ ಸಮಾವೇಶದಲ್ಲಿ ಇನ್ನೊಂದು ಪರಂಪರೆ ಹುಟ್ಟಿಕೊಂಡಿತು. ಪ್ರತಿನಿಧಿಗಳು ಎದೆಗೆ ಅಂಟಿಸಿಕೊಂಡ ಹೆಸರು ಚೀಟಿಗಳ ಮೇಲೆ "ಹಲೋ" ಎನ್ನುವ ಶಬ್ದ ದೊಡ್ಡದಾಗಿ ಇತ್ತು. ಈಗ ಯಾವ ಸಮ್ಮೇಳನ ಸಮಾವೇಶಗಳಲ್ಲು ಕಂಡುಬರುವುದು ಪರಿಚಿತ "ಹಲೋ, ನನ್ನ ಹೆಸರು ..."ದೂರವಾಣಿಯಲ್ಲಿ ಅಲ್ಲದೆ, ಎದುರುಗೊಂಡಾಗ ಕೂಡ, ಕೈ ಕುಲುಕುತ್ತ, ಹಲೋ ಎನ್ನಬಹುದು.ಹಲೋಗೆ ಸಮಾನ ಕನ್ನಡ ಪದ?ಇಂತಹ ಬಹೂಪಯೋಗಿ ಹಲೋಗೆ ಸಮಾನ ಶಬ್ದ ಬೇರೆ ಯಾವ ಭಾಷೆಯಲ್ಲಾದರು ಉಂಟೆ? ಸಂಸ್ಕೃತವೆ ಇದಕ್ಕೆ ಉತ್ತರ. ಅದು "ನಮಃ."ನಮಗೆ ಪರಿಚಿತವಿರುವ ’ನಮಸ್ಕಾರ’, ’ನಮಸ್ತೇ’ ಕೂಡ ’ನಮಃ’ದಿಂದೆ ಬಂದವುಗಳು. ಆದರೆ, ʼನಮಃʼ ದ ವಿಸರ್ಗ, ಕನ್ನಡಕ್ಕೆ ಅಷ್ಟೇ ಅಲ್ಲ, ಯಾವ ಇತರ ಭಾರತೀಯ ಭಾಷೆಗೂ ಒಗ್ಗುವುದಿಲ್ಲ. ಅದಕ್ಕೇ ʼತೇʼ, ʼಕಾರʼ ಗಳನ್ನು ಸೇರಿಸಿಕೊಂಡು ನಮಸ್ತೇ ನಮಸ್ಕಾರ ಅಂತ ಮಾಡಿಕೊಂಡಿರುವುದು.ಸಂಸ್ಕೃತದ ’ನಮಃ’ ಶಬ್ದದ ಒಂದು ರೂಪವಾದ ’ನಮೋ’, ಸಂಧಿ ಸಮಾಸಗಳ ಗೊಡವೆ ಇಲ್ಲದೆ, ಎಲ್ಲಡೆ ಬಳಸಬಹುದಾದ ಸೌಮ್ಯ ಪದ. ʼನಮʼ ದ ಕೊನೆಗೆ ಸೇರಿಕೊಂಡ ದೀರ್ಘ ಸ್ವರ ʼಓʼ (ನಮ+ಓ) ಸಂಬೋಧನಾತ್ಮಕ ನಮ್ರತೆಯ ಸೂಚಕ ಕೂಡ. ನಮೋ - a small word with a big heart - ಚಿಕ್ಕ, ಚೊಕ್ಕ, ಬಹೂಪಯೋಗಿ ಶಬ್ದ. ದೂರವಾಣಿ ಕರೆಯನ್ನು ಉತ್ತರಿಸಬಹುದು, ಎದುರುಗೊಂಡಾಗಲೂ ಹೇಳಬಹುದು. ಸ್ವಲ್ಪ ಎಳೆದು ನಮೋಽಽ ಎಂದರೆ ಸಾಕು, ಎಲ್ಲ ಸದ್ಭಾವಗಳೂ ಹೊಮ್ಮುವವು. ಹೀಗೆ ನಮೋ ಕೃತಕವಲ್ಲ - ಯಾರೂ ಅದನ್ನು ಹುಟ್ಟಿಸಲಿಲ್ಲ. ಇದು ಪುರಾತನ ದೇವವಾಣಿ.ನಮೋ ಎಂದು ಕಾಗದವನ್ನು ಪ್ರಾರಂಭಿಸಬಹುದು. ಮೇಲಾಗಿ, ಪತ್ರ ಮುಗಿಸಲೂ ನಮೋ ಹೇಳಬಹುದು.ಹಲೋ vs ನಮೋಸಂದರ್ಭ : ಬರವಣಿಗೆ ಅಥವಾ ಮಾತುಕತೆ ಆರಂಭದಲ್ಲಿ ಮಾತ್ರ ಹಲೋ ಬಳಸಬಹುದು ; ಆದರೆ "ನಮೋ" ಎಲ್ಲ ಸಂದರ್ಭಗಳಲ್ಲಿ ಹೊಂದಿಕೊಳ್ಳುತ್ತದೆ—ಆರಂಭ, ಅಂತ್ಯ, ವಿದಾಯ, ಸ್ವಾಗತ.ಆರೋಗ್ಯ : ಆರೋಗ್ಯದ ನೋಟದಿಂದಲೂ ʼನಮೋʼದ್ದೆ ಮೇಲುಗೈ! ಅಂದರೆ, ಕೈಜೋಡಿಸಿ ʼನಮೋʼ ಎನ್ನುತ್ತ ದೂರದಿಂದಲೆ ನಮಸ್ಕಾರ ಮಾಡಿದರಾಯ್ತು. ಹೆಲೋ ಹೇಳುತ್ತ ಬೇರೊಬ್ಬರನ್ನು ಮುಟ್ಟಿ ಕೈ ಕುಲುಕುವ ಅವಶ್ಯಕತೆ ಇಲ್ಲ. ವಿಶೇಷವಾಗಿ, ೨೦೨೦ರ ಕೋವಿಡ್‌ ವೈರಾಣು ಪ್ಯಾಂಡೆಮಿಕ್ ಸಮಯದಲ್ಲಿ ಇಂಥ ʼನಮೋ-ನಮಸ್ಕಾರʼ ಸಂಪ್ರದಾಯವನ್ನು ಅಳವಡಿಸಿಕೊಂಡಾಗ, ಮುಜುಗರ ಅಲ್ಲದೆ ಆಪತ್ತಿನಿಂದ ಜನರನ್ನು ಉಳಿಸಿದ್ದು ನಿಜ.ಭಾಷೆ : ಹಲೋ ವಿದೇಶಿ – ನಮೋ ಸ್ವದೇಶಿ. ಮೇಲಾಗಿ, ನಮೋ ಸಾಂಸ್ಕೃತಿಕ ಗುರುತ್ವ ಉಳ್ಳ, ಶುದ್ಧ ಭಾರತೀಯತೆಯ ಸಂಕೇತನೀವು ವಿಚಾರಿಸುತ್ತಿರುವುದು ಸರಿ. ಎದುರುಗೊಂಡಾಗ ಮತ್ತು ಸೇರುವಾಗ, ಕಾಗದ-ಪತ್ರ ಮತ್ತು ಇ-ಮೆಲ್ ಬರೆಯುವಾಗ ಮಾತ್ರವಲ್ಲ, ಬೀಳ್ಕೊಡುವಾಗ ಮತ್ತು ಅಗಲುವಾಗ ಕೂಡ ನಮೋ ಎನ್ನಬಹುದು. ವಿದಾಯ ಹೇಳಲು ಹಲೋ ಎನ್ನಬಹುದೆ? ಪತ್ರದ ಮುಕ್ತಾಯದಲ್ಲಿ ಹಲೋ ಬರೆಯಬಹುದೆ? ಸಾಧ್ಯವಿಲ್ಲ!ಹಲೋ ಕೂಡ ಕನ್ನಡ!ಎಡಿಸನ್‌ಗೆ ಸಂಸ್ಕೃತ ಭಾಷೆ ಪರಿಚಿತವಿತ್ತೇನೊ ಗೊತ್ತಿಲ್ಲ. ಹಲೋ ಹುಟ್ಟಲು ಸಂಸ್ಕೃತದ ’ಹಂಹೋ’, ’ಅಹೋ’, ಅಥವ ಕನ್ನಡದ ʼಎಲವೋʼ, ’ಎಲೋ’, ʼಲೋʼಗಳು ಅಪರೋಕ್ಷವಾಗಿ ಪ್ರಭಾವಿಸಿರಬಹುದೆ?! ದೂರವಾಣಿ ಕರೆ ಉತ್ತರಿಸಿದಾಗ, ಅಚ್ಚ ಕನ್ನಡಿಗನೊಬ್ಬʼಹಹ್ಹ್ʼ ಎಂದು ಗಂಟಲು ಸರಿಪಡಿಸುತ್ತ ʼ(ಎ)ಲೋʼ ಎನ್ನುವ ಚಿತ್ರ ಮೂಡಿ ಸಹಜವಾಗಿ ಕೇಳಿಸುವ ಪದ ʼಹಲೋʼ(ಹೆಲೊ). ಹಾಗೆಂದು, ನಿಜ ಹುಟ್ಟು ಏನೇ ಇರಲಿ, ಹಲೋ ಕೂಡ ಕನ್ನಡ ಪದ ಅನಿಸಿದರೆ ತಪ್ಪಲ್ಲ!ಆದರೂ, ನಮ್ಮ ನೆಲದ "ನಮೋ" ಶಬ್ದವು ವಿನಯ, ಆತ್ಮೀಯತೆ, ಮರ್ಯಾದೆ, ಮತ್ತು ಅತಿಥಿ ಸೌಹಾರ್ದಗಳ ಪ್ರತೀಕ. ಆದ್ದರಿಂದ ’ಹಲೋ’ ಬಳಸುವಲ್ಲೆಲ್ಲ ’ನಮೋ’ ಎನ್ನುವುದು ನಮ್ಮ ಭಾಷೆಗೆ, ಸಂಸ್ಕೃತಿಗೆ, ಹಾಗೂ ಸಂಸ್ಕಾರಕ್ಕೆ ಅತ್ಯಂತ ಔಚಿತ್ಯಪೂರ‍್ಣವಾದದ್ದು. ಕನ್ನಡ ತಾಯಿಯ ಮುಡಿಗೆ ಏರಿಸುವ ಗೌರವ ಪುಷ್ಪವೆ ನಮೋ.‌ಚಿಕ್ಕ ಪದ – ವಿಶಾಲ ಹೃದಯಸಂಸ್ಕೃತದ ನಮೋ ಎಲ್ಲ ಭಾರತೀಯ ಭಾಷೆಗಳಲ್ಲೂ ಹೊಕ್ಕಿದೆ. ವಿನಯ, ಗಾಂಭೀರ್ಯ, ಮರ್ಯಾದೆ, ಆದರ, ಸ್ವಾಗತ ಮುಂತಾದ ಭಾವಗಳನ್ನು ಆಳವಾಗಿ ಬಿಂಬಿಸುವ ವಿಶಾಲ ಹೃದಯದ ಈ ಚಿಕ್ಕ ಪದ ನಮ್ಮ ಸಂಸ್ಕೃತಿಯ ಪ್ರತೀಕ, ಭಾರತೀಯತೆಯ ಸಂಕೇತ. ಆದ್ದರಿಂದ ಹೆಲೋ-ಎಲೋ ಬಿಟ್ಟು ನಮೋ
👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠Subscribe to our newsletterThere are 33 crores gods like Shiva, Vishnu, Ganesha, Parvati, Lakshmi; who should I worship?KannudiAkashat patitam : Baninda BiddaBāninda Bidda (Kannada) bāninda bidda nīrella hariyuvante kaḍalina kaḍege,yā dēvagū itta namana mādēvanaḍigaḷige muḍipu.(As the water that falls from the sky flows towards the ocean,so do salutations all gods reach the feet of the supreme Being, Mahadeva.)Sanskrit original*ākāśāt patitaṁ tōyaṁ yathā gacchati sāgaraṁ, sarva dēva namaskāraḥ kēśavaṁ pratigacchati.All the rain water that falls from the sky eventually reaches the Ocean. Similarly, the prayers to any god, ultimately, reaches the Supreme Being (Vishnu).That is, God is One, God has many names. God is One, God has many forms. God can be worshipped by any name, whether it is Keshav or Ishwara; It can be worshipped in any form - be it a four-armed, holding a conch, a mace, a lotus, a saligram; a trident and damaru holding chandrachuda, jatajuta, Gangadhar, or a linga.Ēkaṁ Sat, Viprā Bahudhā vadanti (r̥gvēda, maṇḍala 1, sūkta 164, mantra 46.) That is, the truth is one though the wise call it by many names. This is a clear declaration of Sanatana Dharma. This is the origin of the traditions of the Sun worshiping, the Shakti worshipping, the Shiva worshipping, the Vishnu worshipping, or the Ganapathi worshipping, etc. The purpose of all is one, the methods are many. The purpose is liberation from the cycle of birth-life-death; the methods of achieving it are many. There are many Saguna-Sakara deities who help one to attain the qualification-less,formless Supreme Truth.This simple verse, religious and democratic in principle, which includes the knowledge of Vedanta, respects diversity, and suitable metaphor, Isn't this a symbol of Indianness?Yours,Viśvēśvara Dīkṣita* Sources:1. Suktisudha, Compiled by R.S. Paliwal2. Subhashitapadyaratnakara, Muniraja Vishalavijaya3. Mahasubhashita Sangraha, vol.4, Ludwik Sternbach--------------------------------ಶಿವ, ವಿಷ್ಣು, ಗಣೇಶ, ಪಾರ್ವತಿ, ಲಕ್ಷ್ಮಿ‌ ಹೀಗೆ ನೂರೆಂಟು ದೇವರುಗಳು ಇದ್ದಾರಲ್ಲ, ಯಾರನ್ನು ಪೂಜಿಸಲಿ? ಕಂನುಡಿ ಆಕಾಶಾತ್ ಪತಿತಂ : ಬಾನಿಂದ ಬಿದ್ದಬಾನಿಂದ ಬಿದ್ದ ನೀರೆಲ್ಲ ಹರಿಯುವಂತೆ ಕಡಲಿನ ಕಡೆಗೆ,ಯಾ ದೇವಗೂ ಇತ್ತ ನಮನ ಮಾದೇವನಡಿಗಳಿಗೆ ಮುಡಿಪು.ಸಂಸ್ಕೃತ ಮೂಲ *ಆಕಾಶಾತ್‌ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ,ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ.ಆಕಾಶದಿಂದ ಬೀಳುವ ಎಲ್ಲ ಮಳೆ ನೀರು, ಕೊನೆಯಲ್ಲಿ ಸಮುದ್ರವನ್ನು ಸೇರುತ್ತದೆ. ಹಾಗೆಯೆ, ಯಾವ ದೇವರಿಗೆ ಮಾಡಿದ ಪೂಜೆ ಕೂಡ, ಕೊನೆಯಲ್ಲಿ, ಆ ಪರಮಾತ್ಮನಿಗೆ (ವಿಷ್ಣುವಿಗೆ) ಸಲ್ಲುತ್ತದೆ. ಅಂದರೆ, ದೇವ ಒಬ್ಬ ನಾಮ ಹಲವು. ದೇವ ಒಬ್ಬ ರೂಪ ಹಲವು. ದೇವರನ್ನು ಯಾವುದೇ ಹೆಸರಿನಲ್ಲಿ, ಕೇಶವ ಆಗಲೀ, ಈಶ್ವರ ಆಗಲೀ - ಭಜಿಸಬಹುದು; ಯಾವುದೇ ರೂಪದಲ್ಲಿ - ಶಂಖ ಚಕ್ರ ಗದಾ ಪದ್ಮಗಳನ್ನು ಹಿಡಿದ ಚತುರ್ಭುಜ‌ನಾಗಲಿ, ಸಾಲಿಗ್ರಾಮವೆ ಆಗಲಿ; ಡಮರು ತ್ರಿಶೂಲಗಳನ್ನು ಹಿಡಿದ ಭಸ್ಮ ಬಳಿದುಕೊಂಡ, ಜಟಾಜೂಟ, ಗಂಗಾಧರ ಚಂದ್ರಚೂಡನಾಗಲಿ, ಅಥವಾ ಲಿಂಗ ರೂಪವೆ ಆಗಲಿ - ಭಜಿಸಬಹುದು. ಏಕಂ ಸತ್‌, ವಿಪ್ರಾ ಬಹುಧಾ ವದಂತಿ (ಋಗ್ವೇದ, ಮಂಡಲ ೧, ಸೂಕ್ತ ೧೬೪, ಮಂತ್ರ ೪೬.) ಅಂದರೆ ಸತ್ಯ ಒಂದೇ, ತಿಳಿದವರು ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ಸನಾತನ ಧರ್ಮದ ಸ್ಪಷ್ಟ ಘೋಷಣೆ. ಸೂರ್ಯನನ್ನು ಪೂಜಿಸುವ ಸೌರ, ದೇವಿಯನ್ನು ಅರಾಧಿಸುವ ಶಾಕ್ತ, ಶಿವನನ್ನು ಭಜಿಸುವ ಶೈವ, ವಿಷ್ಣುವನ್ನು ಅರ್ಚಿಸುವ ವೈಷ್ಣವ, ಗಣಪತಿಯನ್ನು ಗೌರವಿಸುವ ಗಾಣಪತ್ಯ ಇತ್ಯಾದಿ ಸಂಪ್ರದಾಯಗಳ ಮೂಲ ಇದೇ. ಎಲ್ಲವುಗಳ ಉದ್ದೇಶ ಒಂದು, ವಿಧಾನಗಳು ಹಲವು. ಹುಟ್ಟು-ಬದುಕು-ಸಾವುಗಳ ಚಕ್ರದಿಂದ ಬಿಡುಗಡೆಯೆ ಉದ್ದೇಶ; ಅದನ್ನು ಸಾಧಿಸುವ ವಿಧಾನಗಳು ಹಲವು. ನಿರ್ಗುಣ ನಿರಾಕಾರ ಪರಮ ಸತ್ಯವನ್ನು ಸೇರಲು ಸಹಕಾರಿಯಾಗುವ ಸಗುಣ ಸಾಕಾರ ದೇವತೆಗಳು ಹಲವು.ಹೀಗೆ, ವೇದಾಂತದ ತಿಳಿವನ್ನು ಒಳಗೊಂಡ, ವೈವಿಧ್ಯತೆಯನ್ನು ಗೌರವಿಸುವ, ಸೂಕ್ತ ಉಪಮೆಯ ಈ ಸರಳ ಧಾರ್ಮಿಕ ಡೆಮೊಕ್ರಾಟಿಕ್‌ ತತ್ವದ ಶ್ಲೋಕ ಭಾರತೀಯತೆಯ ಪ್ರತೀಕ ಅಲ್ಲವೆ?ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತ.* ಆಕರಗಳು: ೧. ಸೂಕ್ತಿಸುಧಾ, ಸಂ| ಆರ್.ಎಸ್.‌ ಪಾಲಿವಾಲ೨. ಸುಭಾಷಿತಪದ್ಯರತ್ನಾಕರ, ಮುನಿರಾಜ ವಿಶಾಲವಿಜಯ೩. ಮಹಾಸುಭಾಷಿತ ಸಂಗ್ರಹ, ಸಂಪುಟ ೪, ಲುಡ್ವಿಕ್ ಸ್ಟರ್ನ್‌ಬಾಕ್‌ಕನ್ನಡಕಲಿ ಬಿತ್ತರಿಕೆ ಜೂನ್ ೧, ೨೦೨೫ ಆಕಾಶಾತ್‌ ಪತಿತಂ - ಬಾನಿಂದ ಬಿದ್ದವಿಶ್ವೇಶ್ವರ ದೀಕ್ಷಿತ‌ಸಂಪರ್ಕ: ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್
👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠Subscribe to our newsletter[ಈ ಮಹತ್ವದ ಸಂಶೋಧನ ಲೇಖನವನ್ನು ಡಾ. ಶ್ರೀನಿವಾಸ ಹಾವನೂರರು ನನಗೆ ಹಲವಾರು ವರ್ಷಗಳ ಹಿಂದೆಯೆ ಕಳಿಸಿದ್ದರು. ಅಂದು ನಾನು ಹೊರತರುತ್ತಿದ್ದ "ಕನ್ನಡ ಕಲಿ" ಮ್ಯಗ್‌ಝೀನ್‌ನಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ. ಕಡತದಲ್ಲಿ, ಹುದುಗಿ ಹೋಗಿದ್ದ ಈ ಲೇಖನ ಮತ್ತೆ ಕೈಗೆ ಸಿಕ್ಕಿದೆ. ಸತ್ಯನಾರಾಯಣ ಅಂದರೆ ಯಾರು? ಉಳಿದ ನಾರಾಯಣರೆಲ್ಲ ಸುಳ್ಳು ದೇವರುಗಳೆ? ಈತ ವೇದ ಪುರಾಣಗಳಲ್ಲಿ ಇಲ್ಲ! ಹಾಗಾದರೆ ಈತ ಹುಟ್ಟಿಕೊಂಡದ್ದು ಹೇಗೆ? ಯಾವಾಗ? ನಿಜವೋ ಮೂಢ ನಂಬಿಕೆಯೋ, ಒಳ್ಳಯದೋ ಕೆಟ್ಟದ್ದೋ? ಈತ ವಿಷ್ಣುವೆ? ಕೋಟಿ ದೇವ-ದೇವತೆಗಳಲ್ಲಿ ಈತನ ಸ್ಥಾನ ಯಾವುದು? ಈತನ ಜನಪ್ರಿಯತೆಯ ಗುಟ್ಟೇನು? ಹೀಗೆ, ಹಾವನೂರರು ಈ ಲೇಖನದಲ್ಲಿ ಸತ್ಯನಾರಾಯಣನ ಸತ್ಯಾಸತ್ಯತೆಯನ್ನೆ ಕೆದಕಿ ನೋಡಿದ್ದಾರೆ. ಎಲ್ಲಿಯ ವರೆಗೆ ಸತ್ಯನಾರಾಯಣನ ಪೂಜೆ ನಡೆಯುತ್ತದೋ ಅಲ್ಲಿಯ ವರೆಗೆ ಈ ಲೇಖನ ಪ್ರಸ್ತುತವೆ. ಹಾಗಾಗಿ, ಇದನ್ನು ಸಂಕೋಚವಿಲ್ಲದೆ ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. - ವಿಶ್ವೇಶ್ವರ ದೀಕ್ಷಿತ ]ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kannadakali.com/article/culture/satyanarayana.html 0:00 ಆರಂಭ0:10 ಮುಮ್ಮಾತು01:50.0 ದೇವ ದೇವತೆಗಳ ಪೈಪೋಟಿ06:42.5 ದೇವ‌ ಒಬ್ಬ; ನಾಮ ಹಲವು 40:42.5 ಉಪದೇವತೆಗಳಿಗೇ ಉಪಚಾರ04:39.0 ರೇವಾಖಂಡದ ಅರೆ ಸತ್ಯ06:04.0 ಸತ್ಯನಾರಾಯಣನ ಹುಟ್ಟು ಎಂದು?06:34.0 ಪುರಾಣ ಕಾಲವೆ?59:18.5 ಮಧ್ಯ ಕಾಲೀನವೆ?04:42.5 ಇತ್ತೀಚೆ, ಎರಡು ಶತಮಾನಗಳ ಹಿಂದೆಯೆ?10:48.0 ಡಾ| ಡಿ. ಡಿ. ಕೋಸಂಬಿ ಏನು ಹೇಳುತ್ತಾರೆ?54:42.5 ನಿಜವೋ? ಪ್ರಾಮಾಣಿಕವೋ?13:29.0 ಸತ್ಯನಾರಾಯಣ ಪ್ರಸಾದ43:42.5 ಸತ್ಯನಾರಾಯಣ = ವಿಷ್ಣು?45:42.5 ಪೂಜೆಯ ಸಾರ್ವತ್ರಿಕತೆ31:42.5 ಪೂಜೆ: ಅಂದು - ಇಂದು
👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠Subscribe to our newsletter⁠"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಕಂತು ೩ ಉಪಸಂಹಾರಕನ್ನಡಕ್ಕೆ: ನೆನೆ ಗೋವಿಂದನ, ವಿಶ್ವೇಶ್ವರ ದೀಕ್ಷಿತ----ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ:ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ.ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು:⁠https://nivedita2015.wordpress.com/2015/09/25/grammatical-aspects-in-bhaja-govindam-verse-1/⁠⁠https://www.reddit.com/r/sanskrit/comments/5z3e1m/translating_dukrjkarane_any_hints/⁠ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು.ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು?--ಉಪಸಂಹಾರ00:04 ೧ ಭಜ ಗೋವಿಂದಂ ಭಜ ಗೋವಿಂದಂ00:53 ೨ ಮೂಢ ಜಹೀಹಿ ಧನಾಗಮತೃಷ್ಣಾಂ01:45 ೩ ನಾರೀಸ್ತನಭರನಾಭೀದೇಶಂ02:26 ೪ ನಲಿನೀದಲಗತಜಲಮತಿತರಲಂ03:10 ೫ ಯಾವದ್ವಿತ್ತೋಪಾರ್ಜನಸಕ್ತಃ03:55 ೬ ಯಾವತ್‌ ಪವನೋ ನಿವಸತಿ ದೇಹೇ04:40 ೭ ಬಾಲಸ್ತಾವತ್‌ ಕ್ರೀಡಾಸಕ್ತಃ05:25 ೮ ಕಾ ತೇ ಕಾಂತಾ? ಕಸ್ತೇ ಪುತ್ರಃ?06:10 ೯ ಸತ್ಸಂಗತ್ವೇ ನಿಸ್ಸಂಗತ್ವಂ06:49 ೧೦ ವಯಸಿ ಗತೇ ಕಃ ಕಾಮವಿಕಾರಃ?07:29 ೧೧ ಮಾ ಕುರು ಧನ ಜನ ಯೌವನ ಗರ್ವಂ08:09 ೧೨ ದಿನಯಾಮಿನ್ಯೌ, ಸಾಯಂ ಪ್ರಾತಃ08:54 ೧೩ ಕಾ ತೇ ಕಾಂತಾ ಧನಗತಚಿಂತಾ?09:40 ಕೃತಜ್ಞತೆ, ಸಂಪರ್ಕ
👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠Subscribe to our newsletter⁠"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಉಪಸಂಹಾರಕನ್ನಡಕ್ಕೆನೆನೆ ಗೋವಿಂದನವಿಶ್ವೇಶ್ವರ ದೀಕ್ಷಿತ----ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ:ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ.ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು:⁠https://nivedita2015.wordpress.com/2015/09/25/grammatical-aspects-in-bhaja-govindam-verse-1/⁠⁠https://www.reddit.com/r/sanskrit/comments/5z3e1m/translating_dukrjkarane_any_hints/⁠ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು.ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು?--ಚತುರ್ದಶ ಮಂಜರಿಕಾ00:04 ೧ ಭಜ ಗೋವಿಂದಂ ಭಜ ಗೋವಿಂದಂ00:53 ೨ ಮೂಢ ಜಹೀಹಿ ಧನಾಗಮತೃಷ್ಣಾಂ01:45 ೩ ನಾರೀಸ್ತನಭರನಾಭೀದೇಶಂ02:26 ೪ ನಲಿನೀದಲಗತಜಲಮತಿತರಲಂ03:10 ೫ ಯಾವದ್ವಿತ್ತೋಪಾರ್ಜನಸಕ್ತಃ03:55 ೬ ಯಾವತ್‌ ಪವನೋ ನಿವಸತಿ ದೇಹೇ04:40 ೭ ಬಾಲಸ್ತಾವತ್‌ ಕ್ರೀಡಾಸಕ್ತಃ05:25 ೮ ಕಾ ತೇ ಕಾಂತಾ? ಕಸ್ತೇ ಪುತ್ರಃ?06:10 ೯ ಸತ್ಸಂಗತ್ವೇ ನಿಸ್ಸಂಗತ್ವಂ06:49 ೧೦ ವಯಸಿ ಗತೇ ಕಃ ಕಾಮವಿಕಾರಃ?07:29 ೧೧ ಮಾ ಕುರು ಧನ ಜನ ಯೌವನ ಗರ್ವಂ08:09 ೧೨ ದಿನಯಾಮಿನ್ಯೌ, ಸಾಯಂ ಪ್ರಾತಃ08:54 ೧೩ ಕಾ ತೇ ಕಾಂತಾ ಧನಗತಚಿಂತಾ?09:40 ಕೃತಜ್ಞತೆ, ಸಂಪರ್ಕ
👍 Like it? ...... ⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠Subscribe to our newsletter"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಉಪಸಂಹಾರಕನ್ನಡಕ್ಕೆನೆನೆ ಗೋವಿಂದನವಿಶ್ವೇಶ್ವರ ದೀಕ್ಷಿತ----ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ:ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ.ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು:https://nivedita2015.wordpress.com/2015/09/25/grammatical-aspects-in-bhaja-govindam-verse-1/https://www.reddit.com/r/sanskrit/comments/5z3e1m/translating_dukrjkarane_any_hints/ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು.ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು?--ದ್ವಾದಶ ಮಂಜರಿಕಾ00:04 ೧ ಭಜ ಗೋವಿಂದಂ ಭಜ ಗೋವಿಂದಂ00:53 ೨ ಮೂಢ ಜಹೀಹಿ ಧನಾಗಮತೃಷ್ಣಾಂ01:45 ೩ ನಾರೀಸ್ತನಭರನಾಭೀದೇಶಂ02:26 ೪ ನಲಿನೀದಲಗತಜಲಮತಿತರಲಂ03:10 ೫ ಯಾವದ್ವಿತ್ತೋಪಾರ್ಜನಸಕ್ತಃ03:55 ೬ ಯಾವತ್‌ ಪವನೋ ನಿವಸತಿ ದೇಹೇ04:40 ೭ ಬಾಲಸ್ತಾವತ್‌ ಕ್ರೀಡಾಸಕ್ತಃ05:25 ೮ ಕಾ ತೇ ಕಾಂತಾ? ಕಸ್ತೇ ಪುತ್ರಃ?06:10 ೯ ಸತ್ಸಂಗತ್ವೇ ನಿಸ್ಸಂಗತ್ವಂ06:49 ೧೦ ವಯಸಿ ಗತೇ ಕಃ ಕಾಮವಿಕಾರಃ?07:29 ೧೧ ಮಾ ಕುರು ಧನ ಜನ ಯೌವನ ಗರ್ವಂ08:09 ೧೨ ದಿನಯಾಮಿನ್ಯೌ, ಸಾಯಂ ಪ್ರಾತಃ08:54 ೧೩ ಕಾ ತೇ ಕಾಂತಾ ಧನಗತಚಿಂತಾ?09:40 ಕೃತಜ್ಞತೆ, ಸಂಪರ್ಕ
ಒಳ್ಳಿದರು-ಕೆಟ್ಟವರು 👍 Like it? ...... ⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠Subscribe to our newsletter The good and the bad Noonam Dugdhabdhimanthoththa - Wimou Sujanadurjanou; Kintvindoh sodarah purvah Kalakutasya Chetarah! Subhashitaratnabhandagara It's a gem in the Subhashitaratnabhandagara. Where in the world did good and evil come from? How are the good and the bad born? There are good and bad siblings in the same family. Who has not heard the story of the Kaurava Pandavas. How did Prahlada, the son of the demon Hiranyakashyapu, and vibhishana, the brother of Ravana, become good? The Yadavas, the relatives of Lord Krishna, got destroyed by fighting among themselves! Genes are not the cause; They are the the same! It is not due to the environment; That too is the same. Culture and Rituals are all the same. So it is impossible to explain why. You all know the story of Samudramantha, Churning of the Ocean. Devas and Danavas -sons of two sisters, remember- gathered for amrita, tied Mandara Parvata using Vasuki as a rope, and churned the ocean of milk. Then came first Kalakuta, Halahala, terrible poison. Then came the moon. Chandra Shitanshu, the king of stars, patron of medicines, Radiant of Milky Light, best friend of lovers, chakkuli mama of children, and calendar keeper of our festivals! Born together, Halahala is wicked while Chandappa is needed by all. What does this have to do with the good and the bad in us? Behold, the poet imagines: The good and the bad Born in Hal Kadal Kadeye; Anna Chandappa for Saralari, Kudos to the villains! The poet says that we too were born in this sea. But, for the wicked, the wicked Kalakoota is their elder brother, and for the the good, Chandrama is their elder brother! That is how, some of us are good and some are bad! Be that as it may. Since everyone's birth culture is the same, the situation is not hopeless. That means change is possible. We have wisdom and discernment. So, whether we become good or bad is in our hands. The choice is ours and yours. The good and the bad both were Born when the Milky Ocean was churned; For the good, Chandappa is their elder brother, The wicked have Kalakootappa as their edler brother! Man, you choose! Yours Visvesvara Dikshita The Good and the Bad Kannada Kali Casting Vijayadashami, Oct 12, 2024 _____ ಚೆನ್ನುಡಿ ಒಳ್ಳಿದರು ಕೆಟ್ಟವರು ನೂನಂ ದುಗ್ಧಾಬ್ಧಿಮಂಥೋತ್ಥಾ - ವಿಮೌ ಸುಜನದುರ್ಜನೌ; ಕಿಂತ್ವಿಂದೋಃ ಸೋದರಃ ಪೂರ್ವಃ ಕಾಲಕೂಟಸ್ಯ ಚೇತರಃ ! ಸುಭಾಷಿತರತ್ನಭಾಂಡಾಗಾರ ಇದು ಸುಭಾಷಿತ ಭಾಂಡಾಗಾರದಲ್ಲಿನ ಒಂದು ಅಣಿಮುತ್ತು. ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲಿಂದ ಬಂದವು? ಒಳ್ಳೆಯವರು ಕೆಟ್ಟವರು ಹುಟ್ಟಿದ್ದಾದರೂ ಹೇಗೆ? ಒಂದೇ ಮನೆತನದಲ್ಲಿ ಅಣ್ಣತಮ್ಮಂದಿರಲ್ಲೆ ಒಳ್ಳೆಯವರೂ ಕೆಟ್ಟವರೂ ಇರುತ್ತಾರೆ. ಕೌರವ ಪಾಂಡವರ ಕತೆ ಯಾರು ಕೇಳಿಲ್ಲ. ರಾಕ್ಷಸ ಹಿರಣ್ಯಕಷ್ಯಪುವಿನ ಮಗ ಪ್ರಹ್ಲಾದ‌, ರಾವಣನ ತಮ್ಮ ವಿಭೀಷಣ ಹೇಗೆ ಒಳ್ಳೆಯವರಾದರು? ಶ್ರೀ ಕೃಷ್ಣನ ದಾಯಾದಿಗಳಾದ ಯಾದವರು ತಮ್ಮ ತಮ್ಮಲ್ಲೆ ಹೊಡೆದಾಡಿಕೊಂಡು ನಿರ್ನಾಮವಾದರಲ್ಲ! ವಂಶವಾಹಿನಿ Geneಗಳು ಕಾರಣ ಎನ್ನಲಾಗುವುದಿಲ್ಲ; ಎಲ್ಲ ಒಂದೇ! ಬೆಳೆದ ವಾತಾವರಣ ಕಾರಣ ಎನ್ನಲಾಗುವುದಿಲ್ಲ; ಅದೂ ಒಂದೇ. ಸಂಸ್ಕಾರ ಸಂಸ್ಕೃತಿ ಎಲ್ಲವೂ ಒಂದೇ.‌ ಆದ್ದರಿಂದ ಯಾಕೆ ಹೀಗೆ ಎಂದು ವಿವರಿಸುವುದು ಅಸಾಧ್ಯ. ಸಮುದ್ರಮಂಥನ ಕತೆ ನಿಮಗೆಲ್ಲ ಗೊತ್ತಿದೆ. ದೇವದಾನವರು, ಇವರೂ ಅಕ್ಕ ತಂಗಿಯರ ಮಕ್ಕಳೇ, ನೆನಪಿಸಿಕೊಳ್ಳಿ, ಅಮೃತಕ್ಕೋಸ್ಕರ ಕೂಡಿಕೊಂಡು ಮಂದರ ಪರ್ವತವನ್ನು ಕಡೆಗೋಲಾಗಿ ಮತ್ತು ವಾಸುಕಿಯನ್ನು ಹಗ್ಗವನ್ನಾಗಿ ಬಳಸಿಕೊಂಡು ಕ್ಷೀರ ಸುಮುದ್ರವನ್ನು ಕಡೆದರು. ಆಗ ಮೊದಲು ಬಂದದ್ದೇ ಕಾಲಕೂಟ, ಹಾಲಾಹಲ, ಕೆಟ್ಟ ವಿಷ. ನಂತರ ಚಂದ್ರ ಬಂದ. ಚಂದ್ರನೋ ಶೀತಾಂಶು, ತಾರೆಗಳ ರಾಜ, ಓಷಧಿಗಳ ಪೋಷಕ, ಹಾಲ್‌ಬೆಳಕಿನ ಹೊಳಪ, ‌ಪ್ರೇಮಿಗಳ ಆಪ್ತಮಿತ್ರ, ಮಕ್ಕಳಿಗೆ ಚಕ್ಕುಲಿ ಮಾಮ, ನಮ್ಮ ಹಬ್ಬಹುಣ್ಣಿಮೆಗಳ calendar keeper ಕೂಡ! ಒಂದೇ ಹುಟ್ಟು, ಕಾಲಕೂಟ ಕೆಟ್ಟದ್ದಾದರೆ, ಚಂದಪ್ಪ ಎಲ್ಲರಿಗೂ ಬೇಕಾದವನಾದ. ಇದಕ್ಕೂ ಮತ್ತೂ ನಮ್ಮಲ್ಲಿನ ಒಳ್ಳೆ-ಕೆಟ್ಟವರಿಗೂ ಏನು ಸಂಬಂಧ? ಇದೋ ನೋಡಿ, ಕವಿ ಕಲ್ಪನೆ: ಒಳ್ಳಿದರು ಕೆಟ್ಟವರು ಕೂಡೆ ಹುಟ್ಟಿದರು ಹಾಲ್‌ ಕಡಲ ಕಡೆಯೆ; ಸರಳರಿಗೆ ಅಣ್ಣ ಚಂದಪ್ಪ, ದುರುಳರಿಗೆ ಹಾಲಾಹಲಪ್ಪ! ನಾವು ಕೂಡ ಹುಟ್ಟಿದ್ದು ಈ ಸಮುದ್ರದಲ್ಲೆ ಎನ್ನುತ್ತಾನೆ ಕವಿ. ಆದರೆ, ದುರುಳರಿಗೆ ದುಷ್ಟರಿಗೆ ಹಾಲಹಲವೆ ಸೋದರ , ಸರಳರಿಗೆ ಶಿಷ್ಟರಿಗೆ ಚಂದ್ರಮನೆ ಅಣ್ಣ ಅಂತೆ! ಅದಕ್ಕೆ .... Read More ಒಳ್ಳಿದರು-ಕೆಟ್ಟವರು ಕನ್ನಡ ಕಲಿ ಬಿತ್ತರಿಕೆ ವಿಜಯದಶಮಿ, ಅಕ್ಟೋಬರ ೧೨, ೨೦೨೪
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠⁠📞 ⁠⁠⁠Subscribe to WhatsApp ಕನ್ನಡ ಕಂಪು⁠ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಹುದು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ⁠ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನ⁠ವನ್ನು ಓದಿ. [https://www.npr.org/sections/npr-history-dept/2015/03/03/389865887/the-secret-history-of-knock-knock-jokes]ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "⁠knock-knock Jokes" ಅಂತ ಗೂಗಲಿಸದರೆ ⁠ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.ಇಲ್ಲಿನ ಕೆಲವು ಜೋಕುಗಳು, ⁠ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬,⁠ ರಲ್ಲಿ ಪ್ರಕಟವಾಗಿದ್ದವು.[https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-2006] ಪುಟ ೫ರಲ್ಲಿ ಪ್ರಕಟವಾಗಿದ್ದವು-------- ಕಂತು ೨ --------ಟಕ-ಟಕ, ಟಕ್ ಯಾರು ಅಲ್ಲಿ?ದ್ರಾಕ್ಷಿ. ಯಾರು ದ್ರಾಕ್ಷಿ?ಕೊಳ್ಳಾಗಿನ ರುದ್ರಾಕ್ಷಿ ಸರ!‌ಟಕ-ಟಕ, ಟಕ್ ಯಾರು ಅದು?ಮಾರಿ. ಯಾ ಮಾರಿ?ಸೈಬರ್‌ ಕಳ್ಳಿ!ಟಕ-ಟಕ, ಟಕ್ ಯಾರು ಅಲ್ಲಿ?ಒತ್ತು. ಯಾ ಒತ್ತು?ಯಾವತ್ತು ಆದರೆ ಏನು? ಇವತ್ತೇ!ಟಕ-ಟಕ, ಟಕ್ ಯಾರು ಅದು?ದನ. ಯಾರೋ ದನ?ಅಳುತ್ತ ಕೂತಿರೋ ರೋದನ!ಟಕ-ಟಕ, ಟಕ್ ಯಾರು ಅದು?ಮಿನಿ. ಯಾ ಮಿನಿ?ರಾತ್ರಿ ಬರುವವಳು!ಟಕ-ಟಕ, ಟಕ್ ಯಾರು ಅಲ್ಲಿ?ಮತ್ತ. ಮತ್ ಯಾರು?ಮತ್ಯಾರು? ನಾನೇ!!ಟಕ-ಟಕ, ಟಕ್ ಯಾರು ಅದು?ಹತ್ತ. ಹತ್ ಯಾರು?ಹೌದು, ಹತ್ಯಾರು, ಇರೀತೀನಿ ಹುಷಾರು!!ಟಕ-ಟಕ, ಟಕ್ ಯಾರು ಅದು?ನಾ. ನಾ ಯಾರು?ನಾಯರು, ನಾ ಗೋವಿಂದ ನಾಯರು, ನೀ ಯಾರು?---ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೨೭, ೨೦೨೪Kannada Kali Bittarike September 27, 2024ಟಕಟಕ ಜೋಕು : ಇನ್ನೂ ಬೇಕುನಾಕ್-ನಾಕು ಜೋಕು : ಬೇಕೇ ಬೇಕುಕಂತು ೧ ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠📞 ⁠⁠Subscribe to WhatsApp ಕನ್ನಡ ಕಂಪುಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಹುದು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನವನ್ನು ಓದಿ. [https://www.npr.org/sections/npr-history-dept/2015/03/03/389865887/the-secret-history-of-knock-knock-jokes]ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "knock-knock Jokes" ಅಂತ ಗೂಗಲಿಸದರೆ ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.ಇಲ್ಲಿನ ಕೆಲವು ಜೋಕುಗಳು, ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬, ರಲ್ಲಿ ಪ್ರಕಟವಾಗಿದ್ದವು.[https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-2006] ಪುಟ ೫ರಲ್ಲಿ ಪ್ರಕಟವಾಗಿದ್ದವು------- ಕಂತು ೧ -------ಟಕ-ಟಕ, ಟಕ್ ಯಾರು ಅಲ್ಲಿ?ಮಂಗಲಾ. ಮಂಗಲಾ ಯಾರು?ಲಾಯರು ನಾನು, ಮಂಗ ನೀನು. ಲಗೂನ ತಗೀ ಬಾಗಿಲ!ಟಕ-ಟಕ, ಟಕ್ ಯಾರು ಅದು?ಸುಮ ನಾ ಸುಮನಾ ಯಾರು?ಸುಮ ನಾ; ನೀ ಯಾರು ನನಗೇನು ಗೊತ್ತು?ಟಕ-ಟಕ, ಟಕ್ ಯಾರು ಅಲ್ಲಿ?ನಾಥ. ನಾತ ಯಾರು?ತಯಾರು ಇದ್ರೆ ಬಾಗಿಲ ತೆಗೆದು ಮೂಸು.ಟಕ-ಟಕ, ಟಕ್ ಯಾರು ಅದು?ಉಪ್ಪು ಕಾರ. ಉಪ್ಪು ಕಾರ ಯಾರು?ಉಪಕಾರ ಮಾಡಿ ಬಾಗಿಲ ತೆಗೀಯೆ ಮಾರಾಯತಿ!ಟಕ-ಟಕ, ಟಕ್ ಯಾರು ಅದು?ಮಾಲು. ಯಾರು ಮಾಲು?ತಲೆಗೆ ಸುತ್ತಿಕೊಳ್ಳುವುದು.ಟಕ-ಟಕ, ಟಕ್ ಯಾರು ಅಲ್ಲಿ?ಕುಮಾಯಿ. ಯಾರು ಕುಮಾಯಿ?ಪಂಢರಪುರದ ವಿಠ್ಠಲ ರುಕುಮಾಯಿ!ಟಕ-ಟಕ, ಟಕ್ ಯಾರು ಅಲ್ಲಿ?ಪೈ. ಯಾರು ಪೈ?ಲಕ ಲಕ ಹೊಳೀತಿರೋ ಬೆಳ್ಳೀ ಪೈ.ಟಕ-ಟಕ, ಟಕ್ ಯಾರು ಅದು?ಜಿನ. ಯಾರು ಜಿನ?ಬರಬಾರದ ರೋಗ ರುಜಿನ.-------- ಕಂತು ೨ --------ಟಕ-ಟಕ, ಟಕ್ ಯಾರು ಅಲ್ಲಿ?ದ್ರಾಕ್ಷಿ. ಯಾರು ದ್ರಾಕ್ಷಿ?ಕೊಳ್ಳಾಗಿನ ರುದ್ರಾಕ್ಷಿ ಸರ!‌ಟಕ-ಟಕ, ಟಕ್ ಯಾರು ಅದು?ಮಾರಿ. ಯಾ ಮಾರಿ?ಸೈಬರ್‌ ಕಳ್ಳಿ!ಟಕ-ಟಕ, ಟಕ್ ಯಾರು ಅಲ್ಲಿ?ಒತ್ತು. ಯಾ ಒತ್ತು?ಯಾವತ್ತು ಆದರೆ ಏನು? ಇವತ್ತೇ!ಟಕ-ಟಕ, ಟಕ್ ಯಾರು ಅದು?ದನ. ಯಾರೋ ದನ?ಅಳುತ್ತ ಕೂತಿರೋ ರೋದನ!ಟಕ-ಟಕ, ಟಕ್ ಯಾರು ಅದು?ಮಿನಿ. ಯಾ ಮಿನಿ?ರಾತ್ರಿ ಬರುವವಳು!ಟಕ-ಟಕ, ಟಕ್ ಯಾರು ಅಲ್ಲಿ?ಮತ್ತ. ಮತ್ ಯಾರು?ಮತ್ಯಾರು? ನಾನೇ!!ಟಕ-ಟಕ, ಟಕ್ ಯಾರು ಅದು?ಹತ್ತ. ಹತ್ ಯಾರು?ಹೌದು, ಹತ್ಯಾರು, ಇರೀತೀನಿ ಹುಷಾರು!!ಟಕ-ಟಕ, ಟಕ್ ಯಾರು ಅದು?ನಾ. ನಾ ಯಾರು?ನಾಯರು, ನಾ ಗೋವಿಂದ ನಾಯರು, ನೀ ಯಾರು?---ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೨೭, ೨೦೨೪Kannada Kali Bittarike September 27, 2024ಟಕಟಕ ಜೋಕು : ಇನ್ನೂ ಬೇಕುನಾಕ್-ನಾಕು ಜೋಕು : ಬೇಕೇ ಬೇಕುಕಂತು ೧ ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ
👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠📞 ⁠Subscribe to WhatsApp ಕನ್ನಡ ಕಂಪು[ ಜುಲೈ ೨೨, ೧೯೩೮ರಂದು ಜನಿಸಿ, ಅದ್ವಿತೀಯ ಕಾದಂಬರಿಕಾರ, ನಾಟಕಕಾರ, ಕವಿ, ಭಾಷಾತಜ್ಞ, ಶಿಕ್ಷಕ ಮತ್ತು ಕೃಷಿಕ ಆಗಿದ್ದ , ಕಾಸರಗೋಡಿನ ಕನ್ನಡಿಗ ಕೆ.ಟಿ.ಗಟ್ಟಿ ಅವರು ಫೆಬ್ರುವರಿ ೧೯, ೨೦೨೪ರಂದು ತಮ್ಮ ೮೫ನೆ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನಿಧನರಾದರು. ಈ ಲೇಖನ ಜೂನ್ ೨೦೦೮ರ‌ ಕನ್ನಡ ಕಲಿ ಮ್ಯಗ್‌ಝೀನ್‌ನಲ್ಲಿ ಪ್ರಕಟವಾಗಿತ್ತು. ಕನ್ನಡ ಕಲಿಗಳಿಗೆ ಇದು ಇಂದೂ ಮಾರ್ಗದರ್ಶಿಯಾಗಿದೆ. -ಸಂ]ಭಾಷೆ ಕಲಿಸಬೇಕಾದ್ದು ಹೇಗೆHow a Language Ought to be Taughtಬರೆಹ: ಕೆ. ಟಿ. ಗಟ್ಟಿಓದು: ವಿಶ್ವೇಶ್ವರ ದೀಕ್ಷಿತಸಂಗೀತ: ಆಕಾಶ ದೀಕ್ಷಿತ[ಕೆ.ಟಿ. ಗಟ್ಟಿ ಅವರು ಈ ಲೇಖನದಲ್ಲಿ ಹೇಳುವ ಮಾತುಗಳು, ಕರ್ನಾಟಕದಲ್ಲಿ ಕನ್ನಡ ಮಕ್ಕಳಿಗೆ ಇಂಗ್ಲೀಷ್‌ ಕಲಿಸುವ ಕುರಿತು ಹೇಳಿದಂತೆ ಅನಿಸಬಹುದು. ಆದರೆ ಅವೆಲ್ಲ ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುದಕ್ಕೂ ಸಂಪೂರ್ಣವಾಗಿ ಅನ್ವಯಿಸುತ್ತವೆ ಎನ್ನುವುದನ್ನು ನಾವು ವಿಶೇಷವಾಗಿ ಗಮನದಲ್ಲಿ ಇಡಬೇಕು - ಸಂ]ಭಾಷೆಯ ಆರಂಭ : ಮಾತುಕನ್ನಡದ ತಾಯಿ ತೊಟ್ಟಿಲ ಮಗುವಿಗೆ ಅಆಇಈ ಎಂದು ಜೋಗುಳ ಹಾಡುವುದಿಲ್ಲ. ಬ್ರಿಟಿಷ್ ತಾಯಿ ಎಬಿಸಿಡಿ ಎಂದು ಜೋಗುಳ ಹಾಡುವುದಿಲ್ಲ.ಭಾಷೆ ಮಾತಿನಿಂದ ಆರಂಭವಾಗುತ್ತದೆ. ‘ಅಕ್ಷರ ಓದುವಿಕೆ ಮತ್ತು ಬರೆಯುವಿಕೆ’ಯಿಂದ ಅಲ್ಲ. ಶಾಲೆಯನ್ನು ಪ್ರವೇಶಿಸುವ ಮೊದಲೇ ಕನ್ನಡದ ಮಗು ಚೆನ್ನಾಗಿ ಕನ್ನಡವನ್ನು ಆಡಲು ಕಲಿತುಕೊಂಡಿರುತ್ತದೆ. ಅದಕ್ಕೆ ‘ಕಷ್ಟ ಶಬ್ದ’ ‘ಸುಲಭ ಶಬ್ದ’ ಎಂಬ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಅರ್ಥವಾಗುವ ಮತ್ತು ಉಚ್ಚರಿಸಲಾಗುವ ಎಲ್ಲಾ ಶಬ್ದಗಳೂ ಸುಲಭ ಶಬ್ದಗಳೇ. ಮನೆಯಲ್ಲಿ ಅಪ್ಪ ಅಮ್ಮ ಅಕ್ಕ ಅಣ್ಣ ಆಡಿದ ಮಾತುಗಳೆಲ್ಲವನ್ನೂ ಅದು ಆಡುತ್ತದೆ. ಅವೆಲ್ಲವೂ ಮಗುವಿಗೆ ಅರ್ಥವಾಗುವ ವಾಕ್ಯಗಳೇ.ಮೊದಲ ಪಠ್ಯಪುಸ್ತಕ ಹೇಗಿರಬೇಕುಮಗುವಿನ ಮೊದಲನೆಯ ಪಠ್ಯಪುಸ್ತಕದ ಪಾಠಗಳಲ್ಲಿ ಆ ವಾಕ್ಯಗಳು ಮತ್ತು ಅಂಥ ವಾಕ್ಯಗಳೇ ಇರಬೇಕು. ‘ಅವನು ಬಸವ ಇವಳು ಕನಕ’ ಇತ್ಯಾದಿ ಅರ್ಥಹೀನ ವಾಕ್ಯಗಳು ಇರಬಾರದು. ಮನುಷ್ಯ (ಮಗು) ಭಾಷೆಯನ್ನು ಮಾತಾಡಲು ಆರಂಭಿಸುವುದು ಅಆಇಈ ಬರುವ ಶಬ್ದಗಳಿಂದಲ್ಲ. ತಾನು ಅನುಕರಣೆಯಿಂದ ಪಡೆದುಕೊಂಡ ತನಗೆ ಅರ್ಥವಾಗುವಂಥ ಮಾತುಗಳಿಂದ ಮಾತು ಆರಂಭವಾಗುತ್ತದೆ. ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಮಗು ಭಾಷಾರ್ಜನೆ ಮಾಡುವುದು ಕೂಡ ಹೀಗೆಯೇ. ಅಕ್ಷರಾಭ್ಯಾಸವಿಲ್ಲದ ಜನರು ಕೂಡ ಚಲೋದಾಗಿ ಮಾತಾಡುವುದಿಲ್ಲವೆ? ಅವರು ಹೇಗೆ ಭಾಷೆಯನ್ನು ಕಲಿತುಕೊಳ್ಳುತ್ತಾರೆ? ಅದೇ ರೀತಿ ಮಗು ಕೂಡ ಐದನೇ ವರ್ಷ ಪ್ರಾಯಕ್ಕೆ ಬಂದಾಗ ಒಂದಷ್ಟು ಭಾಷೆಯನ್ನು ಪಡೆದುಕೊಂಡಿರುತ್ತದೆ. ಅಂಥ ಮಗುವಿಗೆ ಅರಸ, ಇಣಚಿ ಮುಂತಾದ ಶಬ್ದಗಳಿಂದ, ಕ್ರಿಯಾಪದವಿಲ್ಲದ ವಾಕ್ಯಗಳಿಂದ ಭಾಷಾಭ್ಯಾಸ ಆರಂಭಿಸಬೇಕಾದ ಅಗತ್ಯವೇನು? ಮಾತು-ಗರುತು-ಓದು-ಬರೆ ವಿಧಾನನಾವು ಇಂಗ್ಲಿಷ್ ಕಲಿಸುವಲ್ಲಿ ಕೂಡ ಈ ರೀತಿ ನೈಸರ್ಗಿಕವಾಗಿ ಮಗು ತನ್ನ ಮಾತೃಭಾಷೆಯನ್ನು ಹೇಗೆ ಪಡೆಯುತ್ತದೆಯೋ ಹಾಗೆ ಪಡೆಯುವ ವಿಧಾನದಲ್ಲಿಯೇ ಕಲಿಸಬೇಕು. ಕನ್ನಡ ಮಗುವಿನ ಮಾತೃಭಾಷೆಯಾದ್ದರಿಂದ, ಒಂದನೇ ತರಗತಿಯಲ್ಲೇ ಓದು ಮತ್ತು ಬರೆಯುವಿಕೆ ವಾಕ್ಯಗಳಿಂದಲೇ ಆರಂಭಿಸಬಹುದು. ಮಗು ಅಕ್ಷರಗಳನ್ನು ನೋಡಿ ಶಬ್ದಗಳನ್ನು ಗುರುತಿಸಿಕೊಂಡು ಚೆನ್ನಾಗಿ ಓದಲು ಕಲಿತುಕೊಂಡ ಬಳಿಕ, ಶಬ್ದಗಳನ್ನು ಬರೆದು ಓದಿ ತೋರಿಸಬೇಕು. ಈ ಓದಿನ ಮೂಲಕ ಮಗುವಿಗೆ ಎಲ್ಲಾ ಅಕ್ಷರ ಪರಿಚಯ, ಅವುಗಳು ಮಾತಿನಲ್ಲಿ ಹೇಗೆ ಬರುತ್ತವೆಯೋ ಹಾಗೆ ಪರಿಪೂರ್ಣವಾಗಿ ಆಗುತ್ತದೆ. ಅನಂತರ ಶಬ್ದಗಳನ್ನು ಓದುತ್ತಾ ಇಡೀ ವಾಕ್ಯವನ್ನು ಬರೆಯಲು ಕಲಿಸಬೇಕು. ಹೀಗೆ ಕಲಿಸಿದರೆ, ಪರಂಪರಾಗತ ಅಆಇಈ ಅಕ್ಷರಗಳ ಮೂಲಕ ಕಲಿಯುವುದಕ್ಕಿಂತ ಚಲೋದಾಗಿ, ಸ್ಪಷ್ಟವಾಗಿ, ಅರ್ಥಪೂರ್ಣವಾಗಿ ಮತ್ತು ಆಶ್ಚರ್ಯಕರವೆನಿಸುವಷ್ಟು ವೇಗವಾಗಿ ಮಗು ಓದಲು ಬರೆಯಲು ಕಲಿತುಬಿಡುತ್ತದೆ. ಒಂದನೆಯ ದರ್ಜೆಯ ಪುಸ್ತಕ ಮೂರು ತಿಂಗಳಲ್ಲಿ ಮುಗಿದು ಹೋಗುತ್ತದೆ. ಮಗುವಿಗೆ ಓದಲು ಅಧ್ಯಾಪಕ ಮತ್ತು ತಾಯಿತಂದೆ ಬೇರೆ ಪುಸ್ತಕ ಹುಡುಕಬೇಕಾಗುತ್ತದೆ!‘ಅ’ದಿಂದ ‘ಹ’ದ ವರೆಗೆ ಹೇಳಿಸುವುದು, ಓದಿಸುವುದು, ಬರೆಸುವುದು ಮಗುವಿಗೆ ನರಕ; ಮಗುವಿನ ಅಮೂಲ್ಯವಾದ ಕಲಿಯುವ ಸಮಯ ಪೋಲು! ಇಂಗ್ಲಿಷ್ ನಮ್ಮ ಮಗುವಿನ ಮಾತೃಭಾಷೆಯಲ್ಲವಾದ್ದರಿಂದ ಅದಕ್ಕೆ ಮೊದಲು ಮಾತಿನ ಮೂಲಕ ಇಂಗ್ಲಿಷ್ ಭಾಷೆಯ ಪರಿಚಯ ಆಗಬೇಕು. ಅಂದರೆ ಇಂಗ್ಲಿಷ್ ಕೂಡ ತನ್ನ ಮಾತೃಭಾಷೆಯಂತೆಯೇ ಒಂದು ಭಾಷೆ ಎಂಬ ಭಾವನೆ ಮಗುವಿಗೆ ಆಗಬೇಕು. ಅದಕ್ಕಾಗಿ ಇಂಗ್ಲಿಷಿನಲ್ಲಿ ಒಂದು ಅಥವಾ ಎರಡು ವರ್ಷ ಸಂಭಾಷಣೆ ಮಾತ್ರ ನಡೆಯಬೇಕು. ಮಕ್ಕಳನ್ನು ತರಗತಿ ಕೋಣೆಯಿಂದ ಹೊರಗೆ ಕರೆದುಕೊಂಡು ಹೋಗಿ ನಿಸರ್ಗದಲ್ಲಿರುವ ನೂರಾರು ವಸ್ತುಗಳನ್ನು ತೋರಿಸಿ ಅವುಗಳನ್ನು ಹೆಸರಿಸಿ ಅವುಗಳ ಬಗ್ಗೆ ಮಾತಾಡಬೇಕು.ಕಲಿಯಲು ಪರಿಸರ ಬೇಕುನಗರದ ಮುಕ್ಕಾಲು ಪಾಲು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ‘ಆಂಗ್ಲ’ ಪರಿಸರವೂ ಇಲ್ಲ, ಭಾರತೀಯ ಪರಿಸರವೂ ಇಲ್ಲ. ಆಕಾಶ ಕೂಡ ಕಾಣಿಸದ ಕೋಣೆಯಲ್ಲಿ ...__________ ಪೂರ್ತಿ ಲೇಖನ ಇಲ್ಲಿದೆ: https://kannadakali.com/article/language/onteachinglanguage.html----ಕನ್ನಡ ಕಲಿ ಬಿತ್ತರಿಕೆ, ಕನ್ನಡದ ಗುಟ್ಟು, ಅಗಸ್ಟ್‌ ೨೩, ೨೦೨೪How a Language Ought to be Taught,ಲೇಖನ: ಕೆಟಿ ಗಟ್ಟಿ:,ಓದು: ವಿಶ್ವೇಶ್ವರ ದೀಕ್ಷಿತ,ಸಂಗೀತ: ಆಕಾಶ ದೀಕ್ಷಿತ,ಪಠ್ಯದಿಂದ ಧ್ವನಿಗೆ, ನೀರಜಾ ಗೂಗ್ಲೇ ಮತ್ತು ನಾನು, ಸಪ್ನಾ ಗೂಗ್ಲೇ,. ಸಂಪರ್ಕ, ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್,.ಬಿತ್ತರಿಕೆ 15, ಕಾಲ 2024, ಸಂಖ್ಯೆ 3, ಬಿಕಾಸ 15 2024 3. Episode 15, Year 2024, Number 3, Bikaasa 15-2024-3.
👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠Subscribe to our newsletter📞 Subscribe to WhatsApp ಕನ್ನಡ ಕಂಪುಮಹಾತ್ಮ ಗಾಂಧಿ - ಕಂತು ೩ : ಒಪ್ಪು - ತಪ್ಪು : ನಿಮ್ಮ ಏನಂತಿಗಳುಗಾಂಧಿ ಮಹಾತ್ಮನೆ? ಗಾಂಧಿ ಮಾಡಿದ್ದೆಲ್ಲ ಸರಿಯೆ? ನಾವು ಎಡವಿದೆವೆ? ಲಾಭ ಆದದ್ದು ಅಗುತ್ತಿರುವುದು ಯಾರಿಗೆ?ಗಾಂಧಿ ಲೇಖನಕ್ಕೆ ಮತ್ತು ಗಾಂಧಿಯ ಬಗ್ಗೆ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ವಿಚಾರಪೂರ್ಣ ಏನಂತಿಗಳನ್ನು ನಿಖರ ನುಡಿಗಳಲ್ಲಿ ಹಂಚಿಕೊಂಡ ಕೆ.ಪಿ. ರವಿಕುಮಾರ್, ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ, ಶ್ರೀನಿವಾಸ ಭಟ್, ಶ್ರೀನಿವಾಸ ಹೆಬ್ಬಾಳ, ಕೆ.ಟಿ. ಶೆಟ್ಟಿ, ಸ್ಮಿತಾ,ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಿದ ಎಲ್ಲ ಕನ್ನಡ ಕಲಿ ಓದುಗರಿಗೆ ನಮನಗಳು.೧. ಸತ್ಯಾಸತ್ಯತೆಗಾಂಧಿ ಲೇಖನಕ್ಕೆ ಪ್ರತಿಕ್ರಿಯೆಯಿಸುತ್ತ "ಮಾಹಿತಿ ಪೂರ್ಣ ಲೇಖನ, ಒಳ್ಳೆಯ ಲೇಖನ " ಎಂದು ಸ್ಮಿತಾ ಅವರಿಗೆ ಅನಿಸಿದರೆ, ಕೆ. ಟಿ. ಶೆಟ್ಟಿ ಹೇಳುತ್ತಾರೆ, "ಕೆಲವು ಸತ್ಯ, ಕೆಲವು ಅರ್ಧ ಸತ್ಯ, ಇನ್ನು ಕೆಲವು ಪ್ರಶ್ನಾರ್ಥಕ ಸತ್ಯ." ಆದರೂ, "ಒಟ್ಟಿನಲ್ಲಿ ಗಾಂಧಿ ಒಬ್ಬ ಮಹಾತ್ಮನಾದ ಮಾನವ, ಮನುಕುಲಕ್ಕೊಂದು ಆದರ್ಶ!" ಎಂದು ಒಪ್ಪಿಕೊಳ್ಳುತ್ತಾರೆ.ಶ್ರೀನಿವಾಸ ಭಟ್ಟರು ಗಾಂಧಿ‌ ಪ್ರಯೋಗಿಸಿದ ಮೂರು ಪರಮಾಸ್ತ್ರಗಳನ್ನು ಗುರುತಿಸಿದ್ದರೆ‌, ಅದರಿಂದ "ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!" ಎಂದು ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಒತ್ತಿ ಹೇಳುತ್ತಾರೆ."ತುಂಬ ಸುಂದರ ನಿರೂಪಣೆ ಮತ್ತು ವ್ಯಾಖ್ಯಾನ. ಗಾಂಧೀಜಿಯವರ ಬಗ್ಗೆ ದೈವಿಕ ಭಾವ ಅಲ್ಲಗಳೆದರೂ ಅಭಿಮಾನ ತುಂಬಿಕೊಂಡಿದೆ. ಇಲ್ಲ ಇಲ್ಲ ಎಂದುಕೊಂಡೂ ರೋಚಕತೆಯೇ ಹೆಚ್ಚು, ಮುಕ್ತ ಆಲೋಚನೆ ಕಡಿಮೆ" ಎನ್ನುವುದು ಶ್ರೀನಿವಾಸ ಹೆಬ್ಬಾಳರ ಅನಿಸಿಕೆ."ಲೇಖನ ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ" ಎಂದು ವಿವರಿಸುತ್ತಾರೆ ಕೆ.ಪಿ. ರವಿಕುಮಾರ್.೨. ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಹೀಗೆ ಹೇಳುತ್ತಾರೆ"ಗಾಂಧಿ ಒಬ್ಬ ಮುಗ್ಧ, ಹೆಚ್ಚು ತಿಳಿಯದ, ಬಲಶಾಲಿಯಲ್ಲದ, ದುಷ್ಟ ಶಕ್ತಿಗಳಿಗೆ ಹೆದರುವ, ... ಹೀಗೆ, ಭಾರತದ ಇತರ ಎಲ್ಲ ಯುವಕರಂತೆಯೆ ಇದ್ದ. ನಮ್ಮ, ವೈಯಕ್ತಿಕ ಮತ್ತು ರಾಷ್ಟ್ರದ, ಹಿತಕ್ಕಾಗಿ ಗಾಂಧಿಯನ್ನು ಬಳಸಿಕೊಂಡೆವು (ಬಳಸಿಕೊಳ್ಳುತ್ತಿದ್ದೇವೆ.) "ಗಾಂಧಿಯಿಂದಲೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಇಲ್ಲದಿದ್ದರೆ ನಾವು ನಮ್ಮ (ವಸುಧೈವ ಕುಟುಂಬಕಂ, ಇತ್ಯಾದಿ) ಸ್ವಂತ ಬೋಧನೆಗಳನ್ನು ಅರ್ಥಮಾಡಿಕೊಳ್ಳದೆ ಗುಲಾಮರಾಗಿ ಬಳಲುತ್ತಿದ್ದೆವು. ನಮ್ಮೆಲ್ಲರಂತೆ, ಗಾಂಧಿಯೂ ವಿದೇಶಿ ಪದವಿಯನ್ನು (ಕಾನೂನಿನಲ್ಲಿ) ಗಳಿಸಲು ಸಲಹೆ ಪಡೆದರು. ತಮ್ಮ ಸುಮಾರು ೧೭ನೇ ಎಳೆ ವಯಸ್ಸಿನಲ್ಲಿ , ಅವರ ತಾಯಿ ದೈನಂದಿನ ಪೂಜೆ ಮಾಡುವಾಗ ಹಾಡುತ್ತಿದ್ದ ಕೀರ್ತನೆಗಳನ್ನು ಹೊರತುಪಡಿಸಿ, ಅವರಿಗೆ ಭಾರತದ ಬಗ್ಗೆ - ಭಗವದ್ಗೀತೆ ಅಥವಾ ಯಾವುದೇ ಮಹಾಕಾವ್ಯಗಳ ಬಗ್ಗೆ - ಏನೂ ತಿಳಿದಿರಲಿಲ್ಲ. ಎಲ್ಲರಂತೆ, ಮನೆಯಿಂದ ಹೊರಬಂದ ನಂತರ, ಜಗತ್ತನ್ನು ಎದುರಿಸಲು ಪ್ರಯತ್ನಿಸುತ್ತಿರುವಾಗ, ಇಂಗ್ಲೆಂಡ್‌ನಲ್ಲಿ ಕಂಡ ಕೆಲವು ಕ್ರಿಶ್ಚಿಯನ್ನರು, ಪಾದ್ರಿಗಳು ಹಿಂದೂ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳಲು ಸಹಜವಾಗಿ ಪ್ರಶ್ನಿಸಿದರು. ಏನನ್ನೂ ಹೇಳಲು ಸಾಧ್ಯವಾಗದ ಗಾಂಧಿ ಆಘಾತಕ್ಕೊಳಗಾದರು. ಅದಕ್ಕೆ, ಅವರು ಇಂಗ್ಲೆಂಡ್‌ನ ಪ್ರಮುಖ ವಕೀಲರಾದ ಸರ್ ಫಿರೋಜ್ ಶಾ ಮೆಹ್ತಾ ಅವರಂತಹ ಕೆಲವು ಭಾರತೀಯ ಸ್ನೇಹಿತರನ್ನು ಸಂಪರ್ಕಿಸಿದರು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡುವುದನ್ನು ಆರಂಭಿಸಿದರು. ಸುಮಾರು ಒಂದು ವಾರ ಅಧ್ಯಯನ ಮಾಡಿದ ನಂತರ ನಮ್ಮ ಮಹಾಕಾವ್ಯಗಳ ಬಗ್ಗೆ ಹೇಳುವ ಭಗವದ್ಗೀತೆ ಎನ್ನುವ ಒಂದು ಸಂಕ್ಷಿಪ್ತ ಪಠ್ಯ ಇದೆ ಎಂದು ತಿಳಿಯಿತು. ಅವನ್ನು ತನ್ನ ಕ್ರಿಶ್ಚಿಯನ್ ಸ್ನೇಹಿತರೊಂದಿಗೆ ಚರ್ಚಿಸತೊಡಗಿದಾಗ ತನಗೆ ಎಷ್ಟು ತಿಳಿದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಗಾಂಧಿಯ ಕಾನೂನು ಮತ್ತಿತರ ಮಾನವೀಯ ಪಠ್ಯ ಪುಸ್ತಕಗಳ ಹೊರತಾದ ಕಲಿಕೆ ಪ್ರಾರಂಭವಾದ್ದು ಹೀಗೆ."ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಪ್ರಯಾಣಿಸುವಾಗ, ತನ್ನ ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲ್ಪಟ್ಟಾಗ ಅನುಭವಿಸಿದ ನಿಜ ನೋವು ಗಾಂಧಿಯ ಪ್ರಪಂಚದ ದೃಷ್ಟಿಕೋನದ ಬದಲಾವಣೆಗೆ ಕ್ರಮೇಣ ಕಾರಣವಾಯ್ತ; ಅದೇ, ಅಂತಿಮವಾಗಿ, ತಾಯಿ ಭಾರತಿಯ ಭವಿಷ್ಯವನ್ನು ಬದಲಾಯಿಸಿತು. "ಭಾರತವು ೧೮೫೭ ರಿಂದ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದರೂ, ಯಾವುದೇ ಸಂಘಟಿತ ಹೋರಾಟ ಇರಲಿಲ್ಲ. ತಿಲಕ್, ಗೋಖಲೆ, ಸಾವರ್ಕರ್ ಅಥವಾ ಬೋಸ್ ಮತ್ತಿತರರ ಎಲ್ಲ ಹೋರಾಟಗಳು ಅಲ್ಪಕಾಲಿಕವಾಗಿದ್ದವು. ನಿಜವಾದ ಬಲಿಷ್ಠ ಮತ್ತು ಸಮರ್ಥ ನಾಯಕತ್ವ ಗಾಂಧಿಯವರಿಂದಲೇ ಲಭ್ಯವಾಯಿತು. ಬ್ರಿಟಿಷರನ್ನು ಅರಿತು ಮತ್ತು ಬ್ರಿಟಿಷರ ನೀತಿಗಳನ್ನು ಅರ್ಥಮಾಡಿಕೊಂಡಿದ್ದರಿಂದ ಪ್ರತಿ-ಹೋರಾಟವನ್ನು ನಡೆಸಲು ಗಾಂಧಿ ಶಕ್ತರಾಗಿದ್ದರು. ಅದಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದರು. ಅವರ ಕೌಟುಂಬಿಕ ಜೀವನ ನಾಶವಾಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿಲ್ಲ. ಸ್ವತಃ ಕಬ್ಬಿಣದ ಕಂಬಿಗಳ ಹಿಂದೆ ಅನೇಕ ಬಾರಿ ದಿನಗಳೆದರು. "ಗಾಂಧಿಯ ಆದರ್ಶ ತತ್ವಗಳು, ಸ್ವ- ನಂಬಿಕೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಸತ್ಯ ಮತ್ತು ಸತ್ಯ ಮಾತ್ರ ಗಾಂಧಿ ನಾಯಕತ್ವದ ದೊಡ್ಡ ಶಕ್ತಿಯಾಗಿದ್ದವು. ಬ್ರಿಟಿಷ ಸರ್ಕಾರ ಲೇಬರ್ ಪಕ್ಷಕ್ಕೆ ಸೇರಿದ್ದು, ವಿಶ್ವಯುದ್ಧದ ದುಷ್ಪರಿಣಾಮ, ಮತ್ತು ಬ್ರಿಟನ್‌ನ ಮೇಲೆ ಅದರ ಪ್ರಭಾವ ಇತ್ಯಾದಿಗಳು ನೆರವಾದರೂ, ಸ್ವಾತಂತ್ರ್ಯ ಪ್ರಾಪ್ತಿಯ ಮಹಾ ಕಾರ್ಯದಲ್ಲಿ ಗಾಂಧಿ ... ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kannadakali.com/article/gandhipratikriye.html__ಕನ್ನಡಕಲಿ, ಬಿತ್ತರಿಕೆ, ಜೂನ ೧, ೨೦೨೪
👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠  📧 ⁠⁠⁠⁠⁠⁠⁠⁠⁠⁠⁠⁠Subscribe to our newsletter ನುಡಿದರೆ ಮುತ್ತಿನ ಹಾರ Communico, ergo sum! [ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಹಾಗಾದರೆ ನಮ್ಮ ನುಡಿ ಹೇಗಿರಬೇಕು?] ನುಡಿ ಅಂದರೆ ಏನು? ನುಡಿ ಅಂದರೆ ಇಲ್ಲಿ ಕೇವಲ ಮಾತು ಅಲ್ಲ. ಎಲ್ಲ ರೀತಿಯ ಮಾನವ ಸಂಪರ್ಕ ಮತ್ತು ಸಂವಹನಗಳೂ ನುಡಿ. ಪರಸ್ಪರ ಸಂಪರ್ಕ ಸಂವಹನಗಳೆ ನಮ್ಮ ಅಸ್ತಿತ್ವ. Communico, ergo sum! ಅಂದರೆ, I commucate, therefore I exist. ಇದು ವಿಚಿತ್ರ ಎನಿಸಿದರೂ ಸತ್ಯ.‌ ಆದ್ದರಿಂದ ನುಡಿ ಅಥವ ಮಾತಿನ ಮಹತ್ವವನ್ನು ಇದಕ್ಕಿಂತ ಹೆಚ್ಚಿಗೆ ಒತ್ತಿ ಹೇಳಲು ಸಾಧ್ಯವಿಲ್ಲ. ವಾಟ್ಸಾಪ್‌, ಇನ್ಸ್ಟಗ್ರಾಂ, ಟ್ವಿಟರ್‌, ಟಿಕ್-ಟಾಕ್, ಯೂ-ತೂಬು, ಮುಖ-ಪುಸ್ತಕ, ಇತ್ಯಾದಿ ಸೋಶಿಯಲ್‌ ಮೀಡಿಯಗಳೆ ನಮ್ಮ ಪ್ರಪಂಚ ಆಗಿವೆ. ಒಂದು ದಿನ, ಒಂದು ಗಂಟೆ ಒಂದು ಸಂದೇಶ ಬರದಿದ್ದರೆ ಏನೋ ಕಸಿವಿಸಿ; ಸುಮ್ಮ ಸುಮ್ಮನೆ ಮೊಬೈಲ್‌ ತೆರೆದು ನೋಡುವ ತುಡಿತ. ಇವೇ ನಮ್ಮನ್ನು ನಿರೂಪಿಸುವ ಸೂತ್ರಗಳಾಗಿವೆ! ಆದ್ದರಿಂದ ಮಾತೇ ನಾನು; ಮಾತೇ ಆತ್ಮ! ೨ ಮಾತಿನಿಂದ ಸರ್ವಸ್ವ ಲಕ್ಷ್ಮೀರ್ವಸತಿ ಜಿಹ್ವಾಗ್ರೇ, ಜಿಹ್ವಾಗ್ರೇ ಮಿತ್ರಬಾಂಧವಾಃ ಜಿಹ್ವಾಗ್ರೇ ಬಂಧನಂ ಪ್ರಾಪ್ತಂ, ಜಿಹ್ವಾಗ್ರೇ ಮರಣಂ ಧ್ರುವಂ! (ಶಾರ್ಙಧರ ಪದ್ಧತಿ) ಮಾತಿನಿಂದ ಸಿರಿ, ಗೆಳೆಯರು, ಬಂಧುಗಳು, ದುಃಖ, ಜೈಲು, ಮತ್ತು ಸಾವು ಕೂಡ. ಇದನ್ನೆ ಕನ್ನಡದಲ್ಲಿ ಹೀಗೆ ಹೇಳಿದ್ದಾನೆ ಸರ್ವಜ್ಞ: ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಹೊಲೆಯು ಮಾತಿನಿಂ ಸರ್ವ ಸಂಪದವು, ಲೋಕಕ್ಕೆ ಮಾತೆ ಮಾಣಿಕ್ಯ ಸರ್ವಜ್ಙ ೩ ಹಾಗಾದರೆ ನುಡಿ ಹೇಗಿರಬೇಕು? ನುಡಿದರೆ ಮುತ್ತಿನ ಹಾರದಂತಿರಬೇಕು! ಇದು ಬಸವ ವಚನ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ೩.೧ ಮುತ್ತಿನ ಗುಟ್ಟು ಮುತ್ತೇ ಏಕೆ? ಮುತ್ತು ಸಾಂದ್ರ, ಅಂದರೆ ಮಾತು ಗಟ್ಟಿ ಆಗಿರಬೇಕು; ಒಂದು ಮುತ್ತು ಹುಟ್ಟಬೇಕಾದರೆ ಸಮಯ ಬೇಕು, ಸಾವಧಾನವಾಗಿ ಹರಳುಗಟ್ಟಬೇಕು. ಹಾಗೆಯೆ, ಮಾತು ವಿಚಾರಪೂರ್ವಕ ಬೆಳೆದು ಅರ್ಥಗರ್ಭಿತವಾಗಿ ಹೊರಬರಬೇಕು. ಮುತ್ತು ವಿರಳ; ಸಾವಿರ ಸಿಂಪಿಗಳಲ್ಲಿ ಒಂದು ಮುತ್ತನ್ನು ಹೊಂದಿರಬಹುದು. ಮಾತು ಕೂಡ ಅನಾವಶ್ಯಕವಾಗಿರಬಾರದು. ಅಂದರೆ ಪದಜಿಪುಣನಾಗಿರಬೇಕು. ೩.೨ ಹಾರದ ಬಂಧ ಅದೆಲ್ಲ ಸರಿ. ಹಾರ ಏಕೆ? ಪದಗಳನ್ನು ಅಸಂಬದ್ಧವಾಗಿ ಅಲ್ಲಲ್ಲಿ ಉಗುಳಿದರೆ ನುಡಿ ಅಲ್ಲ. ಪದಗಳು ಪೋಣಿಸಿದ ಹಾರದಂತೆ ಅರ್ಥ ಮತ್ತು ತರ್ಕ-ವಿಚಾರಗಳ ಸೂತ್ರದಲ್ಲಿ ಬಂಧಿತವಾಗಿರಬೇಕು. ತರ್ಕದ ಬಲ ಬುದ್ಧಿಯನ್ನು ಗೆಲ್ಲುವಂತಿರಬೇಕು. ೩.೩ ಮಾಣಿಕ್ಯದ ಹೊಳಪು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ಮಾಣಿಕ್ಯ ಶುದ್ಧ ಮತ್ತು ಪ್ರಕಾಶಮಾನ. ಹಾಗೆ ನಾವು ನುಡಿದ ನುಡಿ ಶುದ್ಧ ಜ್ಞಾನದೀಪವಾಗಿರಬೇಕು. ನಮ್ಮ ಮಾತಿನಲ್ಲಿ ತಿಳಿವಿನ ಹೊಳಹು ಸೂಸುತ್ತಿರಬೇಕು. ೩.೪ ಸ್ಫಟಿಕದ ಸರಳು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ಸ್ಫುಟವಾದ ಮಾತು ಸ್ಫಟಿಕದಂತೆ. ಶಲಾಕೆ ಅಂದರೆ ನೇರವಾದದ್ದು. ಸುತ್ತು-ಬಳಸು, ವಕ್ರತೆ ಇಲ್ಲದ್ದು. ಅನರ್ಥ, ನಿರರ್ಥ, ಅನ್ಯಾರ್ಥಗಳು ಇಲ್ಲದೆ ( see dasa kollu article) ನೇರವಾಗಿ ಎದೆ ಮುಟ್ಟುವಂತೆ ಇರಬೇಕು; ಸ್ಫಟಿಕ crystallize ಆಗುವಂತೆ ಇಂಗಿತ ಅರ್ಥ ತಂತಾನೆ ಮನಸ್ಸಿನಲ್ಲಿ ಇಳಿದು ಗಟ್ಟಿಯಾಗಬೇಕು. ೩.೫ ನುಡಿಯ ಲಿಂಗ ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ವಿವರಿಸಲು ಇದು ತುಸು ಕಠಿನವಾದದ್ದು. ಇಲ್ಲಿ, ಮೆಚ್ಚು ಅಂದರೆ ಒಪ್ಪವಂತಿರಬೇಕು, ಕೇಳುಗ ಮತ್ತು ಮಾತಾಡುವವ ಇಬ್ಬರೂ!; ಆಡಿದ್ದು ಸರಿ ಅಲ್ಲ ಅಂತ ಅನಿಸಿದರೆ ಅದು ಖಂಡಿತ ಸರಿ ಅಲ್ಲ! ಮೊದಲನೆಯದಾಗಿ, ಸಂಸ್ಕೃತದಲ್ಲಿ ಲಿಂಗ ಅಂದರೆ‌ ಶಬ್ದದ ಧರ್ಮ ಅಥವ ಶಬ್ದತ್ವ; ಅಂದರೆ ಲಿಂಗದಿಂದ ಶಬ್ದಕ್ಕೆ ಅರ್ಥ, ಲಿಂಗದಿಂದ ಶಬ್ದಕ್ಕೆ ಸಾಮರ್ಥ್ಯ; ಲಿಂಗದಿಂದೆ ಶಬ್ದಗಳಲ್ಲಿ ಹೊಂದಾಣಿಕೆ, ಅರ್ಥ ಸಮನ್ವಯ. ಲಿಂಗ ಇಲ್ಲದ ಮಾತು ಕೇವಲ ಧ್ವನಿಸಮೂಹ ಮಾತ್ರ; ಶಬ್ದ ಬರಿ ಸದ್ದು, ಸೊಲ್ಲು ಬರಿ ಗುಲ್ಲು. ಆದ್ದರಿಂದ ಯಾವ ಮಾತುಗಳಲ್ಲಿ ಅರ್ಥ ತುಂಬಿದೆಯೋ, ಸಾಮರ್ಥ್ಯ ಹುದುಗಿದೆಯೋ, ಹೊಂದಾಣಿಕೆ ಇದೆಯೊ ಅಂದರೆ ಲಿಂಗ ಸಂಪೂರ್ಣ ಮೆಚ್ಚಿದೆಯೋ, ಅಂತಃಸಾಕ್ಷಿ ಒಪ್ಪಿದೆಯೋ ಆ ಮಾತುಗಳೆ ಆಡಲು ತಕ್ಕವು. ಎರಡನೆಯದಾಗಿ, ಲಿಂಗ ಅಂದರೆ ಪಂಚ ಕೋಶ ಮೀರಿದ ಪ್ರಜ್ಞಾನ, ಆತ್ಮ; ಲಿಂಗ ಅಂದರೆ ಪರಮಾತ್ಮ. ಜನತಾ ಜನಾರ್ದನ ಅಂದಂತೆ ಜನತೆಯೆ ದೇವರು. ಅದಕ್ಕೆ, ಎದುರ ಬಂದವರಲ್ಲಿರುವ ಪರಮಾತ್ಮನಿಗೆ ನಮಸ್ಕಾರ ಮಾಡುವುದು ನಮ್ಮ ಸಂಸ್ಕೃತಿ. ಲಿಂಗವೆ ನಮ್ಮಲ್ಲಿರುವ ಪ್ರಜ್ಞೆ ಮತ್ತು ಆತ್ಮಸಾಕ್ಷಿ. ಇದಕ್ಕೆ ಮೆಚ್ಚಿಕೆಯಾಗುವ ನುಡಿಗೆ ಮೂಲ ನಮ್ಮ ವಿಚಾರ ಆಚಾರಗಳು - ನಡೆ ಬಗೆಗಳೆ ನುಡಿಯ ತಳಹದಿ. ಅಂದರೆ ಮಾತು ನಾಲಗೆಯಲ್ಲಿ ಇಲ್ಲ, ನಮ್ಮ ವಿಚಾರ-ಆಚಾರಗಳಲ್ಲಿ ನೆಲೆಸಿದೆ. ಬಗೆ-ನಡೆ-ನುಡಿ ಹೊಂದಾಣಿಕೆಯೆ ಲಿಂಗ. ಬಗೆ-ನಡೆ-ನುಡಿ ಮೂರರ ಸಂಗಮದಲ್ಲೇ ಲಿಂಗೋದ್ಭವ;‌ ಅರ್ಥದ ಉತ್ಪತ್ತಿ. ವಿಚಾರಕ್ಕೆ ಹೊಂದದ ನಡೆಗೆ, ನಡೆ ಇಲ್ಲದ ಮಾತಿಗೆ ಬೆಲೆ ಇಲ್ಲ. ಅದನ್ನು ಜನತೆಯೂ ಮೆಚ್ಚದು, ಜನಾರ್ದನನೂ ಮೆಚ್ಚನು, ನಮ್ಮ ಅಂತರಾತ್ಮವೂ ಮೆಚ್ಚದು. ಇರಲಿ, ಆಧ್ಯಾತ್ಮಿಕ‌ ವಿಚಾರಗಳು ಈ ಬಿತ್ತರಿಕೆಗೆ ... ... ಪೂರ್ತಿ ಲೇಖನವನ್ನು ಜಾಲತಾಣದಲ್ಲಿ ಓದಿ ನಿಮ್ಮವನೆ ಆದ, ವಿಶ್ವೇಶ್ವರ ದೀಕ್ಷಿತ ಬಿತ್ತರಿಕೆ ೧೪ ಕಾಲ ೨೦೨೪, ಸಂಖ್ಯೆ ೦೨: ಬಿಕಾಸ ೧೪-೨೦೨೪-೦೨ Episode 14, Year 2024 No. 02 : BIKASA 14-2024-02
👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠Subscribe to our newsletterಸಾಮಾನ್ಯ ಮಾನವನಾಗಿ ಹುಟ್ಟಿದ ಮೋಹನದಾಸ ರಾಷ್ಟ್ರಪಿತ, ಬಾಪು, ಗಾಂಧಿ ತಾತ, ಕೊನೆಗೆ ಮಹಾತ್ಮನಾದ. ಈತ ಮಾಡಿದ್ದಾದರೂ ಏನು? ಮಹಾತ್ಮ ಗಾಂಧಿಮೂರು ಕಂತುಗಳಲ್ಲಿ:ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತುಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು-ಗಾಂಧಿ ಸಾಧಿಸಿದ್ದಾದರೂ ಏನು?ಗಾಂಧಿಯನ್ನು ಕೆಲವರು ದೇವತೆಯಂತೆ ಪೂಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ. -ಇದೊ ನೋಡಿ, ನಿಜವಾಗಿಯೂ ಒಂದು ಗಾಂಧಿ ಗುಡಿಯನ್ನು ಕಟ್ಟಿದ್ದಾರೆ. ತಮಿಳುನಾಡಿನ ಎರೋಡು ಜಿಲ್ಲೆಯ ಸಲಂಗಪಾಳಯದಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಗಾಂಧಿಗೆ ಪೂಜೆ, ಆರತಿ, ಮತ್ತು ಪ್ರಸಾದ. ಇದ್ದ ಕಡವರನ್ನೆಲ್ಲ ಇಲ್ಲೈ ಇಲ್ಲೈ ಎಂದು ಬೀದಿಗೆ ದಬ್ಬಿ, ಒಲ್ಲದವನಿಗೆ ಪೂಜೆ ಮಾಡುವ ಈ ಸಲ್ಲದ ಪರಿ ಎಂಥದು? ಗಾಂಧಿ ಇನ್ನೂ ಬದುಕಿದ್ದರೆ ಇದನ್ನು ಕಂಡು ತಾವೇ ನೇಣು ಹಾಕಿಕೊಳ್ಳುತ್ತಿದ್ದರೋ ಏನೋ! ಗಾಂಧಿಯ ಜೀವನಕ್ಕೆ, ತತ್ವಗಳಿಗೆ, ನಡತೆಗೆ, ಮತ್ತು ಆದರ್ಶಗಳಿಗೆ ಇದೊಂದು ಅಪಚಾರ. "ಗಾಂಧಿಯ ಜೀವನದ ಆದರ್ಶಗಳು ನಮಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಗಾಂಧಿ ದೇವತೆ, ನಾವು ಹುಲು ಮಾನವರು" ಎಂದು ಸೋಲನ್ನು ಒಪ್ಪಿಕೊಳ್ಳುತ್ತ, ಇಲ್ಲವೆ ಚಾಣಾಕ್ಷತೆಯಿಂದ, ಮನುಷ್ಯತ್ವದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೆ ಗಾಂಧಿಯನ್ನು ದೈವೀಕರಿಸುವುದು. ಗಾಂಧಿ ಈಗ ಹಳಸಿದ ಹಾಲು. ಬೆಕ್ಕು ಮುಟ್ಟದು. ಚೆಲ್ಲಲು ಆಗದು. ಅದಕ್ಕೆ ಗುಡಿ ಎನ್ನುವ ತಂಗಳು ಪೆಟ್ಟಿಗೆಯಲ್ಲಿ ಕೂಡಿ ಹಾಕಿದರಾಯಿತು! ರಾಮ ಬಸವ ಬುದ್ಧರ ಗತಿಯೂ ಇದೆ ಆಗಿದೆ. ಸಹಸ್ರಮಾನಗಳಿಂದ ನಡೆದುಕೊಂಡ ಬಂದ ಭಾರತೀಯ ಪದ್ಧತಿಯೆ ಇದು! ಗಾಂಧಿಗೆ ನೊಬೆಲ್ ಪಾರಿತೋಷಕ ಕೊಡಲಿಲ್ಲ ಎಂದು ಹಲವರು ಹಂಬಲಿಸಿ ಕೊರಗುತ್ತಿದ್ದರೆ, ನೋಬೆಲ್ ಕಮಿಟಿ ತಮ್ಮ ತಪ್ಪಿಗಾಗಿ ಒಳಗೇ ತಳಮಳಿಸುತ್ತಿದೆಯೆ? ಆಕಸ್ಮಾತ್ತಾಗಿ ತಪ್ಪಾಗಿದೆ ಎನ್ನುವ ಹೇಳಿಕೆ ಬಂದರೂ ನಂಬಲು ಅಸಾಧ್ಯ. ಗಾಂಧಿಯ ಹೆಸರು, ಇನ್ನೂ ಜೀವಂತವಾಗಿ ಇದ್ದಾಗ, ಒಮ್ಮೆ ಅಂತೂ ಸಾಯುವ ಕೆಲ ದಿನಗಳ ಮುಂಚೆ, ಐದು ಬಾರಿ ನೊಬೆಲ್ ಕಮಿಟಿಯ ಮುಂದೆ ಬಂದಿತ್ತು. ಪ್ರತಿ ಬಾರಿಯೂ, "ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ, ಸಮಾಜ ಸೇವಕನೂ ಅಲ್ಲ" ಎಂದು ಪ್ರಶಸ್ತಿಯನ್ನು ಕಮಿಟಿ ನಿರಾಕರಿಸಿತು. ಕಮಿಟಿಯ ಆ ನಿಲುವಿನಲ್ಲಿ ಈಗಲೂ ಬದಲಾವಣೆ ಆಗಿಲ್ಲ. ಆದರೂ ಏನು ಪ್ರಯೋಜನ? ಸತ್ತವರಿಗೆ ನೋಬೆಲ್ ಪ್ರಶಸ್ತಿ ಕೊಡುವುದಂತೂ ಇಲ್ಲ. ಕೊಟ್ಟರೂ ಈಗ ಅದಕ್ಕೆ ಏನು ಬೆಲೆ? ೧೯೪೮ರಲ್ಲಿ ಗಾಂಧಿ ತೀರಿದ ನಂತರ ನೊಬೆಲ್ ಕಮಿಟಿ ಆ ವರ್ಷ "ಅರ್ಹರಾದವರು ಯಾರೂ ಬದುಕಿಲ್ಲ" ಎಂದು ಯಾರಿಗೂ ಪ್ರಶಸ್ತಿಯನ್ನು ಕೊಡಲಿಲ್ಲ. ಅದೆ ಅವರು ಗಾಂಧಿಗೆ ತೋರಿದ ಮರ್ಯಾದೆ ಎಂದುಕೊಂಡಿದ್ದಾರೆ. ಬೇರೆಯವರಿಗೆ ಪ್ರಶಸ್ತಿ ಕೊಡದೆ ಮಾಡಿದ ಅವಮರ್ಯಾದೆ ತಮಗೆ ಹೇಗೆ ಮರ್ಯಾದೆ ಆಗುತ್ತದೆ ಎಂದು ಗಾಂಧಿಯೆ ಇವರನ್ನು ಪ್ರಶ್ನಿಸುತ್ತಿದ್ದರು. ನೆನಪಿಸಿಕೊಳ್ಳಿ, ರಿಚರ್ಡ್ ಅಟೆನ್‌ಬರೋಗೆ ಗಾಂಧಿ ಚಿತ್ರ ನಿರ್ಮಿಸಲು ಸ್ಫೂರ್ತಿ ಕೊಟ್ಟ ಗಾಂಧಿಯ ಈ ನುಡಿ, "ಬೇರೆಯವರ ಅವಮಾನದಲ್ಲಿ ತನ್ನ ಸನ್ಮಾನ ಇದೆ ಎನ್ನುವ ಮನುಷ್ಯನ ನಡತೆ ನನಗೆ ಒಂದು ಬಿಡಿಸದ ರಹಸ್ಯ." ಇನ್ನು ಮೇಲೆ, ನೊಬೆಲ್ ಕಮಿಟಿ ತನ್ನ ಸಂವಿಧಾನವನ್ನು ಬದಲಿಸಿ ಗಾಂಧಿಗೆ ಮರಣೋತ್ತರ ಪ್ರಶಸ್ತಿಯನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಅವಮಾನ ಗಾಂಧಿಗೆ ಇಲ್ಲ, ನೊಬೆಲ್ ಕಮಿಟಿಗೆ ಇಲ್ಲ. ಎಲ್ಲ ಪ್ರಶಸ್ತಿಗಳನ್ನು ಮೀರಿ ನಿಂತ ಗಾಂಧಿಗೆ ಇಂಥ ಯಾವ ಮರ್ಯಾದೆಗಳೂ ಬೇಕಿಲ್ಲ. ಪ್ರಶಸ್ತಿ ಕೊಟ್ಟಿದ್ದರೆ ಅದರ ಘನತೆ ಹೆಚ್ಚು,ತ್ತಿತ್ತು. ಅದಕ್ಕೆ, ನೊಬೆಲ್ ಕಮಿಟಿ, ಒಂದು ರೀತಿಯಿಂದ, ಪ್ರಶಸ್ತಿ ಕೊಟ್ಟು ಗಾಂಧಿಗೆ ಅವಮಾನ ಮಾಡಲಿಲ್ಲವಲ್ಲ ಎಂದುಕೊಳ್ಳಬೇಕು. ಗಾಂಧಿಯನ್ನು ನಿಜವಾಗಿ ಅರ್ಥ ಮಾಡಿಕೊಂಡು ಇದಕ್ಕಾಗಿ ಕೊರಗುವುದನ್ನು ನಿಲ್ಲಿಸಬೇಕು. ಗಾಂಧಿಯ ಸಾಧನೆ ಆದರ್ಶಗಳ ತಪ್ಪು ತಿಳುವಳಿಕೆಗಳೆ ಈ ಆಭಾಸಗಳಿಗೆ ಕಾರಣ. ಗಾಂಧಿಯನ್ನು ತಿಳಿದುಕೊಂಡವರು ಇದ್ದಾರೆ. "ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗವನ್ನೆ ತೊರಿಸಿಕೊಟ್ಟ ಗಾಂಧಿಗೆ ಸಲ್ಲಿಸಿದಮನ್ನಣೆ ... ಪೂರ್ತಿ ಲೇಖನವನ್ನು ಜಾಲತಾಣದಲ್ಲಿ ಓದಿ--00:00.0 ಪೀಠಿಕೆ01:52.8 ಗಾಂಧಿಗೊಂದು ಗುಡಿ!03:11.7 ಗಾಂಧಿಗಿಲ್ಲ ನೊಬೆಲ್‌ ಪಾರಿತೋಷಕ!05:21.7 ಗಾಂಧಿಯನ್ನು ತಿಳಿದವರು05:30.7 ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗ05:45.0 ಗಾಂಧಿಯನ್ನು ಕಡೆಗಣಿಸುವುದೆ ನಮ್ಮ ವಿಪತ್ತು05:56.8 ಗಾಂಧಿ ಎಂಟು ಘೋರ ಸಂಘರ್ಷಗಳ ಪುರೋಗಾಮಿ06:47.2 ಗಾಂಧೀಜಿ ಇಂದಿಗೂ ಪ್ರಸ್ತುತ07:01.2 ಸತ್ಯ ಅಹಿಂಸೆಗಳ ಭದ್ರ ನೆಲೆಗಟ್ಟು07:18.1 ನೈತಿಕ, ಆಧ್ಯಾತ್ಮಿಕ, ಸದಭಿರುಚಿಯ ಅಡಿಪಾಯ07:42.0 ದೇಶಪ್ರೇಮ, ಆತ್ಮಾಭಿಮಾನ, ಅಭಯದ ಕಿಡಿ08:13.6 ಸ್ವಾತಂತ್ರ್ಯಕ್ಕೆ ಅರ್ಥ08:38.6 ಸ್ವದೇಶಿ, ಸ್ವಾವಲಂಬನೆ, ಶರೀರ ಶ್ರಮ, ವೃತ್ತಿ ಗೌರವ09:08.8 ಜನಸೇವೆಯೇ ಜನಾರ್ದನ ಸೇವೆ00:34.0 ಸರ್ವ ಧರ್ಮ ಸಮಭಾವ09:46.0 ಭರತಖಂಡದ ಸ್ವಾತಂತ್ರ್ಯದ ರೂವಾರಿ - ಇತರರಿಗೆ ಮಾದರಿ10:00.3 ದ್ವೇಷ ದಹಕ, ಪ್ರೇಮ ಪ್ರವರ್ಧಕ10:10.3 ಶ್ರೀಸಾಮಾನ್ಯ ತನ್ನನ್ನೇ ತಾನು ಕಡೆದು ಊರ್ಜಿತಗೊಂಡು ವಿಶ್ವಮಾನವನಾದುದು10:31.7 ಹಿಂಸೆ, ಯುದ್ಧಗಳು ಮಾರ್ಗವಲ್ಲ; ಹಿಂಜರಿಯುವದು / ಶರಣಗತರಾಗುವದು ಉಚಿತವಲ್ಲ11:35.5 "ನನ್ನ ಜೀವನವೆ ನನ್ನ ಸಂದೇಶ"12:06.5 ಆಧಾರಗಳು12.25 ಕೃತಜ್ಞತೆ, ಸಂಪರ್ಕ
👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠Subscribe to our newsletter⁠⁠ಮಹಾತ್ಮ ಗಾಂಧಿ : ಮೂರು ಕಂತುಗಳಲ್ಲಿ:ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತುಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳುಪೂರಕ ಓದಿಗೆ: ಭಾಗ ೨ - ಗಾಂಧಿ ಸಾಧಿಸಿದ್ದಾದರೂ ಏನು?ಹುಟ್ಟು : ಅಕ್ಟೋಬರ್ ೨, ೧೮೬೯ಕೆಟಲ್ ಪದದ ಸ್ಪೆಲಿಂಗ್ ಬಾರದು; ಪಕ್ಕದ ಹುಡುಗನಿಂದ ಕಾಪಿ ಹೊಡೆಯುವಂತೆ ಶಿಕ್ಷಕರು ಸನ್ನೆ ಮಾಡುತ್ತಾರೆ; ಆದರೆ ಮೋಹನದಾಸ್ ತನಗೆ ಬಂದಂತೆ ತಪ್ಪಾಗಿ ಬರೆಯುತ್ತಾನೆ. ಈ ಪ್ರಾಮಾಣಿಕ ಮೂರ್ತಿಯ ಮೇಲೆ ಶಿಕ್ಷಕರಿಗೆ ಎಲ್ಲಿಲ್ಲದ ಸಿಟ್ಟು. ಆವರಿಗೇನು ಗೊತ್ತು ಕರಮಚಂದರ ಮಗ ಈ ಮೋಹನದಾಸ ಮುಂದೆ ಮಹಾತ್ಮ ಗಾಂಧಿ ಆಗುತ್ತಾನೆ ಎಂದು! ಭಾರತ ದೇಶಕ್ಕೆ ಸ್ವತಂತ್ರವನ್ನು ದೊರಕಿಸಿಕೊಟ್ಟು ರಾಷ್ಟ್ರಪಿತ, ಎಲ್ಲರಿಗೂ ನೈತಿಕ ನೆಲೆಯನ್ನು ತೋರಿಸಿ ಬಾಪು, ಮಕ್ಕಳಿಗೆಲ್ಲ ಪ್ರಿಯನಾಗಿ ಗಾಂಧಿ ತಾತ ಆದವ ಈ ಮೋಹನ. ಗುಜರಾತ ರಾಜ್ಯದ ಪೋರಬಂದರಿನಲ್ಲಿ ಅಕ್ಟೊಬರ್ ೨, ೧೮೬೯ರಂದು ಜನನ. ಲಂಡನ್ನಿನಲ್ಲಿ ವಕೀಲಿಗೆ ಓದು. ಮುಂಬಯಿಯಲ್ಲಿ ವಕೀಲಿ ವೃತ್ತಿ ಆರಂಭ, ಹಲ ಬಗೆಯ ನಿಷ್ಫಲ ಪ್ರಯತ್ನ. ದಕ್ಷಿಣ ಆಫ್ರಿಕಾಕ್ಕೆ ಕೆಲಸದ ನಿಮಿತ್ತ ಪಯಣ. ಅಲ್ಲಿನ ಸರಕಾರದ ವರ್ಣಭೇದ ನೀತಿಯ ಕಹಿ ಊಟದ ಸ್ವಾಗತ. ಅಲ್ಲಿ ಕಂಡದ್ದು ಭಾರತೀಯರ ರಾಜಕೀಯ ಹಕ್ಕು ಮತ್ತು ಸ್ವಾತಂತ್ರ್ಯಗಳ ದಿಗಿಲುಗೊಳಿಸುವಂತಹ ನಿರಾಕರಣೆ. ಮೂಲ ಹಕ್ಕುಗಳನ್ನು ದೊರಕಿಸಿಕೊಳ್ಳಲು ಚಳುವಳಿ ಆರಂಭ. ಇಪ್ಪತ್ತು ವರುಷ ದಕ್ಷಿಣ ಆಫ್ರಿಕದಲ್ಲಿ ವಾಸ; ಪೋಲಿಸರಿಂದ ಹೊಡೆತ, ಒದೆತ; ಅನೇಕ ಬಾರಿ ಜೈಲು ವಾಸ. ಸತ್ಯ ತಮ್ಮದು ಎಂದು ನಂಬಿ ಛಲ ಬಿಡದ ಗಾಂಧಿ ಅಹಿಂಸಾ ಮಾರ್ಗವನ್ನು ಹಿಡಿದರು. ಸಹನಶೀಲ ಪ್ರತಿರೋಧ (ಪ್ಯಾಸಿವ್ ರಸಿಸ್ಟನ್ಸ್) ಮತ್ತು ಸವಿನಯ ಕಾನೂನು ಭಂಗ (ಸಿವಿಲ್ ದಿಸ್‌ಒಬೀಡಿಯನ್ಸ್) ತತ್ವಗಳನ್ನು ಅಳವಡಿಸಿಕೊಂಡರು. ಈ ತತ್ವಗಳಿಗೆ ಭಗವದ್ಗೀತೆ ಜೈನ ಧರ್ಮಗಳು ನೆಲೆಗಟ್ಟನ್ನು ಒದಗಿಸಿದರೆ, ರಷಿಯದ ಸಾಹಿತಿ ಲಿಯೊ ಟಾಲ್‌ಸ್ಟಾಯ್ ಮತ್ತು ಅಮೆರಿಕನ್ ಸಾಹಿತಿ ಡೇವಿಡ್ ಥೋರೊ ಅವರ ಬರಹಗಳು ಸ್ಫೂರ್ತಿ ನೀಡಿದವು.ದಕ್ಷಿಣ ಆಫ್ರಿಕೆಯಲ್ಲಿನ ಕೆಲಸ ಮುಗಿದು, ಮೊದಲ ಮಹಾಯುದ್ಧದ ಸಮಯದಲ್ಲಿ ಗಾಂಧಿ ಭಾರತಕ್ಕೆ ಮರಳಿದರು. ತಮ್ಮ ಸತ್ಯ ಮತ್ತು ಅಹಿಂಸೆಯ ತತ್ವಗಳ ಆಧಾರದ ಮೇಲೆ ಬ್ರಿಟಿಷರನ್ನು ಪ್ರತಿರೋಧಿಸಿ ಸ್ವತಂತ್ರ ಗಳಿಸುವಂತೆ ಭಾರತೀಯರನ್ನು ಕೇಳಿಕೊಂಡರು. ಬ್ರಿಟಿಷರ ಪರವಾಗಿ ಮೊದಲ ಯುದ್ಧದಲ್ಲಿ ಕಾದುವಂತೆ ವಿನಂತಿಸಿಕೊಂಡರು. ತಾವೆ ಯುದ್ಧಕ್ಕೆ ಅಂಬುಲೆನ್ಸ್‌ಗಳನ್ನು ಜೋಡಿಸಿಕೊಂಡು ರೆಡ್ ಕ್ರಾಸಿನ ತುಂಡೊಂದನ್ನು ನಿಭಾಯಿಸಿದರು. ಯುದ್ಧದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ವರಾಜ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಸತ್ಯಾಗ್ರಹ’ ಮತ್ತು ‘ಅಸಹಕಾರ’ ಚಳುವಳಿ ಪ್ರಾರಂಭಿಸಿದರು. ಉಪವಾಸ ತಮ್ಮನ್ನು ಶುಧ್ಧಿಗೊಳಿಸಲು ಅಷ್ಟೆ ಅಲ್ಲ ಬೇರೆಯವರ ಮನ ಒಲಿಸುವ ಸಾಧನವಾಯ್ತು. ‘ಸ್ವದೇಶಿ’ ಚಳುವಳಿ ಸ್ವಾತಂತ್ರ ಹೋರಾಟದಲ್ಲಿ ಇನ್ನೊಂದು ಪರಿಣಾಮಕಾರಿ ಅಸ್ತ್ರವಾಯ್ತು. ವಿದೇಶಿ ವಸ್ತುಗಳನ್ನು ಬಿಟ್ಟು ಸ್ವದೇಶಿ ವಸ್ತುಗಳನ್ನು ಬಳಸುವುದೆ ಈ ತಂತ್ರ. ಭಾರತೀಯ ಕಚ್ಚಾ ವಸ್ತುಗಳನ್ನೆ ಬಳಸಿ ವಿದೇಶದಲ್ಲಿ ತಯಾರಾಗಿ ಮರಳಿ ಭಾರತಕ್ಕೆ ಬರುತ್ತಿದ್ದ ವಸ್ತುಗಳಲ್ಲಿ ಬಟ್ಟೆ ಮುಖ್ಯವಾಗಿತ್ತು. ಇದಕ್ಕೆ ಉತ್ತರವಾಗಿ ಖಾದಿ ಹುಟ್ಟಿಕೊಂಡಿತು. ಪ್ರತಿ ದಿನ ಎಲ್ಲರು ಖಾದಿ ನೇಯುವಂತೆ ಕೇಳಿಕೊಂಡರು ಗಾಂಧಿ. ಚರಕ ಅವರ ಜೀವನ ಸಂಗಾತಿಯಾಯ್ತು.ದಂಡಿ ಯಾತ್ರೆ ಅಥವ ಉಪ್ಪಿನ ಸತ್ಯಾಗ್ರಹ ಜನರನ್ನು ಒಂದುಗೂಡಿಸಿ ಎಬ್ಬಿಸಿತು. ಸರಕಾರಕ್ಕೆ ಕರ ಕೊಡದೆ ಜನರು ತಾವೆ ಸಾಂಕೇತಿಕವಾಗಿ ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಾಡುವುದೆ ಇದರ ಉದ್ದೇಶ. ಸಹಸ್ರಾರು ಜನರು ಗಾಂದಿಯೊಡನೆ ದಂಡಿಯ ಸಮುದ್ರ ತೀರಕ್ಕೆ ನಡೆದುಕೊಂಡು ಹೋಗಿ ಉಪ್ಪನ್ನು ತಯಾರಿಸಿದರು. ನಂತರ ಗಾಂಧಿ ೨೧ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.ಎರಡನೆಯ ಮಹಾಯುದ್ಧ ಪ್ರಾರಂಭ ಆದಾಗ ಭಾರತದ ಬೆಂಬಲ ಬೇಕಾದರೆ, ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿ ಕರಾರು ಹಾಕಿದರು.ಬ್ರಿಟಿಷರು ಇದಕ್ಕೆ ಒಪ್ಪಲಿಲ್ಲ. ‘ಭಾರತ ಬಿಟ್ಟು ತೊಲಗಿರಿ’ (ಕ್ವಿಟ್ ಇಂಡಿಯ) ಚಳುವಳಿ ಆರಂಭಿಸಿದರು. ಗಾಂಧಿಗೆ ಮತ್ತೆ ಜೈಲುವಾಸ ಸಿಕ್ಕಿತು. ಅನಾರೋಗ್ಯದ ಕಾರಣ ಎರಡು ವರುಷಗಳ ನಂತರ ಬಿಡುಗಡೆ ಹೊಂದಿದರು.ಅಂತೂ ಸ್ವಾತಂತ್ರ್ಯ ಸಿಗುವ ಸಮಯ ಬಂತು. ಗಾಂಧಿ ದೇಶದ ವಿಭಜನೆಯನ್ನು ವಿರೋಧಿಸಿದರು. ವಿಭಜನೆಯಾಯಿತು. ಸ್ವತಂತ್ರ ಬಂತು. ಎಲ್ಲರು ಸಂಭ್ರಮಿಸಿದರೆ ವಿಭಜನೆಯಲ್ಲಿ ಸತ್ತವರ, ಅನಾಥರಾದವರ, ದೇಶಭ್ರಷ್ಟರಾದವರ, ದೇಶದಲ್ಲಿಯೆ ಪರದೇಶಿಗಳಾದವರ ಹೆಸರಿನಲ್ಲಿ ಗಾಂಧಿ ಶೋಕಾಚರಣೆ ಮಾಡಿದರು. ಮುಸ್ಲಿಮರ ಪಕ್ಷಪಾತಿ ಆಗಿ ಅವರನ್ನು ಸಾಂತ್ವನಗೊಳಿಸುತ್ತ ಸ್ವತಂತ್ರ ಭಾರತ ಸರಕಾರವನ್ನು ಹೊರಗಿದ್ದುಕೊಂಡೂ ನಿಯಂತ್ರಿಸುತ್ತಿದ್ದಾರೆ ಎಂದು ದೂಷಿಸಿ, ಹಿಂದು ತೀವ್ರವಾದಿಗಳಲ್ಲಿ ಒಬ್ಬನಾದ ನಾಥೂರಮ್ ಗೋಡ್ಸೆ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದನು. "ಹೇ ರಾಮ್!" ಎಂಬ ಕೊನೆಯ ಮಾತುಗಳೊಂದಿಗೆ ಈ ಮಹಾತ್ಮ ವಿಶ್ವದ ಚರಿತ್ರೆಯಲ್ಲಿ ಬೆಳಗತೊಡಗಿದರು. (ಜನೆವರಿ ೩೦, ೧೯೪೮). ತಮ್ಮ ತತ್ವ, ಆದರ್ಶ, ನಂಬಿಕೆ ಎಲ್ಲವನ್ನು ಸ್ವತಃ ಆಚರಿಸಿ ತೋರಿಸಿದ ಗಾಂಧಿ ಅವರ ಜೀವನವೆ ಅವರ ಸಂದೇಶ ಆಗಿ ಉಳಿಯಿತು.ನಿಮ್ಮವನೇ ಆದ, ವಿಶ್ವೇಶ್ವರ ದೀಕ್ಷಿತಕನ್ನಡಕಲಿ, ಬಿತ್ತರಿಕೆ, ಜನವರಿ ೦೩, ೨೦೨೪ತಾಗುಲಿ: Vishweshwar Dixit
👍 Like it? ...... ⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠Subscribe to our newsletter⁠ಕನ್ನಡವೆಂಬುದು ಮಂತ್ರ ಕಣಾ!ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ. ಅನ್ಯಾರ್ಥ, ಅಪಾರ್ಥ, ಅನರ್ಥ, ಆಭಾಸಗಳು ಹುಟ್ಟುವುದು ಅನಾವಶ್ಯಕ ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ. ಯಾಕೆ ಹೀಗೆ? ಅಲಸಿ ನಾಲಗೆ ಮತು ಉದಾಸೀನತೆಗಳು ಎಂದು ಮೇಲ್ನೋಟದಲ್ಲಿ ತೋರಿದರೂ, ಕನ್ನಡದ ಮತ್ತು ಪದಗಳ ತಿಳಿವು ಇಲ್ಲದಿರುವುದೆ ಮುಖ್ಯ ಕಾರಣ.ವಿಶೇಷವಾಗಿ ಹಾಡುಗಾರರು, ಭಾಷಣಕಾರರು, ಮೊದಲ ಗುರು ಎನಿಸುವ ತಾಯಿ-ತಂದೆ, ಮತ್ತು ಶಿಕ್ಷಕರು ಕನ್ನಡ ಉಚ್ಚಾರದ ವಿಷಯದಲ್ಲಿ ಹೆಚ್ಚಿನ ಗಮನ ಇರಿಸುವುದು ಒಳಿತು. ನವಿರು ಹಾಸ್ಯದೊಂದಿಗೆ, ಈ ಬಿತ್ತರಿಕೆಯಲ್ಲಿ, ಎತ್ತಿ ತೋರಿಸಲಾದ ʼಏಳು ಅಪಸ್ವರʼ ಗಳನ್ನು ಅರಿತು ನಿವಾರಿಸಿಕೊಂಡರೆ ನಿಮ್ಮ ಕನ್ನಡ ಕಸ್ತೂರಿಯಾಗುವುದರಲ್ಲಿ ಸಂಶಯವಿಲ್ಲ.(ಕನ್ನಡ ಉಚ್ಚಾರ ಮಂತ್ರದಷ್ಟು ಸೂಕ್ಷ್ಮವೇ?)ಹುಚ್ಚರಣೆ ದಾಸರನ್ನು ಆಡಿ ಕೊಲ್ಲಿರೋ!ಮತ್ತುಕನ್ನಡದ ಏಳು ಅಪಸ್ವರಗಳು-- ವಿಶ್ವೇಶ್ವರ ದೀಕ್ಷಿತಗಾಯನ: ಸ್ಫೂರ್ತಿ ಉಗ್ರಪ್ಪಫೆಬ್ರುವರಿ ೦೭, ೨೦೨೧ ರಂದು "ವಾಕ್ಪಟುಗಳು" ಆನ್‌ಲೈನ್‌ ಗುಂಪಿನಲ್ಲಿ ನೀಡಿದ ಭಾಷಣ( https://www.facebook.com/groups/vakpatugalu/permalink/10159612099913118/ )ಅನಾವಶ್ಯಕ ವರ್ಣ ಪಲ್ಲಟ, ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ ಅಗುವ ಅಪಾರ್ಥ, ಅನರ್ಥ, ಆಭಾಸಗಳಿಗೆ ಪದಗಳ ತಿಳಿವಳಿಕೆ ಇಲ್ಲದಿರುವುದೆ ಮುಖ್ಯ ಕಾರಣRead Complete article: https://kannadakali.com/article/culture/huchcharane.html09:55 ಸಪ್ತ ಅಪಸ್ವರಗಳು‌12:45 ೧ ಪಾಯಸದಲ್ಲಿ ನೊಣ : ನ ↔ ಣ12:46 ದಡಬಡ ತಟಪಟ: ಡ ↔ ದ17:12 ೨ ಲಳಯೋರಭೇದ : ಳ ↔ ಲ19:45 ೩ ಕೂಡಿಸಿ ಕೆಟ್ಟ : ಶಬ್ದಗಳನ್ನು ಕೂಡಿಸಿ/ಬಿಡಿಸಿದಾಗ ಅಪಾರ್ಥ23:44 ೪ ಎಲ್ಲರೂ ಭಂಡರೆ : ಮಹಾಪ್ರಾಣವನ್ನು ಇಲ್ಲದಲ್ಲಿ ಸೇರಿಸಿ ಇದ್ದಲ್ಲಿ ಬಿಡುವುದು28:13 ೫ ಹಾರುವ ಹಕಾರ : ವರ್ಣ ಪಲ್ಲಟ 31:44 ೬ ಹಗರಣ : ವರ್ಣ ಆದೇಶ, 33:00 ೭ ಆಸನ-ಹಾಸನ : ವರ್ಣ ಲೋಪ ಮತ್ತು ವರ್ಣ ಆಗಮ35:06 ದಾಸರ ಪದಗಳನ್ನು ಹೇಗೆ ಹಾಡಬೇಕು
Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?👍 Like it? ...... ⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠Subscribe to our newsletter[ ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ - ಸಂ.]ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?-- ವಿವೇಕ ಬೆಟ್ಕುಳಿಅನಾದಿ ಕಾಲದಿಂದ ಇಂದಿನವರೆಗೂ ಪ್ರೀತಿ ಎಂಬ ವಿಷಯ ಚಚೆ೯ ಆಗುತ್ತಲೇ ಇರುವುದು. ಮುಂದೆಯೂ ಸಹ ಆಗುತ್ತ ಇರುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.ಹಾಗಾದರೆ ಪ್ರೀತಿ ಎಂದರೇನು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಇವೆ. ಆದರೆ ಸರಳ ಉತ್ತರ ಎಂದರೆ ಒಂದೇ “ಪ್ರೀತಿ ಎಂದರೆ ಪ್ರೀತಿ” ಅಷ್ಟೆ! ಈ ಬಗ್ಗೆ ಉತ್ತರಿಸುವ ಎಲ್ಲರೂ, ಅವರವರು ನೋಡಿದ, ಅನುಭವಿಸಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡೆ ಪ್ರೀತಿಯನ್ನು ವ್ಯಾಖ್ಯಾನಿಸುವರು. ಹೊರತಾಗಿ ಪ್ರೀತಿಗೆ ಸ್ಪಷ್ಟವಾದ ಉತ್ತರ ಎಂಬುದು ಇಲ್ಲ. ಪ್ರೀತಿಯಲ್ಲಿ ವಿವಿಧ ಬಗೆಗಳಿವೆ. ಆದರೆ ಎಲ್ಲ ಬಗೆಯ ಪ್ರೀತಿಯೂ ಅಪೇಕ್ಷೆಯ ಕಾರಣಕ್ಕಾಗಿಯೇ ದುಖ:ದಲ್ಲಿ ಅಂತ್ಯವಾಗುವುದು. ತಂದೆ-ತಾಯಿ ಮಕ್ಕಳ ಪ್ರೀತಿ ಅಪ್ಪ ಅಮ್ಮನಿಗೆ ತನ್ನ ಮಗ/ಮಗಳು ತಾನು ಹೇಳಿದಂತೆ ಕೇಳಬೇಕು ಎನ್ನುವ ಅಪೇಕ್ಷೆ ಇರುವುದು. ಮಕ್ಕಳು ಚಿಕ್ಕವರಿದ್ದಾಗ ದಿನಾಲೂ ಶಾಲೆಗೆ ಹೋಗಿ ಬರಬೇಕು. ಚೆನ್ನಾಗಿ ಓದಬೇಕು. ಉತ್ತಮ ಅಂಕ ತೆಗೆಯಬೇಕೆಂಬ ಅಪೇಕ್ಷೆ. ಮಕ್ಕಳು ದೊಡ್ಡವರಾದಾಗ ಎಲ್ಲಾ ವಿಚಾರವನ್ನು ಚರ್ಚಿಸಬೇಕು, ಕೆಲಸ ಮಾಡಲು ಪ್ರಾರಂಭಿಸಿ ಮೇಲೆ ಸಂಬಳವನ್ನು ತಂದು ನೀಡಬೇಕು. ತಾವು ನೋಡಿದ ವರ/ವಧುವನ್ನೇ ಮದುವೆಯಾಗಬೇಕು. ತಾವು ಹೇಳಿದವರೊಂದಿಗೆ ಗೆಳೆತನ ಇರಬೇಕು. ತಾವು ನಿರ್ಧರಿಸುವ ಕೆಲಸವನ್ನೇ ಮಾಡಬೇಕು. ಮನೆಯಿಂದ ದೂರವಿದ್ದರೆ ದಿನವೂ ಪೋನ್‌ ಮಾಡಬೇಕು. ಒಟ್ಟಾರೆ ಮಕ್ಕಳು ತಮ್ಮ ಇಷ್ಟದಂತೆ ಇರಬೇಕು ಎಂದು ತಂದೆ ತಾಯಿಯರ ಅಪೇಕ್ಷೆಯಾಗಿರುವುದು.ಮಕ್ಕಳಿಗೋ, ಅಪ್ಪ ಅಮ್ಮ ಸ್ನೇಹಿತರಂತೆ ಇರಬೇಕು. ನನ್ನ ಎಲ್ಲಾ ಕಾರ್ಯಕ್ಕೂ ಸಹಕಾರ ನೀಡಬೇಕು. ಸಂಬಳದ ಬಗ್ಗೆ ಮಾತನಾಡಬಾರದು, ಕೆಲಸದ ಬಗ್ಗೆ ವಿಚಾರಿಸಬಾರದು, ಮದುವೆ ಎಂಬುದರಲ್ಲಿ ನನ್ನ ನಿಧಾ೯ರದಲ್ಲಿ ತಲೆ ಹಾಕಬಾರದು. ಅಪ್ಪ ಅಮ್ಮ ನಾನೇ ಏನೇ ತೀಮಾ೯ನ ಕೈಗೊಂಡರು ನನಗೆ ಸಪೋರ್ಟ ಮಾಡಬೇಕು. ನನಗೆ ಅವರ ಸಲಹೆ ಅಗತ್ಯ, ಮಾರ್ಗದರ್ಶನ ಅಗತ್ಯ ಎಂಬುದು ಮಕ್ಕಳ ಅಪೇಕ್ಷೆಯಾಗಿದೆ.ಹುಡುಗ ಹುಡುಗಿ ಪ್ರೀತಿ ನಾನು ಇಷ್ಟಪಡುವ ಹುಡುಗ/ಹುಡುಗಿ ಯಾವ ಹುಡುಗಿ /ಹುಡುಗರೊಂದಿಗೂ ಮಾತನಾಡಬಾರದು, ಅವನ/ಆಕೆಯ ಬಟ್ಟೆಯ ಬಣ್ಣ, ಹಾಕುವ ಚಪ್ಪಲಿ ಇವುಗಳ ಬಗ್ಗೆ ಹೀಗೆ ಇರಬೇಕೆಂಬ ಅಪೇಕ್ಷೆ. ಆತನ/ಆಕೆಯ ಊಟ, ತಿಂಡಿ, ಇತರೆ ಹವ್ಯಾಸಗಳ ಬಗ್ಗೆ ಒಂದು ಪೂರಕವಾಗಿ ಇಲ್ಲಾ ನಕಾರಾತ್ಮಕವಾದ ಅಪೇಕ್ಷೆ ಪರಸ್ಪರ ಇಬ್ಬರಲ್ಲಿಯೂ ಇರುವುದು. ಅಪೇಕ್ಷೆ ಹೆಚ್ಚಾಗಿ ಅದು ಆಗದೇ ಇದ್ದಾಗ ಬೇಸರ; ಬೇಸರ ಕಳೆಯಲು ಸಿಗರೇಟು, ಸರಾಯಿ, ಅಳು, ದುಖ: ಡಿಪ್ರೆಶನ್ ಇತ್ಯಾದಿ.ಇಬ್ಬರೂ ಪಶ್ಚಾತಾಪ ಪಟ್ಟು ಪುನ: ಸೇರಿದಾಗ ಪಶ್ಚಾತ್ತಾಪ. ನಂತರ, ಪ್ರೀತಿಯ ಹೆಸರಿನಲ್ಲಿ ಸಿನಿಮಾ, ಸುತ್ತಾಟ, ದೈಹಿಕ ಸಂಪರ್ಕ. ಪುನ: ದುಖ: ,ಪಶ್ಚಾತಾಪ...ಇದಕ್ಕೆ ಕೊನೆ ಎಂಬುದು ಇಲ್ಲವಾಗಿದೆ.ಗಂಡ ಹೆಂಡತಿ ಪ್ರೀತಿತಾನು ಕೆಲಸ ಮುಗಿಸಿ ಬಂದ ಮೇಲೆ ತನಗೆ ಟೀ ನಿಡಬೇಕು. ಮಾತನಾಡಬೇಕು, ಉತ್ತಮ ಅಡುಗೆ ಮಾಡಿ ಬಡಿಸಬೇಕು, ರಾತ್ರಿ ತನ್ನ ಆಕಾಂಕ್ಷೆಯನ್ನು ಈಡೇರಿಸಬೇಕು, ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಗಂಡಿನದಾದರೆ, ನನ್ನನ್ನು ಬೇರೆ ಬೇರೆ ಕಡೆ ತಿರುಗಾಡಲು ಕರೆದುಕೊಂಡು ಹೋಗಬೇಕು, ಆಭರಣ ಖರೀದಿಸಬೇಕು, ಆಗಾಗ ಉಡುಗೊರೆ ನೀಡಬೇಕು, ಮನೆಗೆ ಹಲವಾರು ರೀತಿಯ ಸಾಮಾನು ತರಬೇಕು, ಜಾಗ ಖರೀದಿಸಬೇಕು, ಮನೆ ಕಟ್ಟಬೇಕು, ಇತ್ಯಾದಿ ಅಪೇಕ್ಷೆಗಳು. ಎಲ್ಲಿ ಹೊಂದಾಣಿಕೆ ಇದೆಯೋ, ಅಥವಾ ಯಾರಾದರೂ ಒಬ್ಬರು ಶರಣಾಗಲು ಇಷ್ಟಪಡುವರೋ ಅಲ್ಲಿ ಎಲ್ಲವೂ ಒಳ್ಳೆಯದು. ಎಲ್ಲಿ ಭಿನ್ನಾಭಿಪ್ರಾಯ ಇದೆಯೋ ಅಲ್ಲಿ ಮೂರನೇ ವ್ಯಕ್ತಿ ಅಂದರೆ ಹಿರಿಯರ ಪ್ರವೇಶ ಬುದ್ದಿಮಾತು, ಕೋರ್ಟ ವಿಚ್ಛೇದನ ಇತ್ಯಾದಿ.“ಜೀವನದಲ್ಲಿ ಇವೆಲ್ಲ ಇರಬೇಕು, ಅಂದರೆ ಮಾತ್ರ ಜೀವನ ಸಾರ್ಥಕ” ಎಂದು ಪ್ರೀತಿಯ ಸುಳಿಯಲ್ಲಿ ಸಿಕ್ಕವರ ಹೇಳಿಕೆಯಾಗಿರುವುದು. ಪ್ರೀತಿಯಿಂದ ನೊಂದವರು “ಇನ್ನೊಮ್ಮೆ ನಾನು ಪ್ರೀತಿಯ ಹುಚ್ಚಿನಲ್ಲಿ ಬೀಳುವುದಿಲ್ಲ” ಎಂದು ಬಡಬಡಿಸುವರು. ಒಟ್ಟಾರೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಮಕ್ಕಳೆ ಆಗಿರುವರು. ಪ್ರೀತಿಯ ಬಗೆ ಮಾತ್ರ ಬೇರೆ ಬೇರೆ ಆಗಿರಬಹುದು ಆದರೆ ಪ್ರೀತಿ ಇಲ್ಲದ ವ್ಯಕ್ತಿ ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲಾ ಎಂದು ಹೇಳಬಹುದಾಗಿದೆ.ಅಪೇಕ್ಷೆ ರಹಿತ ಪ್ರೀತಿ ಸಾಧ್ಯವೇ? . . . ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kannadakali.com/loveandexpectations.html_______ಕನ್ನಡಕಲಿ, ಬಿತ್ತರಿಕೆ, ಫೆಬ್ರುವರಿ ೧೪, ೨೦೨೪ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?ಲೇಖನ ಮತ್ತು ಓದು: ವಿವೇಕ ಬೆಟ್ಕುಳಿ** Introductory Music: To Loom Is to Love - The Mini Vandals, Youtube Audio Library
loading
Comments (1)

bells bells

ತುಂಬಾ ಚೆನ್ನಾಗಿದೆ ಹಂಚುವಿಕೆಯ ಅಗತ್ಯವಿದೆ

Apr 21st
Reply