Discover
Sanatana Spiritual Society
Sanatana Spiritual Society
Author: Girish Chandra Ananthanarayana
Subscribed: 4Played: 248Subscribe
Share
© Girish Chandra Ananthanarayana
Description
In this podcast, I would love to cover various aspects of Sanatana Dharma - from simple shlokaas for Children to Mankutimmana Kagga to Vishnu Sahasranama to Suktaas to Bhagawad Gita.
80 Episodes
Reverse
ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆಬಿಡಿಜೀವ ಸಂಗಾತಿಜೀವಗಳನರಸಿಪಡೆದಂದು ಪೂರ್ಣವದು – ಮಂಕುತಿಮ್ಮ
ಆರಣ್ಯಕದ ಪುಷ್ಪಗಳ ಮೂಸುವವರಾರು? ।
ಆರಿಹರು ಪತಗದುಡುಪನು ಹುಡುಕಿ ಮಚ್ಚಲ್? ॥ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ ।
ಸ್ವಾರಸ್ಯವೆಸಗುವಳೊ! – ಮಂಕುತಿಮ್ಮ ॥ ೫೬೬ ॥
ಚೂರುಗಳು ಹದಿನಾರು ಚಂದ್ರಮಂಡಲಕಂತೆ ।ನೂರಾರು ಚೂರುಗಳು ಸತ್ಯಚಂದ್ರನವು ।।ಸೇರಿಸುತಳವುಗಳನು ಬಗೆಯರಿತು ಬೆಳೆಸುತಿರೆ ।ಸಾರ ಋತಪೂರ್ಣಿಮೆಯೊ – ಮಂಕುತಿಮ್ಮ ।।
Mukunda mAla stotram: Gita-God-Hinduism: MukundamAla Stotram
ಅಣು ಭೂತ ಭೂಗೋಳ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ||
ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || 84
ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ಕೃತಿಕಂತುಕವನದರೊಳಣಗಿರ್ದು= ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ |
ಆರವ್ಯುದಾರ್ತರ್ ಅತ್ಯಾರ್ತರಾಪದವ॥
ರೌರವಿಗೆ ಹಿತ ಮಹಾರೌರವಿಯ ಗೋಳುದನಿ ।
ನಾರಕದೊಳದುಪಾಯ – ಮಂಕುತಿಮ್ಮ ॥ 361
ವಾಸಿಗಳ್ಗಿಹುದೊಂದು = ವಾಸಿಗಳಿಗೆ+ಇಹುದು+ಒಂದು, ಆರವ್ಯುದಾರ್ತರ್ = ಆರವ್ಯುದು+ಆರ್ತರ್, ಅತ್ಯಾರ್ತರಾಪದವ = ಅತಿ+ಆರ್ತರ+ಆಪದವ, ನಾರಕದೊಳುದುಪಾಯ= ನಾರಕದೊಳು+ಅದು+ಉಪಾಯ.
ಧಾರಿಣಿ = ಭೂಮಿ, ಜಗತ್ತು, ಆರವ್ಯುದು = ವಿಚಾರಮಾಡುವುದು,ಆರ್ತರ್=ಸಂಕಟದಿಂದ ಗೋಳಾಡುವವರು, ಅತ್ಯಾರ್ತರ್= ಅತಿಯಾಗಿ ಗೋಳಾಡುವವರು, ರೌರವಿ=ನರಕದಂತ ಕಷ್ಟ ಅನುಭವಿಸುವವನು, ನಾರಕದೊಳುದುಪಾಯ=ಹಿಂಸೆಯಲ್ಲೂ ಒಂದು ಉಪಾಯ.
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ ।
ಶೈಲದಚಲತೆಯಿರಲು ಝರಿಯ ವೇಗ ಸೊಗ ।।
ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು ।
ವೈಲಕ್ಷಣದೇ ಚೆಂದ – ಮಂಕುತಿಮ್ಮ ।। 451
ವಿಸ್ತರವಿರಲು=ವಿಸ್ತರವು+ಇರಲು ಶೈಲದಚಲತೆಯಿರಲು=ಶೈಲದ ಅಚಲತೆ+ಇರಲು,
ಬಯಲಂತಿರಲು=ಬಯಲಂತೆ+ಇರಲು, ಮನೆಯಚ್ಚುಕಟ್ಟಿಂಬು=ಮನೆಯ+ಅಚ್ಚುಕಟ್ಟು+ಇಂಬು
ನೀಲ=ಆಕಾಶ, ಸೊಗ=ಸೊಗಸು-ಚೆಂದ, ಝರಿಯ= ದುಮ್ಮಿಕ್ಕುವ ಜಲಪಾತ, ವೈಲಕ್ಷಣದೇ=ವೈವಿಧ್ಯತೆಯೇ
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ |
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |
ಬಾಯ ಚಪ್ಪರಿಸುವನು – ಮಂಕುತಿಮ್ಮ || 156
ಈಯವನಿಯೊಲೆಯೊಳೆಮ್ಮಯ = ಈ + ಅವನಿ + ಒಲೆಯೊಳು + ಎಮ್ಮಯ// ಬಾಳನಟ್ಟು = ಬಾಳನು + ಅಟ್ಟು
ನೀರ ನೆರೆ ತನ್ನೆದುರಿನಣೆಕಟ್ಟನೊಡೆಯುವುದು ।
ಊರನದು ಕೊಚ್ಚುವುದು ಬದಿಯ ಕಟ್ಟದಿರೆ ।।
ಏರಿಗಳನಿಕ್ಕೆಲದಿ ನಿಲಿಸೆ ಹರಿಯುವುದು ಸಮನೆ ।
ಪೌರುಷದ ನದಿಯಂತು – ಮಂಕುತಿಮ್ಮ ।। 535 ।।
ತನ್ನೆದುರಿನಣೆಕಟ್ಟನೊಡೆಯುವುದು – ತನ್ನ+ಎಂದುರಿನ+ಅಣೆಕಟ್ಟನ್ನು+ಒಡೆಯುವುದು, ಊರನದು = ಊರನ್ನು+ಅದು, ಕಟ್ಟದಿರೆ=ಕಟ್ಟದೆ+ಇರೆ, ಏರಿಗಳನಿಕ್ಕೆಲದಿ =ಏರಿಗಳನು+ಇಕ್ಕೆಲದಿ,ನದಿಯಂತು=ನದಿಯು+ಅಂತು,
ನೆರೆ=ಪ್ರವಾಹ, ಬದಿಯ=ಪಕ್ಕದ, ಇಕ್ಕೆಲದಿ=ಎರಡೂ ಕಡೆ, ನಿಲಿಸೆ=ನಿಲ್ಲಿಸಲು, ಪೌರುಷದ=ಶಕ್ತಿಯ
ರಾಮನುಚ್ವಾಸವಲೆದಿರದೆ ರಾವಣನೆಡೆಗೆ |
ರಾಮನುಂ ದಶಕಂಠನೆಲರನುಸಿರಿರನೆ ||
ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? |
ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ || 132 ||
ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರಿರನೆ//
ರಾಮರಾವಣರುಸಿರ್ಗಳಿಂದು = ರಾಮ + ರಾವಣರ + ಉಸಿರುಗಳು + ಇಂದು // ನಮ್ಮೊಳಗಿರವೇ = ನಮ್ಮೊಳಗೇ + ಇರವೇ // ಪೋಸತೇನೋ = ಪೊಸತು + ಏನೋ
ಎಲರನು = ಗಾಳಿಯನು // ಉಚ್ವಾಸವು = ಶ್ವಾಶದ ಗಾಳಿ // ಪೋಸತೇನೋ = ಹೊಸದೇನೋ?
ಪುಲಿಸಿಂಘದುಚ್ವಾಸ, ಹಸು ಹುಲ್ಲೆ ಹಯದುಸಿರು |
ಹುಳು ಹಾವಿಲಿಯಸುಯ್ಲು, ಹಕ್ಕಿ ಹದ್ದುಯ್ಲು ||
ಕಲೆತಿರ್ಪುವೀಯಲ್ಲ ನಾಮುಸಿರ್ವೆಲರಿನಲಿ |
ಕಲಬೆರಕೆ ಜಗದುಸಿರು – ಮಂಕುತಿಮ್ಮ || 131
ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು ।
ಕ್ಷೀರವದು, ಘೃತವಿದ-ದರೊಳ-ಗೆನ್ನುತೊಂದು ।।
ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು ।
ಮೂರಿಂತು ಮತವಿವರ – ಮಂಕುತಿಮ್ಮ ।। 771
ಧರೆಯ ಬದುಕೇನದರ ಗುರಿಯೇನು ಫಲವೇನು? I
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ II
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ I
ನರನು ಸಾದಿಪುದೇನು ? – ಮಂಕು ತಿಮ್ಮ II 27
ಧರೆ = ಭೂಮಿ, ಬಳಸು= ಸುತ್ತು, ಪರಿಭ್ರಮಣೆ = ಸುತ್ತಾಟ, ಮೃಗ= ಪ್ರಾಣಿ, ಖಗ = ಪಕ್ಷಿ
ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ |
ಗುಣಿಸುವನು ಭೂತಶಕ್ತಿಗಳನದರಿಂದೇಂ ||
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ವ |
ವಣಗಿಹುದು ಮೂಲವದು – ಮಂಕುತಿಮ್ಮ|| 113
ಅಣುಸಂಖ್ಯೆಯೆಣಿಸುವನು = ಅಣುಸಂಖ್ಯೆಯನು + ಎಣಿಸುವನು | ಭೂತಶಕ್ತಿಗಳನದರಿಂದೇಂ = ಭೂತ + ಶಕ್ತಿಗಳನು + ಅದರಿಂದ+ ಏನು|
ಗಣಿತಸಾಧ್ಯದ = ಗಣಿತ + ಸಾಧ್ಯದ | ಹಿಂದಗಣ್ಯದ = ಹಿಂದೆ+ ಅಗಣ್ಯದ | ಮಹತತ್ವವಣಗಿಹುದು= ಮಹತತ್ವವವು + ಅನಗಿಹುದು | ಮೂಲವದು = ಮೂಲವು + ಅದು
ಗುಹೆಯಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ ।
ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ।।
ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- ।
ರ್ವಹಿಸುವುದೇ ಜಾಣ್ಮೆಯಲ – ಮಂಕುತಿಮ್ಮ।। 482
ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ ।
ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು ।।
ಉನ್ನತಿಯನಾತ್ಮವನು ತಡೆದಿಡುವ ಪಾಶಗಳು ।
ಛಿನ್ನವಾದಂದೆ ಸೊಗ – ಮಂಕುತಿಮ್ಮ ।। 678
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ |
ಜೀವವಾಸನೆಗಳಲಿ ಪೂರ್ವಕೃತವೆನಿಸಿ ||
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ವ |
ತ್ರೈವಿಧದೊಳಿರುತಿಹುದು – ಮಂಕುತಿಮ್ಮ || 151
ದೈವವೆನಿಸಿರುತೆ = ದೈವ+ಎನಿಸಿ+ ಇರುತೆ// ತ್ರೈವಿಧದೊಳಿರುತಿಹುದು = ತ್ರೈವಿಧದೊಳು + ಇರುತಿಹುದು.
ದೈವಕೃಪೆಯನುವುದೇಂ? ಪರಸತ್ವನವವೃಷ್ಟಿ ।
ಜೀವಗುಣ ಪಕ್ವಪಟ್ಟಂತದರ ವೇಗ ।।
ಭಾವಚೋದನೆಗಳಲಿ ಭಾಹ್ಯಸಾಧನೆಗಳಲಿ।
ತೀವಿ ದೊರೆಕೊಳುವುದದು – ಮಂಕುತಿಮ್ಮ ।। 505
ದೈವಕೃಪೆಯನುವುದೇಂ=ದೈವಕೃಪೆ+ಎನುವುದು+ಅದೇಂ, ಪಕ್ವಪಟ್ಟಂತದರ=ಪಕ್ವ+ಪಟ್ಟಂತೆ+ಅದರ, ದೊರೆಕೊಳುವುದದು=ದೊರೆ+ಕೊಳುವುದು+ಅದು
ಪರಸತ್ವನವವೃಷ್ಟಿ= ಪರಮಾತ್ಮನ ನಿತ್ಯನೂತನ ಕೃಪಾಧಾರೆ, ಭಾವಚೋದನೆ= ಅಂತರಂಗದ ಆಲೋಚನೆಗಳಲ್ಲಿ, ಪಕ್ವಪಟ್ಟಂತೆ=ಅನುಭವಿಗಳಾದಂತೆ ದೊರೆಕೊಳುವು=ಸಿಗುವುದು,
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ ।
ಕುಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ।।
ಎಂದೆಂದುಮಶ್ವತ್ತ ಹಳೆಹೊಸದು, ತಾನದಾ ।
ಸ್ಪಂದನವೋ ಬ್ರಹ್ಮನದು – ಮಂಕುತಿಮ್ಮ || 561
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ ।
ತೀವಿರ್ಪುದದು ಕೆಳಗೆ ನಮ್ಮ ಲೋಕದಲ್ಲಿ ।।
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು ।
ಸಾವು ಮರಕೇನಿಲ್ಲ – ಮಂಕುತಿಮ್ಮ।। 560
ಪರಮಪದದಲಿ ನೋಡು; ಬೇರುಗಳ್ ವ್ಯೋಮದಲಿ ।
ಧರೆಗಿಳಿದ ಕೊಂಬೆರೆಂಬೆಗಳು, ಬಿಳಲುಗಳು ।।
ಚಿರಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ ।
ಪರಿಕಿಸಿದರರ್ಥವನು – ಮಂಕುತಿಮ್ಮ।। 559
ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು ।
ಕತ್ತಲೆಯ ಮೊಡಕು ಮೂಲೆಗಳ ಸೇರದಿರು ।।
ಭಾಸ್ಕರನನುಗ್ರಹವೆ ನೂತ್ನ ಜೀವನಸತ್ವ ।
ಮೃತ್ಯು ನಿನಗಲ್ಪತೆಯೊ – ಮಂಕುತಿಮ್ಮ ।। 913
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ।
ಮೇರುವನು ಮರೆತಂದೆ ನಾರಕಕೆ ದಾರಿ ।।
ದೂರವಾದೊಡದೇನು ? ಕಾಲು ಕುಂಟಿರಲೇನು ।
ಊರ ನೆನಪೇ ಬಲವೋ – ಮಂಕುತಿಮ್ಮ ।। 762
ಗುರಿಯಿರಲಿ=ಗುರಿ+ಇರಲಿ, ಮರೆತಂದೆ=ಮರೆತ+ಅಂದೆ,ದೂರವಾದೊಡದೇನು=ದೂರವು+ಆದೊಡೆ+ಏನು, ಕುಂಟಿರಲೇನು=ಕುಂಟು+ಇರಲು+ಏನು
ಧಾರುಣಿ=ಭೂಮಿ, ಮೇರು=(ಪರ್ವತ) ಉನ್ನತ, ನಾರಕ=ನರಕ(ಜಗತ್ತಿನ ಕಷ್ಟಭರಿತವಾದ ಜೀವನ )





