Discover
Quran In Kannada
Quran In Kannada
Author: Quran Kannada Podcast
Subscribed: 9Played: 8Subscribe
Share
© Quran Kannada Podcast
Description
This is Quran translated to Kannada by Abdussalam Puthige. This is noted for its simple language, lucid style and for its strict loyalty to the original text.
He has also voiced the same. The first edition of this translation was published in August 2012 by Madhyama Prakashana, Bangalore.
Note: This podcast is created by downloading the audio from the android app "Quran in Kannada"
https://play.google.com/store/apps/details?id=com.nzymic.kquran

114 Episodes
Reverse
ಅಧ್ಯಾಯ 114: ಅನ್ನಾಸ್ (ಮಾನವರು)
ಸೂಕ್ತ : 1
ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ.
ಸೂಕ್ತ : 2
ಅವನು (ಅಲ್ಲಾಹನು) ಮಾನವರ ದೊರೆ,
ಸೂಕ್ತ : 3
ಮಾನವರ ಆರಾಧ್ಯ.
ಸೂಕ್ತ : 4
(ಮನಸ್ಸಿನಲ್ಲಿ) ಗೊಂದಲ ಬಿತ್ತಿ ಹಿಂದೆ ಸರಿದು ಬಿಡುವವನ (ಶೈತಾನನ) ಕೆಡುಕಿನಿಂದ (ನಾನು ಅಲ್ಲಾಹನ ರಕ್ಷಣೆ ಕೋರುತ್ತೇನೆ).
ಸೂಕ್ತ : 5
ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ.
ಸೂಕ್ತ : 6
ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 113: ಅಲ್ ಫಲಕ್(ಮುಂಜಾವು)
ಸೂಕ್ತ : 1
ಹೇಳಿರಿ; ನಾನು, ಪ್ರಭಾತದ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ -
ಸೂಕ್ತ : 2
ಅವನು ಸೃಷ್ಟಿಸಿರುವ ಎಲ್ಲವುಗಳ ಕೆಡುಕಿನಿಂದ (ಸುರಕ್ಷಿತನಾಗಿರಲು)
ಸೂಕ್ತ : 3
ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)
ಸೂಕ್ತ : 4
ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ
ಸೂಕ್ತ : 5
ಮತ್ತು ಅಸೊಯೆ ಪಡುವವನು ಅಸೊಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ).
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 112: ಅಲ್ ಇಖ್ಲಾಸ್ (ಏಕಾಗ್ರತೆ)
ಸೂಕ್ತ : 1
ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು)
ಸೂಕ್ತ : 2
ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು.
ಸೂಕ್ತ : 3
ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ.
ಸೂಕ್ತ : 4
ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 111: ಅಲ್ ಲಹಬ್ (ಜ್ವಾಲೆ)
ಸೂಕ್ತ : 1
ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು.
ಸೂಕ್ತ : 2
ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ,
ಸೂಕ್ತ : 3
ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು,
ಸೂಕ್ತ : 4
ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ.
ಸೂಕ್ತ : 5
ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 110: ಅನ್ನಸ್ರ್ (ಸಹಾಯ)
ಸೂಕ್ತ : 1
ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ
ಸೂಕ್ತ : 2
ಮತ್ತು ಜನರು ಸಮೂಹಗಳಾಗಿ ಅಲ್ಲಾಹನ ಧರ್ಮದೊಳಗೆ ಪ್ರವೇಶಿಸುವುದನ್ನು ನೀವು ಕಂಡಾಗ,
ಸೂಕ್ತ : 3
ನಿಮ್ಮೊಡೆಯನ ಪ್ರಶಂಸೆಯೊಂದಿಗೆ, ಅವನ ಗುಣಗಾನ ಮಾಡಿರಿ ಮತ್ತು ಅವನಿಂದ ಕ್ಷಮೆ ಯಾಚಿಸಿರಿ. ಖಂಡಿತವಾಗಿಯೂ ಅವನು ಪದೇ ಪದೇ ಪಶ್ಚಾತ್ತಾಪ ಸ್ವೀಕರಿಸುವವನಾಗಿದ್ದಾನೆ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 109: ಅಲ್ ಕಾಫಿರೂನ್ (ಧಿಕ್ಕಾರಿಗಳು)
ಸೂಕ್ತ : 1
(ದೂತರೇ,) ಹೇಳಿರಿ; ಧಿಕ್ಕಾರಿಗಳೇ,
ಸೂಕ್ತ : 2
ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ.
ಸೂಕ್ತ : 3
ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ.
ಸೂಕ್ತ : 4
ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ.
ಸೂಕ್ತ : 5
ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ.
ಸೂಕ್ತ : 6
ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 108: ಅಲ್ ಕೌಸರ್ (ಸಮೃದ್ಧಿ)
ಸೂಕ್ತ : 1
(ದೂತರೇ,) ಖಂಡಿತವಾಗಿಯೂ ನಾವು (ಅಲ್ಲಾಹ್) ನಿಮಗೆ ‘ಕೌಸರ್’ ನೀಡಿದ್ದೇವೆ.
ಸೂಕ್ತ : 2
ನೀವಿನ್ನು ನಿಮ್ಮೊಡೆಯನಿಗಾಗಿ ನಮಾಝ್ ಸಲ್ಲಿಸಿರಿ ಮತ್ತು ಬಲಿದಾನ ನೀಡಿರಿ.
ಸೂಕ್ತ : 3
ಖಂಡಿತವಾಗಿಯೂ ನಿಮ್ಮ ಶತ್ರುವೇ ನಿರ್ನಾಮವಾಗುವನು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 107: ಅಲ್ ಮಾಊನ್ (ಸಣ್ಣ ನೆರವು)
ಸೂಕ್ತ : 1
ನೀವು ಕಂಡಿರಾ, ಪ್ರತಿಫಲದ ದಿನವನ್ನು ಸುಳ್ಳೆಂದು ತಿರಸ್ಕರಿಸುವಾತನನ್ನು ?
ಸೂಕ್ತ : 2
ಅವನೇ, ಅನಾಥನನ್ನು ದೂರ ದಬ್ಬುವವನು.
ಸೂಕ್ತ : 3
ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು.
ಸೂಕ್ತ : 4
(ಈ ರೀತಿ) ನಮಾಝ್ ಸಲ್ಲಿಸುವವರಿಗೆ ಶಾಪವಿದೆ;
ಸೂಕ್ತ : 5
ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ.
ಸೂಕ್ತ : 6
ಅವರು ಡಂಬಾಚಾರ ಮಾಡುತ್ತಾರೆ.
ಸೂಕ್ತ : 7
ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 106: ಕುರೈಶ್ (ಕುರೈಶರು)
ಸೂಕ್ತ : 1
(ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದ್ದಕ್ಕಾಗಿ,
ಸೂಕ್ತ : 2
ಅವರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲದ ಪ್ರಯಾಣವನ್ನು ಪರಿಚಿತಗೊಳಿಸಿದ್ದಕ್ಕಾಗಿ.
ಸೂಕ್ತ : 3
ಅವರು ಈ ಭವನ (ಕಅ್'ಬಃ)ದ ಒಡೆಯ (ಅಲ್ಲಾಹ)ನನ್ನು ಪೂಜಿಸಲಿ.
ಸೂಕ್ತ : 4
ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ) ಅವರಿಗೆ ಶಾಂತಿ ಒದಗಿಸಿದವನು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 105: ಅಲ್ ಫೀಲ್ (ಆನೆ)
ಸೂಕ್ತ : 1
ನೀವು ಕಂಡಿಲ್ಲವೇ, ನಿಮ್ಮೊಡೆಯನು ಆನೆಯವರಿಗೆ ಏನು ಮಾಡಿದನೆಂದು?
ಸೂಕ್ತ : 2
ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ?
ಸೂಕ್ತ : 3
ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು.
ಸೂಕ್ತ : 4
ಅವು ಅವರ ಮೇಲೆ ‘ಸಿಜ್ಜೀಲ್’ (ಬೆಂದ ಆವೆ ಮಣ್ಣಿನ ಹರಳು) ಕಲ್ಲುಗಳನ್ನು ಎಸೆಯುತ್ತಿದ್ದವು.
ಸೂಕ್ತ : 5
ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 104: ಅಲ್ ಹುಮಝಃ (ಮೂದಲಿಸುವವನು)
ಸೂಕ್ತ : 1
ವಿನಾಶ ಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ.
ಸೂಕ್ತ : 2
ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ.
ಸೂಕ್ತ : 3
ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ.
ಸೂಕ್ತ : 4
ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು.
ಸೂಕ್ತ : 5
ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು?
ಸೂಕ್ತ : 6
ಅದು ಅಲ್ಲಾಹನು ಉರಿಸಿದ ಬೆಂಕಿ.
ಸೂಕ್ತ : 7
ಅದು ಹೃದಯಗಳನ್ನೂ ತಲುಪುವುದು.
ಸೂಕ್ತ : 8
ಅದನ್ನು ಅವರ ಮೇಲೆ ಮುಚ್ಚಿಬಿಡಲಾಗುವುದು.
ಸೂಕ್ತ : 9
ಉದ್ದದ ಸ್ತಂಭಗಳ ರೂಪದಲ್ಲಿ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 103: ಅಲ್ ಅಸ್ರ್ (ಕಾಲ)
ಸೂಕ್ತ : 1
ಕಾಲದಾಣೆ.
ಸೂಕ್ತ : 2
ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ.
ಸೂಕ್ತ : 3
ನಂಬಿಕೆ ಇರಿಸಿದ, ಒಳ್ಳೆಯ ಕೆಲಸಗಳನ್ನು ಮಾಡಿದ ಮತ್ತು ಪರಸ್ಪರರಿಗೆ ಸತ್ಯವನ್ನು ಬೋಧಿಸಿದ ಮತ್ತು ಸಹನೆಯನ್ನು ಬೋಧಿಸಿದವರ ಹೊರತು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 102: ಅತ್ತಕಾಸುರ್ (ಅಧಿಕದ ಚಿಂತೆ)
ಸೂಕ್ತ : 1
(ಮಾನವರೇ) ಹೆಚ್ಚೆಚ್ಚು ಗಳಿಸುವ ಸ್ಪರ್ಧೆಯು ನಿಮ್ಮನ್ನು ಮೈಮರೆಸಿದೆ.
ಸೂಕ್ತ : 2
ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ).
ಸೂಕ್ತ : 3
ಹಾಗಲ್ಲ, ನಿಮಗೆ ಬೇಗನೇ ತಿಳಿಯಲಿದೆ.
ಸೂಕ್ತ : 4
ಖಂಡಿತ ಹಾಗಲ್ಲ, ನಿಮಗೆ ಬೇಗನೇ ತಿಳಿಯಲಿದೆ.
ಸೂಕ್ತ : 5
ಹಾಗಲ್ಲ, ನಿಮಗೆ ಖಚಿತವಾದ ಜ್ಞಾನದೊಂದಿಗೆ (ಈ ವಿಷಯವು) ತಿಳಿದಿದ್ದರೆ ಚೆನ್ನಾಗಿತ್ತು.
ಸೂಕ್ತ : 6
ನೀವು ನರಕವನ್ನು ಖಂಡಿತ ಕಾಣುವಿರಿ.
ಸೂಕ್ತ : 7
ಮತ್ತೆ, ನಂಬಿಕೆ ತುಂಬಿದ ಕಣ್ಣುಗಳಿಂದ ನೀವು ಅದನ್ನು ಖಂಡಿತ ಕಾಣುವಿರಿ.
ಸೂಕ್ತ : 8
ಕೊನೆಗೆ ಆ ದಿನ ನಿಮ್ಮೊಡನೆ, ನಿಮಗೆ ನೀಡಲಾಗಿದ್ದ ಕೊಡುಗೆಗಳ ಕುರಿತು ಪ್ರಶ್ನಿಸಲಾಗುವುದು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 101: ಅಲ್ ಕ್ವಾರಿಅಃ (ಭಾರೀ ಆಘಾತ)
ಸೂಕ್ತ : 1
ಭಾರೀ ಆಘಾತ.
ಸೂಕ್ತ : 2
ಏನದು, ಭಾರೀ ಆಘಾತ?
ಸೂಕ್ತ : 3
ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು?
ಸೂಕ್ತ : 4
ಅಂದು ಜನರು ಚದರಿದ ಹಾತೆಗಳಂತಾಗುವರು.
ಸೂಕ್ತ : 5
ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು.
ಸೂಕ್ತ : 6
ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ -
ಸೂಕ್ತ : 7
- ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು.
ಸೂಕ್ತ : 8
ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ -
ಸೂಕ್ತ : 9
- ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು.
ಸೂಕ್ತ : 10
ಅದೇನೆಂದು ನಿಮಗೇನು ಗೊತ್ತು?
ಸೂಕ್ತ : 11
ಅದು ಉರಿಯುವ ಬೆಂಕಿಯಾಗಿರುವುದು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 100: ಅಲ್ ಆದಿಯಾತ್ (ಓಡುವವುಗಳು)
ಸೂಕ್ತ : 1
ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.
ಸೂಕ್ತ : 2
ಅವು ಕಿಡಿ ಹಾರಿಸುತ್ತವೆ.
ಸೂಕ್ತ : 3
ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ.
ಸೂಕ್ತ : 4
ಅವು ಧೂಳೆಬ್ಬಿಸಿ ಬಿಡುತ್ತವೆ.
ಸೂಕ್ತ : 5
ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ.
ಸೂಕ್ತ : 6
ಮನುಷ್ಯನು ಖಂಡಿತ ತನ್ನ ಒಡೆಯನಿಗೆ ಕೃತಘ್ನನಾಗಿದ್ದಾನೆ.
ಸೂಕ್ತ : 7
ಇದಕ್ಕೆ ಖಂಡಿತ ಅವನೇ ಸಾಕ್ಷಿಯಾಗಿದ್ದಾನೆ.
ಸೂಕ್ತ : 8
ಅವನು ಸಂಪತ್ತನ್ನು ತುಂಬಾ ಪ್ರೀತಿಸುತ್ತಾನೆ.
ಸೂಕ್ತ : 9
ಅವನಿಗೆ ತಿಳಿದಿಲ್ಲವೇ, ಗೋರಿಗಳೊಳಗೆ ಇರುವವರನ್ನೆಲ್ಲಾ ಹೊರ ತೆಗೆಯಲಾಗುವ ದಿನದ ಕುರಿತು?
ಸೂಕ್ತ : 10
ಮತ್ತು ಮನಸ್ಸುಗಳೊಳಗೆ ಇರುವ ಎಲ್ಲವನ್ನೂ ಪ್ರಕಟ ಪಡಿಸಲಾಗುವ ದಿನದ ಕುರಿತು?
ಸೂಕ್ತ : 11
ಅಂದು ಅವರ ಒಡೆಯನು ಖಂಡಿತ ಅವರ ಕುರಿತು ಎಲ್ಲವನ್ನೂ ಬಲ್ಲವನಾಗಿರುವನು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 99: ಅಝ್ಝಿಲ್‌ಝಾಲ್ (ಕಂಪನ)
ಸೂಕ್ತ : 1
ಭೂಮಿಯು ಭೂಕಂಪದಿಂದ ಕಂಪಿಸುವಾಗ,
ಸೂಕ್ತ : 2
ಮತ್ತು ಭೂಮಿಯು ತನ್ನ ಹೊರೆಯನ್ನೆಲ್ಲಾ ಹೊರ ಚೆಲ್ಲುವಾಗ,
ಸೂಕ್ತ : 3
ಮತ್ತು ಮಾನವನು - ಇದಕ್ಕೇನಾಗಿ ಬಿಟ್ಟಿದೆ? ಎನ್ನುವಾಗ,
ಸೂಕ್ತ : 4
ಅಂದು ಅದು (ಭೂಮಿಯು) ತನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬಿಡುವುದು.
ಸೂಕ್ತ : 5
ಏಕೆಂದರೆ, ನಿಮ್ಮ ಒಡೆಯನು (ಹಾಗೆ ಮಾಡಲು) ಅದಕ್ಕೆ ಆದೇಶಿಸಿರುವನು.
ಸೂಕ್ತ : 6
ಅಂದು ಜನರು ಗುಂಪು ಗುಂಪಾಗಿ ಹೊರಬರುವರು - ಅವರ ಕರ್ಮಗಳನ್ನು ಅವರಿಗೆ ತೋರಿಸಲಿಕ್ಕಾಗಿ.
ಸೂಕ್ತ : 7
ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು.
ಸೂಕ್ತ : 8
ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 98: ಅಲ್ ಬಯ್ಯಿನಃ (ಸ್ಪಷ್ಟ ಪುರಾವೆ)
ಸೂಕ್ತ : 1
ಗ್ರಂಥದವರ ಮತ್ತು ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು, ತಮ್ಮ ಬಳಿಗೆ ಸ್ಪಷ್ಟ ಪುರಾವೆಯು ಬಂದು ಬಿಡುವ ತನಕ (ತಮ್ಮ ಧೋರಣೆಯನ್ನು) ಕೈ ಬಿಡುವವರಾಗಿರಲಿಲ್ಲ.
ಸೂಕ್ತ : 2
(ಇದೀಗ) ಪಾವನ ಹೊತ್ತಗೆಯನ್ನು (ಗ್ರಂಥವನ್ನು) ಓದಿ ಕೇಳಿಸುವ, ಅಲ್ಲಾಹನ ದೂತರು (ಅವರ ಬಳಿಗೆ ಬಂದಿರುವರು).
ಸೂಕ್ತ : 3
ಅದರಲ್ಲಿ ಖಚಿತ ಆದೇಶಗಳು ಲಿಖಿತವಾಗಿವೆ.
ಸೂಕ್ತ : 4
(ಈ ಹಿಂದೆಯೂ) ಗ್ರಂಥದವರು, ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ಬಳಿಕವಷ್ಟೇ, ಛಿನ್ನ ಭಿನ್ನರಾಗಿದ್ದರು.
ಸೂಕ್ತ : 5
ನಿಷ್ಠೆಯನ್ನು ಅವನಿಗೇ (ಅಲ್ಲಾಹನಿಗೇ) ಮೀಸಲಾಗಿಟ್ಟು, ಏಕಾಗ್ರತೆಯೊಂದಿಗೆ ಅಲ್ಲಾಹನನ್ನು ಆರಾಧಿಸಬೇಕು, ನಮಾಝನ್ನು ಸಲ್ಲಿಸಬೇಕು ಮತ್ತು ಝಕಾತನ್ನು ಪಾವತಿಸಬೇಕು - ಇದುವೇ ಸ್ಥಿರವಾದ ಧರ್ಮ ಎಂದೇ (ಈ ಹಿಂದೆಯೂ) ಅವರಿಗೆ ಆದೇಶಿಸಲಾಗಿತ್ತು.
ಸೂಕ್ತ : 6
ಗ್ರಂಥದವರ ಹಾಗೂ ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು ಸದಾಕಾಲ ನರಕದಲ್ಲಿರುವರು - ಅವರೇ ಅತ್ಯಂತ ನೀಚ ಜೀವಿಗಳು.
ಸೂಕ್ತ : 7
ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನು ಮಾಡಿದವರು - ಖಂಡಿತ ಅವರೇ ಅತ್ಯುತ್ತಮ ಜೀವಿಗಳು.
ಸೂಕ್ತ : 8
ಅವರ ಪ್ರತಿಫಲವು ಅವರ ಒಡೆಯನ ಬಳಿ - ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗದ ರೂಪದಲ್ಲಿದೆ. ಅದರಲ್ಲಿ ಅವರು ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾಗಿರುವರು. ಇದು ತಮ್ಮ ಒಡೆಯನಿಗೆ ಅಂಜುತ್ತಿದ್ದವರಿಗಾಗಿ ಇರುವ ಪ್ರತಿಫಲ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)
ಸೂಕ್ತ : 1
ನಾವು ಇದನ್ನು ನಿರ್ಣಾಯಕ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು.
ಸೂಕ್ತ : 2
ನಿರ್ಣಾಯಕ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು?
ಸೂಕ್ತ : 3
ಆ ನಿರ್ಣಾಯಕ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ.
ಸೂಕ್ತ : 4
ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ.
ಸೂಕ್ತ : 5
ಶಾಂತಿಯಾಗಿರುತ್ತದೆ - ಅದು, ಬೆಳಗಿನ ಉದಯದ ತನಕ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 96: ಅಲ್ ಅಲಕ್ (ರಕ್ತ ಪಿಂಡ)
ಸೂಕ್ತ : 1
ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ.
ಸೂಕ್ತ : 2
ಅವನು ಮನುಷ್ಯನನ್ನು ಹೆಪ್ಪು ಗಟ್ಟಿದ ರಕ್ತದಿಂದ ಸೃಷ್ಟಿಸಿರುವನು.
ಸೂಕ್ತ : 3
ಓದಿರಿ. ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ.
ಸೂಕ್ತ : 4
ಅವನು ಲೇಖನಿಯ ಮೂಲಕ ಕಲಿಸಿದನು.
ಸೂಕ್ತ : 5
ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು.*
ಸೂಕ್ತ : 6
ಆದರೆ ಮನುಷ್ಯನು ಮಾತ್ರ ವಿದ್ರೋಹವೆಸಗುತ್ತಾನೆ.
ಸೂಕ್ತ : 7
ಅವನು ತನ್ನನ್ನು ತೀರಾ ಸ್ವತಂತ್ರನಾಗಿ ಕಾಣುತ್ತಾನೆ.
ಸೂಕ್ತ : 8
ಖಂಡಿತ (ಎಲ್ಲರೂ) ನಿಮ್ಮ ಒಡೆಯನ ಕಡೆಗೇ ಮರಳ ಬೇಕಾಗಿದೆ.
ಸೂಕ್ತ : 9
ನೀವು ನೋಡಿದಿರಾ, ತಡೆಯುವವನನ್ನು?
ಸೂಕ್ತ : 10
(ನಮ್ಮ) ದಾಸನು ನಮಾಝ್ ಸಲ್ಲಿಸುವಾಗ (ತಡೆಯುವವನನ್ನು)?
ಸೂಕ್ತ : 11
ನೀವು ನೋಡಿದಿರಾ? ಒಂದು ವೇಳೆ ಅವನು ಸರಿದಾರಿಯಲ್ಲಿದ್ದರೆ,
ಸೂಕ್ತ : 12
ಅಥವಾ ಅವನು ಸತ್ಯನಿಷ್ಠೆಯನ್ನು ಬೋಧಿಸಿದ್ದರೆ (ಅವನನ್ನು ತಡೆದವನ ಗತಿ ಏನಾದೀತು?)
ಸೂಕ್ತ : 13
ನೀವು ನೋಡಿದಿರಾ? ಅವನು (ತಡೆಯುವವನು, ಸತ್ಯವನ್ನು) ತಿರಸ್ಕರಿಸುವವನು ಹಾಗೂ ಕಡೆಗಣಿಸುವವನಾಗಿದ್ದರೆ (ಅವನ ಗತಿ ಏನಾದೀತು?)
ಸೂಕ್ತ : 14
ಅಲ್ಲಾಹನು ನೋಡುತ್ತಿರುವನೆಂದು ಅವನಿಗೆ ತಿಳಿಯದೇ?
ಸೂಕ್ತ : 15
ಹಾಗಲ್ಲ, ಒಂದು ವೇಳೆ ಅವನು ತನ್ನನ್ನು ತಡೆದುಕೊಳ್ಳದಿದ್ದರೆ, ನಾವು ಅವನ ಮುಂಜುಟ್ಟನ್ನು ಹಿಡಿದು ಎಳೆದೊಯ್ಯುವೆವು.
ಸೂಕ್ತ : 16
ಅದು ಒಬ್ಬ ಸುಳ್ಳುಗಾರ, ಪಾಪಿಯ ಮುಂಜುಟ್ಟು.
ಸೂಕ್ತ : 17
ಅವನೀಗ ತನ್ನ ಕೂಟವನ್ನು ಕರೆಯಲಿ.
ಸೂಕ್ತ : 18
ನಾವು ನಮ್ಮ ಪಡೆಯನ್ನು ಕರೆಯುವೆವು.
ಸೂಕ್ತ : 19
(ದೂತರೇ,) ಬೇಡ. ನೀವು ಅವನ ಆದೇಶವನ್ನು ಪಾಲಿಸಬೇಡಿ. ನೀವು ಸಾಷ್ಟಾಂಗವೆರಗಿರಿ ಮತ್ತು (ನಮಗೆ) ನಿಕಟರಾಗಿರಿ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
ಅಧ್ಯಾಯ 95: ಅತ್ತೀನ್ (ಅಂಜೂರ)
ಸೂಕ್ತ : 1
ಅಂಜೂರದಾಣೆ ಹಾಗೂ ಝೈತೂನ್‌ನ ಆಣೆ.
ಸೂಕ್ತ : 2
ಸೀನೀನ್ (ಸಿನಾಯ್) ಪರ್ವತದಾಣೆ.
ಸೂಕ್ತ : 3
ಮತ್ತು ಈ ಪ್ರಶಾಂತ ನಗರ (ಮಕ್ಕಃ)ದಾಣೆ.
ಸೂಕ್ತ : 4
ನಾವು ಮನುಷ್ಯನನ್ನು ಅತ್ಯುತ್ತಮ ಸ್ಪರೂಪದಲ್ಲಿ ಸೃಷ್ಟಿಸಿರುವೆವು.
ಸೂಕ್ತ : 5
ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು.
ಸೂಕ್ತ : 6
ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಹೊರತು - ಅವರಿಗೆ ಅಪಾರ ಪ್ರತಿಫಲವಿದೆ.
ಸೂಕ್ತ : 7
(ಮಾನವನೇ,) ಇಷ್ಟಾಗಿಯೂ ನೀನು ಪ್ರತಿಫಲದ ದಿನವನ್ನು ತಿರಸ್ಕರಿಸುವುದೇಕೆ?
ಸೂಕ್ತ : 8
ಎಲ್ಲ ತೀರ್ಪುಗಾರರಿಗಿಂತ ದೊಡ್ಡ ತೀರ್ಪುಗಾರನು ಅಲ್ಲಾಹನಲ್ಲವೇ?
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran