ನಾನು ಮತ್ತು ಅವನು- ವಿಭಾ ಪುರೋಹಿತ ಕವನ
Update: 2022-03-08
Description
ಒಪ್ಪಿದ್ದೇವೋ ಇಲ್ಲವೋ ಆದರೆ ಅಪ್ಪಿದ್ದಂತೂ ಸತ್ಯ ನಾನು ಮತ್ತು ಅವನು! ಇಬ್ಬರೂ ಅಭೇಧ್ಯ ನನ್ನಲ್ಲಿ ಅವನು ಅವನಲ್ಲಿ ನಾನು ಆದರೂ ಅವನ ಲೆಕ್ಕದ ಮುಂದೆ ನನ್ನದು ತಲೆಕೆಳಗೆ ಎಲ್ಲ ಕ್ಷಣಗಳೂ ಅವ ಮುದ್ದಿಸುವದಿಲ್ಲ ಎದ್ದು ಬಿದ್ದು ನಾನವನ ಅನುಸರಿಸಲೇ ಬೇಕು ಬಹುತೇಕ ಅವನು ನನ್ನ ಪರವಾಗಿರುವುದಿಲ್ಲ ನಿರ್ಧಾರಗಳು ತಪ್ಪಾಗಿ ಗೀರು ಬಾರುಗಳು ಮೂಡಿದ್ದಿದೆ, ಅಪರೂಪಕ್ಕೊಮ್ಮೆಮ್ಮೆ ಜೀವನದ ರುಚಿಗಳನ್ನೇಲ್ಲ ಬಟ್ಟಲಲ್ಲಿ ಬಡಿಸಿದ್ದಿದೆ ಬೇವು ಬೆಲ್ಲಗಳ ಕೂಟ ಅವನದು ಸರಕುಖಾಲಿಯಾದಾಗೆಲ್ಲ ಮತ್ತೆ ಕಿರಣ ಕಾಣಿಸುವ ಆತ್ಮೀಯ ನಿರಂತರ ನಿಶ್ಚಲ ನಿರುಪಾಯ ನಾನು ಮತ್ತು ಬದುಕು ಅವ ಕಲೆಗಾರ ಮಾಯಗಾರ ಅವನ ಯೋಜನೆ ಯೋಚನೆ ಆಟ-ಪಾಠ ಕಾಟ ನೋಟ ಉಹಾತೀತ... ಅಘೋಷಿತ.... *****
Comments
In Channel







