Discover
ದನಿಪಯಣ
ದನಿಪಯಣ
Author: Gururaj Kulkarni
Subscribed: 0Played: 7Subscribe
Share
© Gururaj Kulkarni
Description
*ದನಿಪಯಣ* ಪಾಡ್ಕಾಸ್ಟ್ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್ಕಾಸ್ಟ್ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ವಾರ-ಬಿಟ್ಟು-ವಾರ ಗುರುವಾರ ಪ್ರಸಾರ ಆಗುತ್ತವೆ.
ಈ ಪಾಡ್ಕಾಸ್ಟ್ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ವಾರ-ಬಿಟ್ಟು-ವಾರ ಗುರುವಾರ ಪ್ರಸಾರ ಆಗುತ್ತವೆ.
21 Episodes
Reverse
ಬಹಳ ದಿನಗಳ ನಂತರ ಒಂದು #ದನಿಪಯಣ ಸಂಚಿಕೆ ಮಾಡಿದ್ದೇವೆ. ಈ ಸಲ ಧಾರವಾಡದ ವನಿತಾ ಸೇವಾ ಸಮಾಜಕ್ಕೆ ಹೋಗಿ, ಅದರ ಸ್ಥಾಪಕಿ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕರ ಸ್ಫೂರ್ತಿ ತುಂಬುವ ಜೀವನದ ಬಗ್ಗೆ ಮಾತನಾಡಿದ್ದೇವೆ.
ನಿಮಗೆ ಗೊತ್ತಾ?
🔶 ಬಾಲವಿಧವೆಯಾಗಿದ್ದ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕ ವನಿತಾ ಸೇವಾ ಸಮಾಜ ಸ್ಥಾಪಿಸಿ ಅದರ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಜೀವನ ಮಾರ್ಗ ತೋರಿಸಿದ್ದರು.
🔶 ಸಮಾಜದ ಎಲ್ಲರೂ ಶ್ರೀಮತಿ ಭಾಗೀರಥಿಬಾಯಿ ಅವರಿಗೆ ಪ್ರೀತಿ-ಗೌರವದಿಂದ 'ಮಾಯಿ' ಅಂತಲೇ ಕರೆಯುತ್ತಿದ್ದರು.
🔶 ೧೯೨೮ರಲ್ಲಿ ಮಾಯಿಯಿಂದ ಸ್ಥಾಪಿತವಾದ ವನಿತಾ ಸೇವಾ ಸಮಾಜದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹೈಸ್ಕೂಲ್ವರೆಗೆ, ನಂತರ ನೇಯ್ಗೆ-ಹೊಲಿಗೆ-ಕಸೂತಿ ಇತ್ಯಾದಿ ವೃತ್ತಿ ಶಿಕ್ಷಣವೂ, ಶಿಕ್ಷಕರ ತರಬೇತಿ ಸಂಸ್ಥೆಯೂ ನಡೆಯುತ್ತಿದ್ದವು.
🔶 ಹೆರಿಗೆ ಮನೆ, ನಿಸರ್ಗ ಚಿಕಿತ್ಸಾಲಯ, ಆಯುರ್ವೇದ ಔಷಧಾಲಯ ಎಲ್ಲ ಇದೇ ಜಾಗದಲ್ಲಿ ನಡೆಯುತ್ತಿದ್ದವು.
🔶 ಇಂದಿನ ಪದ್ಮಪ್ರಶಸ್ತಿಗಳಂತೆ ಆವಾಗಿನ ಆಂಗ್ಲ ಸರಕಾರ ಕೊಡುತ್ತಿದ್ದ ಕೈಸರ್-ಎ-ಹಿಂದ್ ಪ್ರಶಸ್ತಿ ಪಡೆದ ಮೊದಲ ಕನ್ನಡತಿ ಮಾಯಿ.
ಬನ್ನಿ ನಮ್ಮ #ದನಿಪಯಣ ಸಂಚಿಕೆ ಕೇಳಿ.
ಮಾಯಿ ಸ್ಥಾಪಿಸಿದ ಸಂಸ್ಥೆಗೆ ನೀವೂ ಸಹಾಯ ಮಾಡಿ, ವಿವರಗಳು ಇಲ್ಲಿವೆ 👉 http://www.vanitasevasamajdharwad.org/appeal.html
ಈ ದನಿಪಯಣದ ಸಂಚಿಕೆಯಲ್ಲಿ ಉಲ್ಲೇಖಿಸಿದ ಫೋಟೋಗಳು, ಚಿತ್ರಗಳು ಈ ಬ್ಲಾಗ್ ಪೋಸ್ಟ್ನಲ್ಲಿವೆ.
ಈ #ದನಿಪಯಣ ಸಂಚಿಕೆಯಲ್ಲಿ ಬೆಂಗಳೂರಿನ ಹನುಮಂತ ನಗರದಲ್ಲಿರುವ ನರಹರಿರಾಯರ ಗುಡ್ಡಕ್ಕೆ ಹೋಗಿ, ಅದು ನೆನಪಿಸುವ ವಿಷಯಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ.
🔶 ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಶಿವಾಲಯವಾಗಿದ್ದ ಇಲ್ಲಿನ ದೇವಸ್ಥಾನ ಈಗ ಕುಮಾರಸ್ವಾಮಿ ಗುಡಿಯಾಗಿ ಪ್ರಸಿದ್ಧವಾಗಿದೆ.
🔶 ಕಳೆದ ಶತಮಾನದ ಶುರುವಿನಲ್ಲಿ ಹೈಕೋರ್ಟ್ ಜಜ್ ಆಗಿದ್ದ ಶ್ರೀ ನರಹರಿರಾಯರು ಇಲ್ಲಿನ ಗುಡಿಯನ್ನು ನವೀಕರಿಸಿದ್ದರಿಂದ ಈ ಬೆಟ್ಟಕ್ಕೆ ನರಹರಿರಾಯರ ಗುಡ್ಡ ಎಂದೇ ಹೆಸರಾಗಿದೆ.
🔶 ಮೌಂಟ್ ಜಾಯ್ ಎಂದು ಅಧಿಕೃತ ಹೆಸರಿರುವ ಇದಕ್ಕೆ, ಕೆಲವು ತಮಿಳರು ಪೊನ್ನುಮಲೈ ಎಂದು ಹೆಸರು ಬದಲಿಸಲು ಸಂಚುಮಾಡಿದ್ದರು.
🔶 ಖ್ಯಾತ ಕರ್ನಾಟಕ ಸಂಗೀತ ವಿದುಷಿ ಬೆಂಗಳೂರು ನಾಗರತ್ನಮ್ಮನವರಿಗೂ ಈ ಬೆಟ್ಟಕ್ಕೂ ಏನು ಸಂಬಂಧ ಗೊತ್ತಾ?
🔶 ಸ್ತ್ರೀವಾದಿಯಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲಿಗರಾಗಿ, ಸಂಘಟನಕಾರ್ತಿಯಾಗಿ ನಾಗರತ್ನಮ್ಮನವರ ಹೋರಾಟ, ಸಾಧನೆಗಳ ಬಗ್ಗೆ ನಿಮಗೆ ಗೊತ್ತಾ?
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಸ್ವಾತಂತ್ರ್ಯ ದಿನದ ತಡವಾದ ಶುಭಾಶಯಗಳು. ಅಗಸ್ಟ್ ೧೬ರ ಈ #ದನಿಪಯಣ ಸಂಚಿಕೆಯಲ್ಲಿ ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯಲ್ಲಿನ ಸ್ವಾತಂತ್ರ್ಯ ಸಮರದ ನೆನಪುಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ.
🔶 ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿಕೊಂಡಿದ್ದ ಧೈರ್ಯಶಾಲಿ ಮಹಿಳೆ ಶ್ರೀಮತಿ ಉಮಾಬಾಯಿ ಕುಂದಾಪುರರು ಭಗಿನಿ ಮಂಡಳದ ಮೂಲಕ ಸ್ವಾತಂತ್ರ್ಯದ ಸ್ವಯಂಸೇವಕಿಯರನ್ನು ಸಜ್ಜುಗೊಳಿಸುತಿದ್ದರು.
🔷 ನಿಮಗೆ ಗೊತ್ತಾ ? ಈಗ ಹುಬ್ಬಳ್ಳಿ-ಬೆಂಗಳೂರಿನಲ್ಲಿ ಮುಖ್ಯ ನೆಲೆ ಕಂಡುಕೊಂಡಿರುವ 'ಸಂಯುಕ್ತ ಕರ್ನಾಟಕ' ಶುರುವಾಗಿದ್ದು ಬೆಳಗಾವಿಯಲ್ಲಿ, ಅದೂ ವಾರಪತ್ರಿಕೆಯಾಗಿ..
🔶 ಧಾರವಾಡದ ವಿದ್ಯಾರಣ್ಯ ಶಾಲೆಯಲ್ಲಿ ಸಹೋದ್ಯೋಗಿಗಳಾಗಿದ್ದ ಸರ್ವಶ್ರೀ ರಂಗನಾಥ ದಿವಾಕರ, ಮಧ್ವರಾವ್ ಕಬ್ಬೂರ ಮತ್ತು ರಾಮರಾವ ಹುಕ್ಕೇರಿಕರರು ಶುರುಮಾಡಿದ್ದ "ಕರ್ಮವೀರ" ಪತ್ರಿಕೆಗೆ ಆ ಹೆಸರು ಕೊಡಲು ಕಾರಣವೇನು ಗೊತ್ತಾ?
🔷 ಬಡತನದಲ್ಲಿಯೇ ಹುಟ್ಟಿ, ಕಷ್ಟ ಪಟ್ಟು ಬೆಳದ ಸರ್ ಸಿದ್ದಪ್ಪ ಕಂಬಳಿಯವರು ಅಂದಿನ ಬಾಂಬೆ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿ ದುಡಿದವರು. ಅಂದಿನ ಬಹುತೇಕ ನಾಯಕರಂತೆ ಗಾಂಧಿ ಬೆಂಬಲಿಗರಾಗದೇ , ಕಾಂಗ್ರೆಸ್ಗೆ ಸ್ಪರ್ಧಿಯಾಗಿದ್ದವರು.
🔶 ಹಿಂದುಸ್ಥಾನ ಸೇವಾದಳವನ್ನು ಸ್ಥಾಪಿಸಿದ ಡಾ.ನಾ.ಸು.ಹರ್ಡಿಕರರು ಹುಬ್ಬಳ್ಳಿಯವರು. ದಳದ ಕೇಂದ್ರ ಕಚೇರಿ ಹುಬ್ಬಳ್ಳಿಯೇ ಆಗಿತ್ತು.
🔷 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹದಿಮೂರು ವರ್ಷದ ಬಾಲಕ ನಾರಾಯಣ ಡೋಣಿ ಹುಬ್ಬಳ್ಳಿಯಲ್ಲಿ ಹುತಾತ್ಮನಾಗಿದ್ದ.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/09/blog-post.html
ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್ಕಾಸ್ಟ್ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್ಕಾಸ್ಟ್ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ಎರಡು ವಾರಕ್ಕೊಮ್ಮೆಯಂತೆ ಗುರುವಾರ ಪ್ರಸಾರ ಆಗುತ್ತವೆ.
ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್ಪಾಡ್ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==
ನಮ್ಮ ದನಿಪಯಣದ ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ.
ನಿಮಗೆ ಕೇಳಲು ಆಸಕ್ತಿ ಇಲ್ಲವಾದರೆ, ದಯವಿಟ್ಟು ತಿಳಿಸಿ. ಮುಂದಿನ ಸಂಚಿಕೆಯಿಂದ ತೊಂದರೆ ಕೊಡೋದಿಲ್ಲ🙏
ಅನಿಮಿಷ ಮತ್ತು ಗುರುರಾಜ ಕುಲಕರ್ಣಿ
ಈ ಸಲ ನಾವು ನಮ್ಮ ಧಾರವಾಡದ "ರ್ಯಾಂಕುಗಳ ಬ್ಯಾಂಕು" ಕೆಇಬೋರ್ಡ ಸಂಸ್ಥೆಯ ಶಾಲೆಗಳಿಗೆ ಪಯಣ ಹೊರಟಿದ್ದೇವೆ:
👉 ಧಾರವಾಡದ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ, ಕರ್ನಾಟಕ ಕಾಲೇಜಿನ ಸ್ಥಾಪಕರಾಗಿ, ಧಾರವಾಡವನ್ನು ವಿದ್ಯಾಕಾಶಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾವ್ ಬಹಾದ್ದೂರ್ ಶ್ರೀ ರೊದ್ಧ ಶ್ರೀನಿವಾಸರಾಯರೇ ಕರ್ನಾಟಕ ಪ್ರೌಢಶಾಲೆಯ, ಕೆಇಬೋರ್ಡ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು.
👉 ಕೆಇಬೋರ್ಡ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರ ತವರು ಇದ್ದಂತೆ. ಇಲ್ಲಿಯ ಡಾ.ಕಬ್ಬೂರ, ಶ್ರೀ ಕರಮರಕರ, ಶ್ರೀ ಕೆ.ಜಿ. ಜೋಷಿ ಕರನಿರಾಕರಣೆ/ಕಾನೂನು ಭಂಗ ಚಳುವಳಿಗಳಲ್ಲಿ ಮುಂದಾಳತ್ವ ವಹಿಸಿದ್ದರು.
ಇಲ್ಲಿ ಮುಖ್ಯೋಪಾಧ್ಯಯರಾಗಿದ್ದ ಶ್ರೀ ಶನೋಲಕರರು ಶ್ರೀ ಎಸ್ಜಿ ನಾಡಗೇರರು ಭೂಗತ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಕರಪತ್ರಗಳು ಆಗಾಗ ಈ ಸಂಸ್ಥೆಯ ಕರ್ನಾಟಕ ಹೈಸ್ಕೂಲಿನಲ್ಲಿ ಅಚ್ಚಾಗುತ್ತಿದ್ದವು.
👉 ಈಗ ಜೆಎಸ್ಎಸ್ ಕಾಲೇಜೆಂದು ಪ್ರಸಿದ್ಧವಾಗಿರುವ ಕಾಲೇಜು, ಈಗ ವಿದ್ಯಾರಣ್ಯ ಶಾಲೆ ಇರುವ ಜಾಗದಲ್ಲೇ ಶುರುವಾಗಿತ್ತು. ಖ್ಯಾತ #ಕನ್ನಡ ಕವಿ, #ಕನ್ನಡದ ಕಣ್ವ ಶ್ರೀ ಯವರು ಅದರ ಮೊದಲ ಪ್ರಾಂಶುಪಾಲರು.
👉 "ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ" ಎಂ ಖ್ಯಾತ ಕವಿ ಶ್ರೀ ಸಾಲಿ ರಾಮಚಂದ್ರ ರಾಯರು ಇಲ್ಲಿ ಸಾಲಿ ಕಲಿಸಿದ್ದರಷ್ಟೇ ಅಲ್ಲ, ಸಾಲಿಗೆ ಪ್ರಾರ್ಥನಾ ಪದ್ಯ ಬರೆದು ಕೊಟ್ಟಿದ್ದಾರೆ.
👉 ಬಿಎಂಶ್ರೀಯವರು, ಶ್ರೀ ಬೇಂದ್ರೆ, ಶ್ರೀ ಶಂಬಾ, ಶ್ರೀ ರಂಗನಾಥ ದಿವಾಕರ, ಶ್ರೀ ಕುಂದಣಗಾರ ಹೀಗೆ ಈ ಸಂಸ್ಥೆಗೆ ಸಂಬಂಧಿಸಿದ ಐವರು #ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿದ್ದರು.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ :
http://antarangada-mrudanga.blogspot.com/2020/06/blog-post.html?m=1
ಲಾಕ್ಡೌನ್ ನಡುವೆ ದೂರ ಪಯಣ ಹೋಗದೆ ನಾವು ನಮ್ಮ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಇತಿಹಾಸವನ್ನು ಈ ಸಲದ #ದನಿಪಯಣ ಸಂಚಿಕೆಯಲ್ಲಿ ತಿಳಿಯಲಿದ್ದೇವೆ.
👉 ಈ ಬಡಾವಣೆಗೆ ಹೆಸರು ಬರಲು ಇಲ್ಲಿರುವ ಉದ್ಭವ ಕುಮಾರಸ್ವಾಮಿ ದೇವಸ್ಥಾನ ಕಾರಣ.
👉 ಕ್ರಿಶ ೧೮೦೫ರಲ್ಲಿ ಸ್ಥಾಪನೆಯಾಗಿರುವ ಖಾನೆ ಮುನೇಶ್ವರ ಗುಡಿಯಲ್ಲಿ ನವ-ಶಿಲಾಯುಗದ್ದವೆಂದು ಹೇಳಲಾಗುವ ಕಲ್ಲಿನ ಕೊಡಲಿಗಳಿವೆ.
👉 ಇಲ್ಲಿನ ಯಲ್ಲಮ್ಮನ ಗುಡಿಯಲ್ಲಿ ಸುಮಾರು ೬೦೦ ವರ್ಷಗಳ ಹಳೆಯ ಶಿಲಾಶಾಸನವಿದೆ. ಈಗಿನ ಯಲಚೇನಹಳ್ಳಿಯನ್ನು ಅದರಲ್ಲಿ 'ಎಳೆಜಿಯನಹಹಳ್ಳಿ' ಎಂದು ಉಲ್ಲೇಖಿಸಲಾಗಿದೆ.
👉 ಸಾರಕ್ಕಿಯ ಸಾರಂಗಧರನ ಕತೆ ಗೊತ್ತಾ ?
ಕತೆಯ ಪ್ರಕಾರ ಅವನು ಇವತ್ತಿನ ಸಾರಕ್ಕಿಯ ರಾಜಕುಮಾರ. ಅವನು ಪ್ರೀತಿಸಿದವಳನ್ನು ಅವರಪ್ಪ ಮದುವೆಯಾಗಿ ಸಾರಂಗಧರನನ್ನು ಗಡಿಪಾರು ಮಾಡುತ್ತಾನೆ. ರಾಜ್ಯದ ಮೇಲೆ ವೈರಿ ದಾಳಿ ಮಾಡಿದಾಗ ಸಾರಂಗಧರ ಮರಳಿ ಬಂದು ಯುದ್ಧ ಗೆದ್ದು ಕೊಡುತ್ತಾನೆ. ಆದರೂ ಚಿಕ್ಕಮ್ಮನ ಚಾಡಿಯಿಂದಾಗಿ ಅವರಪ್ಪ ಅವನಿಗೆ ಮರಣದಂಡನೆ ವಿಧಿಸುತ್ತಾನೆ.
ಕತೆಯ ಪ್ರಕಾರ ಅವನ ಮರಣದಂಡನೆ ಇಂದು ದಯಾನಂದ ಸಾಗರ ಕಾಲೇಜಿರುವ ಶಾವಿಗೆ ಮಲ್ಲೇಶ್ವರ ಬೆಟ್ಟದಲ್ಲಿಯೇ ಆಗಿತ್ತು.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ :
http://antarangada-mrudanga.blogspot.com/2020/05/blog-post.html
ಈಗ ಕರೋನಾ ಹೆಮ್ಮಾರಿಯ ಆರ್ಭಟದ ನಡುವೆ ಒಂದೂ ಕಾಲು ಶತಮಾನದ ಹಿಂದೆ ಪ್ಲೇಗಮ್ಮ ಕರ್ನಾಟಕದಲ್ಲಿ ನಡೆಸಿದ ಮಾರಣಹೋಮದ ದುಃಸ್ವಪ್ನವನ್ನು ನೆನೆಸಿಕೊಂಡು, ಅದರಿಂದ ನಾವೇನು ಕಲಿಯಬಹುದು ಎಂದು #ದನಿಪಯಣ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ.
👉 ಇಂದಿನ ಕೊರಣ್ಣನದೂ ಅಂದಿನ ಪ್ಲೇಗಮ್ಮನದು ಒಂದೇ ತವರು - ಚೀನಾ 🇨🇳 !
👉 ಮುಂಬೈಗೆ ಮೊದಲು ಬಂದಿದ್ದ ಸೋಂಕು, ಕಾಗವಾಡದಲ್ಲಿ ಕರ್ನಾಟಕದ ಮೊದಲ ಬಲಿ ಪಡೆದಿತ್ತು. ನಂತರ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮರಣಮೃದಂಗ ಬಾರಿಸಿತ್ತು.
👉 ಆ ಪ್ಲೇಗಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುಮಾರು ೪೦ಸಾವಿರ ಸಾವುಗಳಾದರೆ, ಬೆಂಗಳೂರಿನಲ್ಲಿ ಸತ್ತವರು-ಊರು ಬಿಟ್ಟವರಿಂದಾಗಿ ಜನಸಂಖ್ಯೆ ಹೆಚ್ಚೂಕಡಿಮೆ ಅರ್ಧದಷ್ಟಾಗಿತ್ತು.
👉 ಈಗ ಕೊರೋನಾ-ನಿಯಂತ್ರಣಕ್ಕೆ ಕೆಲ ಜನ ವಿರೋಧಿಸುರುವಂತೆ, ಆವಾಗ ಪ್ಲೇಗು-ನಿಯಂತ್ರಣಕ್ಕೂ ಕೆಲ ಜನ ವಿರೋಧಿಸಿದ್ದರು. ಗಂಜಾಂನಲ್ಲಿ ದಂಗೆಯೇ ಆಗಿ, ಪೋಲೀಸ್ ಕಾರ್ಯಾಚರಣೆಯಲ್ಲಿ ಹಲವರ ಜೀವಹಾನಿಯಾಗಿತ್ತು.
👉 ಬೆಂಗಳೂರಿನ ಬಸವನಗುಡಿ-ಮಲ್ಲೇಶ್ವರ, ಧಾರವಾಡದ ಮಾಳಮಡ್ಡಿ ಮೂರೂ ಸಮವಯಸ್ಕ ಬಡಾವಣೆಗಳು. ಮೂರರ ಅಭಿವೃದ್ಧಿಯೂ ಪ್ಲೇಗಿನ ನಂತರ ಸರ್ಕಾರಗಳಿಂದ ಗಾಳಿ-ಬೆಳಕು ಚನ್ನಾಗಿರುವ ವಸತಿ ಬಡಾವಣೆ ನಿರ್ಮಾಣ ಮಾಡುವ ಉದ್ದೇಶದಿಂದ ಆಗಿತ್ತು.
👉 ನಿಮಗೆ ಗೊತ್ತಾ ? ಬೆಂಗಳೂರಿನ ಹೋಟಲುದ್ಯಮದ ಅರುಣೋದಯ, ಟೆಲಿಫೋನ್ ಜಾಲ ವಿಸ್ತರಣೆಗೆ ಪ್ಲೇಗೇ ಕಾರಣವಾಗಿತ್ತು !
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್ಕಾಸ್ಟ್ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್ಕಾಸ್ಟ್ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ವಾರ-ಬಿಟ್ಟು-ವಾರ ಗುರುವಾರ ಪ್ರಸಾರ ಆಗುತ್ತವೆ.
ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್ಪಾಡ್ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==
ನಮ್ಮ ದನಿಪಯಣದ ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ.
ನಿಮಗೆ ಕೇಳಲು ಆಸಕ್ತಿ ಇಲ್ಲವಾದರೆ, ದಯವಿಟ್ಟು ತಿಳಿಸಿ. ಮುಂದಿನ ಸಂಚಿಕೆಯಿಂದ ತೊಂದರೆ ಕೊಡೋದಿಲ್ಲ🙏
ಅನಿಮಿಷ ಮತ್ತು ಗುರುರಾಜ ಕುಲಕರ್ಣಿ
.
"ಬೆಂಗಳೂರ ಪರಂಪರೆಯ ಮುಖ್ಯ ಭಾಗ
ಇಲ್ಲಿ ನಡೆಯುವ ಪುರಾತನ ಕರಗ
ಒಮ್ಮೆಯಾದರೂ ಕಣ್ಣಿಂದ ನೋಡ
ಇದರ ವೈಭವ ಕಂಡು ಕೊಂಡಾಡ
ಯಾತಕ್ಕವ್ವ ಹುಬ್ಬಳ್ಳಿ ಧಾರವಾಡ
ನಮ್ಮ ಬೆಂಗಳೂರ್ ಊರ ನಮಗ ಪಾಡ"
ಎಂದು ಹಾಡುತ್ತ ನಾವು ನಿಮ್ಮನ್ನು "ಬೆಂಗಳೂರು ಕರಗ"ಕ್ಕೆ ಕರೆದುಕೊಂಡು ಹೊರಟಿದ್ದೇವೆ.
👉 ದವನದ ಹುಣ್ಣಿಮೆಗಿಂತ ೯ ದಿನ ಮೊದಲು ಧ್ವಜಾರೋಹಣದಿಂದ ಕರಗದ ಹಬ್ಬ ಶುರುವಾಗಿ, ಹುಣ್ಣಿಮೆ ದಿನ ಹೂವಿನ ಕರಗವಾಗಿ, ಅದಾದಮೇಲೆ ಎರಡನೆ ದಿನ ರಥೋತ್ಸವದವರೆಗೆ ಒಟ್ಟು ಹನ್ನೊಂದು ದಿನ ನಡೆಯುತ್ತದೆ.
👉 ಭಾವೈಕ್ಯದ ಸಂಕೇತವೆಂಬಂತೆ ಕರಗದ ಮೆರವಣಿಗೆ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತದೆ.
👉 ತಲೆಯ ಮೇಲೆ ಹೊರುವ ಹೂವಿನ ಕರಗ , ದ್ರೌಪದಿ ದುಶ್ಯಾಸನನ ಕರುಳದಂಡೆಯನ್ನು ಮುಡಿದ ಸಂದರ್ಭದ ಸಂಕೇತ ಅಂತೆ.
👉 ಭೀಮನನ್ನು ಸೆರೆ ಹಿಡಿದು ಹಾಕಿದ್ದ ಪೋತರಾಜನು ಕೊನೆಗೆ ಪಾಂಡವರ ತಂಗಿ ಶಂಕೋದರಿಯನ್ನು ಮದುವೆಯಾದ ಕತೆ ನಿಮಗೆ ಗೊತ್ತೇ?
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ :
http://antarangada-mrudanga.blogspot.com/2020/04/blog-post_20.html?m=1
ಗದುಗಿನ ಬಗ್ಗೆ ನಾವು ಎರಡು #ದನಿಪಯಣ ಸಂಚಿಕೆಗಳನ್ನು ಮಾಡಿದ್ದೀವಿ.
೧. https://t.co/7ScRqNZFxs
೨. https://t.co/lSdNo8Xhg4
ಆದರೆ "ಇನ್ನೂ ಸಂಗೀತಸಂತ ಪುಟ್ಟಯ್ಯಜ್ಜನ ಬಗ್ಗೆ ಯಾಕೆ ಮಾತಾಡಿಲ್ಲ?" ಎಂದು ನೀವು ಕೇಳತಾ ಇದ್ದರೆ , ತಗೋಳ್ಳಿ ನಮ್ಮ ಈ ಸಂಚಿಕೆಯಲ್ಲಿ ವೀರೇಶ್ವರ ಪುಣ್ಯಾಶ್ರಮಕ್ಕೆ ನಮ್ಮ #ದನಿಪಯಣ.
👉 ವೀರೇಶ್ವರ ಪುಣ್ಯಾಶ್ರಮಕ್ಕೆ ಆ ಹೆಸರು ಬರಲು ಏನು ಕಾರಣ ನಿಮಗೆ ಗೊತ್ತಾ ? ನಾಲ್ವತ್ತವಾಡದ ಶ್ರೀ ವೀರೇಶ್ವರ ಶರಣರ ಹೆಸರಿನಿಂದಾಗಿ ಆ ಹೆಸರು ಬಂತಾ ?
ಪುಣ್ಯಾಶ್ರಮದ ಸ್ಥಾಪನೆಗೆ ಪ್ರೇರಕಶಕ್ತಿಯಾಗಿದ್ದ "ಕರ್ನಾಟಕದ ಫೋರ್ಡ್" ಶ್ರೀ ಬಸರಿಗಿಡದ ವೀರಪ್ಪನವರ ಹೆಸರಿನಿಂದಾಗಿ ಬಂತಾ ?
👉 ಬರಬೇಕಿತ್ತು ಭಾರತ ರತ್ನ
ಪ್ರಶಸ್ತಿ ಪುಟ್ಟರಾಜರಿಗೆಂದೋ
ಬಂದಿಲ್ಲ, ಏಕೆಂದರೆ
ಕಣ್ಣಿಲ್ಲದ ಕವಿ ಬರೆದ ಕೃತಿ
ಕಣ್ಣಿದ್ದವರಿನ್ನೂ ಓದಿಲ್ಲ !!
(ಕವಿ ಶ್ರೀ ಐ.ಕೆ.ಕಮ್ಮಾರ ಅವರ ಕವಿತೆ)
👉 ಗವಾಯಿಗಳ ಕಂಪನಿಯ "ಹೇಮರಡ್ಡಿ ಮಲ್ಲಮ್ಮ" ನಾಟಕ ಸುಮಾರು ನಾಲ್ಕು ನೂರು ಪ್ರಯೋಗ ಕಂಡಿತ್ತು !
👉 ಸರ್ವಶ್ರೀ ಅರ್ಜುನಸಾ ನಾಕೋಡ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಇತ್ಯಾದಿ ದಿಗ್ಗಜರು ಗವಾಯಿಗಳ ಕಂಪನಿಯಲ್ಲಿಯೇ ಪಳಗಿದವರು.
👉 "ರಕ್ಷಿಸು ಕರ್ನಾಟಕ ದೇವಿ" ಎಂಬ ಜನಪ್ರಿಯ ನಾಡಗೀತೆ ಕರ್ತೃ ಶಾಂತಕವಿಗಳು 'ಕೃತಪುರ ನಾಟಕ ಮಂಡಳಿ'ಯ ಮೂಲಕ ಆಧುನಿಕ ಕನ್ನಡ ನಾಟಕರಂಗಕ್ಕೆ ಗದುಗಿನಲ್ಲಿ ನಾಂದಿ ಹಾಡಿದ್ದರು.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/03/blog-post_21.html
"ದೇಶ ಸುತ್ತು, ಇಲ್ಲವೇ ಕೋಶ ಓದು" ಎನ್ನುವುದು ದೊಡ್ಡವರ ಮಾತು. ನಾವು ಕೋಶ ಓದಿಕೊಂಡು ಈ ಸಲ ಹೊರಟಿರುವುದು ಬೆಟಗೇರಿ-ಗದುಗಿನ ಕೆಲ ಸ್ಥಳಗಳನ್ನು ಸುತ್ತಲು.. ನೀವೂ ನಂ ಜೊತೆ ಬನ್ನಿ!
👉 ಬೆಟಗೇರಿಯ ಮಲ್ಲರಾಯನಕಟ್ಟೆಯಲ್ಲಿ ೧೬ ರಾಷ್ಟ್ರಕೂಟರ ಕಾಲದ ದೈತ್ಯಾಕಾರದ ವೀರಗಲ್ಲುಗಳು ಒಂದೇ ಕಡೆ ಇವೆ. ಅವುಗಳು ಕನಿಷ್ಠ ೧೧೦೦ ವರ್ಷ ಹಳೆಯವು.
👉ಸೀರೆ ನೇಯ್ಗೆಗೆ ಹೆಸರುವಾಸಿ ಬೆಟಗೇರಿ,
ಗದುಗು ಗೈಡುಗಳ ಊರು, ಮುದ್ರಣ ನಗರಿ.
ಇವುಗಳಲ್ಲಿ ಯಾವುದು ಕಮ್ಮಿ, ಯಾವುದು ಹೆಚ್ಚುರಿ ?
ಗದುಗಿನ ಬದನಿಕಾಯಿ ಬಜಿಗೆ ಬೆಟಗೇರಿಯ ಬುಳ್ಳ ಬೇಕ-ಬೇಕರೀ..
👉 ನಿಮಗೆ ಕಂಪ್ಯೂಟರ್ ಸ್ವಾಮಿ ಗೊತ್ತು, ಹೆಲಿಕಾಪ್ಟರ್ ಸ್ವಾಮಿ ಗೊತ್ತು, ಇಂಗ್ಲೀಷು-ಸಂಸ್ಕೃತ ಸ್ವಾಮಿಗಳೂ ಗೊತ್ತು. ಆದರೆ #ಕನ್ನಡ ದ ಜಗದ್ಗುರುಗಳು ?
👉 "ಸೋಹಂ ಎಂದೆನಿಸದೇ, ದಾಸೋಹಂ ಎಂದೆನಿಸಯ್ಯಾ" ಎಂದು ಸಾರುವ ತೋಂಟದಾರ್ಯ ಮಠದ ಇತಿಹಾಸ ನಿಮಗೆ ಗೊತ್ತಾ ?
👉 ಕೆಳದಿಯ ರಾಜ-ರಾಣಿಯರು ಈ ಮಠಕ್ಕೆ ಭಕ್ತಿಯಿಂದ ಕೊಟ್ಟ ರಾಜರಾಣಿಯರ ಚಿತ್ರಗಳಿರುವ ಬಂಗಾರದ ಪಾದುಕೆಗಳು ಈಗಲೂ ಮಠದಲ್ಲಿವೆ.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/01/blog-post.html
ಈಗಾಗಲೇ ಒಮ್ಮೆ ನಾವು ಕೃತಪುರದರ್ಶನ ಮಾಡಿ, ವೀರನಾರಾಯಣ, ತ್ರಿಕೂಟೇಶ್ವರನ ಗುಡಿಯ ದನಿಪಯಣ ಮಾಡಿದ್ದೆವು. ಅದನ್ನು ಕೇಳಿ : https://anchor.fm/gururaj-kulkarni/episodes/--e9dsur
ನಮ್ಮ ಈ ಕಾರ್ಯಕ್ರಮ ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ಗುರುವಾರ ಮಧ್ಯಾಹ್ನ೧೨.೦೦ ಮತ್ತು ಸಂಜೆ ೭.೦೦ಕ್ಕೆ ಪ್ರಸಾರ ಆಗುತ್ತದೆ.
ಜನೇವರಿ ೩೧, ಶಬ್ದ ಗಾರುಡಿಗ, ವರಕವಿ, ಅಂಬಿಕಾತನಯ, ದತ್ತ ಗುರುವಿನ ಹುಟ್ಟುಹಬ್ಬವನ್ನು 'ಕವಿದಿನ'ವೆಂದು ಆಚರಿಸಲಾಗುತ್ತದೆ. ಈ ಕವಿದಿನದಂದು ನಾವು ಮಾಡಿದ #ದನಿಪಯಣ ಸಂಚಿಕೆ "ಗಾರುಡಿಗನ ಧಾರವಾಡ"- ಸಾಧನಕೇರಿಯ ಸಾಧಕನ ಕವನದಲ್ಲಿ ಬರುವ ಕೆಲ ಧಾರವಾಡದ ಆಸಕ್ತಿಕರ ಜಾಗಗಳ ಕುರಿತದ್ದು. ದಯವಿಟ್ಟು ಕೇಳಿ.
"ಕವಿದಿನದ ವಿಶೇಷ" ಸಂಚಿಕೆಯಾದ್ದರಿಂದ ಈ ಸಂಚಿಕೆಯಲ್ಲಿ ಒಂಚೂರು ಹೆಚ್ಚೇ ಹಾಡುಗಳಿವೆ - ೫ ಬೇಂದ್ರೆ ಹಾಡುಗಳು !
ಧಾರವಾಡದ ಬಗ್ಗೆ ನಾವು ಈಗಾಗಲೇ ಒಂದು ಸಂಚಿಕೆ ಮಾಡಿದ್ದೆವು - ಅದನ್ನೂ ಕೇಳಿ - https://anchor.fm/gururaj-kulkarni/episodes/--e99sfb
ಈ ಸಂಚಿಕೆಗೆ ಸಂಬಂಧಿಸಿದ ಚಿತ್ರಗಳು ಈ ಬ್ಲಾಗಿನಲ್ಲಿವೆ :
http://antarangada-mrudanga.blogspot.com/2020/02/blog-post.html?m=1
"ಯಾತಕವ್ವಾ ಹುಬ್ಬಳ್ಳಿ ಧಾರವಾಡ,
ನಮ್ಮ ಬೆಂಗಳೂರು ಊರ ನಮಗ ಪಾಡ!
ಹರಿಹರೇಶ್ವರನ ಗುಡ್ಡ ಬಲು ಚಂದ,
ಅದರ ಉದ್ಯಾನ ಕಣ್ಣಿಗೆ ಅಂದ,
ಗವಿಯಲಿರುವ ಗಂಗಾಧರನ ನೋಡ,
ಅವನ ಚರಣಕ ನೀ ಸಣಮಾಡ !!"
ಎಂದು ಹಾಡುತ್ತಾ ಈ ಸಲ ದನಿಪಯಣದಲ್ಲಿ ನಾವು ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರನ ದೇವಸ್ಥಾನಕ್ಕೆ ಪಯಣ ಬೆಳೆಸಿದ್ದೇವೆ.
👉 ಪ್ರತಿ ಸಂಕ್ರಾಮಣದ ಸಂಜೆ ಸೂರ್ಯ ಕಿರಣ ನೇರವಾಗಿ ಗಂಗಾಧರನ ಮೇಲೆ ಬಿದ್ದು ಬೆಳಕಿನ ಅಭಿಷೇಕ ಮಾಡುತ್ತವೆ. ಇದು "ಸೂರ್ಯ ಮಜ್ಜನ" ಎಂದೇ ಪ್ರಸಿದ್ಧ.
👉 ಬಹಳ ಜನರಿಗೆ ಗೊತ್ತಿಲ್ಲ, ಜನೇವರಿ ೧೪/೧೫ ಅಷ್ಟೇ ಅಲ್ಲ ನವಂಬರ್ ೩೦ರಂದು ಕೂಡ ಸೂರ್ಯ ಕಿರಣಗಳು ಗಂಗಾಧರನ ಮೇಲೆ ನೇರವಾಗಿ ಬೀಳುತ್ತವೆ.
👉 ಇಲ್ಲಿರುವ ಬೃಹದಾಕಾರದ ತ್ರಿಶೂಲ, ಡಮರು, ಸೂರ್ಯಪಾನ , ಚಂದ್ರಪಾನಗಳು ಬಹು ಕಾಲದಿಂದ ಜನರನ್ನು ಆಕರ್ಷಿಸಿವೆ. ಹಲವಾರು ಐತಿಹಾಸಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿವೆ.
👉 ಸೂರ್ಯ-ಚಂದ್ರ ಪಾನಗಳನ್ನು ಹಿಂದಿನವರು ಉತ್ತರಾಯಣ, ದಕ್ಷಿಣಾಯಣ ಗುರುತಿಸಲು ಉಪಯೋಗಿಸುತ್ತಿದ್ದರು.
👉 ಹೆಚ್ಚಿನ ಮಾಹಿತಿ ತಿಳಿಸಲು ಖ್ಯಾತ ಖಭೌತ ವಿಜ್ಞಾನಿ, ಡಾ. ಬಿ.ಎಸ್. ಶೈಲಜಾ ಅವರು ಇರುತ್ತಾರೆ. ಅವರು ಬೆಂಗಳೂರಿನ ನೆಹರು ತಾರಾಲಯದ ನಿವೃತ್ತ ನಿರ್ದೇಶಕರು, ಸಧ್ಯ ಅಲ್ಲಿನ ಸಂದರ್ಶಕ ಪ್ರಾಧ್ಯಾಪಕರು.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಗೆ ಸಂಬಂಧಿಸಿದ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/01/blog-post.html
ಕಳೆದ ಸಲದ ದನಿಪಯಣದಲ್ಲಿ ನಾವು ಶ್ರೀ ಕನಕದಾಸರ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಕದರಮಂಡಲಗಿಗೆ ಹೋಗಿದ್ದೆವು. ಈ ಸಲ ಅಲ್ಲಿಂದ ಕನಕರ ಜನ್ಮಭೂಮಿ ಬಾಡ, ಅವರ ಕರ್ಮಭೂಮಿ ಕಾಗಿನೆಲೆಗೆ ಹೋಗಲಿದ್ದೇವೆ. ಮುಖ್ಯವಾಗಿ ಬಾಡದಲ್ಲಿ ಸರಕಾರ ಪುನರ್ನಿರ್ಮಾಣ ಮಾಡಿರುವ ಕನಕರ ಅರಮನೆಯನ್ನು ನೋಡುತ್ತ ಅವರ ಜೀವನ-ಕೃತಿಗಳ ಬಗ್ಗೆ ಮಾತಾಡಲಿದ್ದೇವೆ.
👉 ಆದಿಕೇಶವನ ಮೂಲನೆಲೆ ಕಾಗಿನೆಲೆ ಅಲ್ಲ, ಬಾಡ ಎಂದು ನಿಮಗೆ ಗೊತ್ತೇ?
👉 ಕಾಗಿನೆಲೆ ಆದಿಕೇಶವನ ಗುಡಿಯ ಸ್ಥಾಪಕರು ಕನಕರು. ಅದೇ ಆವರಣದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಸ್ಥಾಪಕರು ಯಾರು ?
👉 ಕನಕರು ಉಪಯೋಗಿಸಿದ ಗೋಪಾಳ-ಶಂಖ ಇನ್ನೂ ಕಾಗಿನೆಲೆಯ ದೇವಸ್ಥಾನದಲ್ಲಿವೆ.
👉 ಕಾಗಿನೆಲೆಯಲ್ಲಿ ಕನಕರು ೫೦೦ ವರ್ಷಗಳ ಹಿಂದೆ ನೆಟ್ಟ ಮರದ ಕೆಳಗೆಯೇ ಅವರ ಗದ್ದುಗೆಯಿದೆ.
👉 ಕನಕರಿಗೆ ಉಂಬಳಿ ಬಂದ ಊರು ದಾಸನಕೊಪ್ಪ ಎಂದು ಪ್ರಸಿದ್ಧವಾದರೆ ಕನಕರು ಡೋಳ್ಳು ಬಾರಿಸಿ ಮಳೆ ತರಿಸಿದರು ಎಂದು ಹೇಳಲಾಗುವ ಊರು ಕನಕಾಪುರ ಎಂದು ಹೆಸರು ಪಡೆದಿದೆ.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಲದ ದನಿಪಯಣದಲ್ಲಿ ನಾವು ಶ್ರೀ ಕನಕದಾಸರ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಕದರಮಂಡಲಗಿಗೆ ಹೋಗಲಿದ್ದೇವೆ.
👉 ಕನಕದಾಸರು ಕದರಮಂಡಲಗಿಯ ಕಾಂತೇಶನ ಸನ್ನಿಧಿಯಲ್ಲಿ ಇದ್ದು ತಮ್ಮ "ಮೋಹನತರಂಗಿಣಿ"ಯನ್ನು ಬರೆದಿದ್ದರಂತೆ.
👉 ಕನಕದಾಸರು ಕಾಂತೇಶನ ಆವರಣದಲ್ಲಿ ಇರುತ್ತಿದ್ದ ಗುಡಿಗೆ "ಕನಕಪ್ಪನ ಗುಡಿ" ಎಂದೇ ಹೆಸರು..
👉 ಕನಕದಾಸರಿಗೆ ತಿರುಪತಿಯ ತಿಮ್ಮಪ್ಪ ದರ್ಶನ ಕೊಟ್ಟ ಎಂದು ಹೇಳುವ ಜಾಗದಲ್ಲಿ ಇಂದು ತಿಮ್ಮಪ್ಪನ ಗುಡಿಯಿದೆ.
👉 ನಿಮಗೆ ಗೊತ್ತಾ, ಕಡುಕಲಿ ಧೊಂಡಿಯಾ ವಾಘ ತನ್ನ ಬಲಗೈ ಪಟ್ಟಾಕತ್ತಿ ಶಿಕಾರಿಪುರದ ಹುಚ್ಚುರಾಯಸ್ವಾಮಿಗೆ ಅರ್ಪಿಸಿದ್ದರೆ, ಎಡಗೈ ಪಟ್ಟಾಕತ್ತಿಯನ್ನು ಕದರಮಂಡಲಗಿಯ ಕಾಂತೇಶನಿಗೆ ಅರ್ಪಿಸಿದ್ದಾನೆ..
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
👉 ಬೆಂಗಳೂರಿಗೆ ಬೆಂದಕಾಳಿನಿಂದ ಆ ಹೆಸರು ಬಂತು ಅನ್ನೋದು ಎಷ್ಟು ನಿಜ?
👉 ಬೆಂಗಳೂರಲ್ಲಿ ಇದ್ದದ್ದು ಎರಡು ಕೋಟೆ ಗೊತ್ತಾ ?
👉 ಬೆಂಗಳೂರು ಕೋಟೆಯ ದೆಹಲಿದ್ವಾರ ಯಲಹಂಕದ್ವಾರಕ್ಕಿಂತ ದಕ್ಷಿಣಕ್ಕಿದೆ. ಅದ್ಯಾಕೆ ಅಂತ ಗೊತ್ತಾ?
👉 ಶ್ರೀ ವಾದಿರಾಜರಿಂದ ಸ್ಥಾಪಿತವಾದ ಹನುಮ ಇಲ್ಲಿ ಮಿಂಟೋ ಆಂಜನೇಯ ಎಂದು ಹೆಸರು ಪಡೆದದ್ದು ಹ್ಯಾಗೆ ಗೊತ್ತಾ?
👉 ಬೆಂಗಳೂರಿನ ಪ್ರಸಿದ್ಧ ಕೋಟೆ ವೆಂಕಟೇಶ್ವರ ದೇವಸ್ಥಾನ ಮೊದಲು ಬಸವಣ್ಣನ ಗುಡಿಯಾಗಿತ್ತಂತೆ, ಹೌದಾ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ಸಂಚಿಕೆ ದನಿಪಯಣ ಕೇಳಿ.
ಪಾಡ್ಕಾಸ್ಟಿನಲ್ಲಿ ಉಲ್ಲೇಖಿಸಿದ ಜಾಗಗಳ ಚಿತ್ರಗಳಿಗಾಗಿ - https://antarangada-mrudanga.blogspot.com/2019/11/Dani-payana-Bengaluru-kote.html
👉 ನಿಮಗೆ ಗೊತ್ತಾ ? ಕ್ರಿ.ಶ ೧೯೦೦ರ ಸುಮಾರಿಗೆ ಏಕಕಾಲಕ್ಕೆ ಅಸ್ತಿತ್ವಕ್ಕೆ ಬಂದ ಬಸವನಗುಡಿ ಮತ್ತು ಮಲ್ಲೇಶ್ವರ, ಎರಡೂ ಅವಳಿ ಬಡಾವಣೆಗಳು.
👉 ಕಾದಂಬರಿಕಾರ ಶ್ರೀ ಆರ್ಕೆ ನಾರಾಯಣ ಅವರು ತಮ್ಮ ಕಲ್ಪನೆಯ ನಗರಕ್ಕೆ ಹೆಸರಿಡುವಾಗ ಮಲ್ಲೇಶ್ವರದ ಮೊದಲ ಅಕ್ಷರಗಳಾದ "Mal"ಗಳನ್ನು ಬಸವನಗುಡಿಯ ಕೊನೆಯಕ್ಷರಗಳಾದ "gudi"ಯನ್ನು ಸೇರಿಸಿ "ಮಾಲ್ಗುಡಿ" ಎಂದು ಹೆಸರಿಟ್ಟಿದ್ದರಂತೆ ಹೌದಾ?
👉 ದಕ್ಷಿಣ ಅಮೇರಿಕಾ ಮೂಲದ ಕಡಲೆಕಾಯಿ/ಶೇಂಗಾ ನಮ್ಮ ದೇಶಕ್ಕೆ ಬಂದದ್ದು ಯುರೋಪಿಯನ್ನರ ಮೂಲಕ. ಹಾಗಾದರೆ 'ಕಡಲೆಕಾಯಿ' ಪರಿಷೆಗೆ ಐನೂರು ವರ್ಷಗಳ ಇತಿಹಾಸವಿದೆ ಎನ್ನುವುದು myth/ಮಿಥ್ಯವೇ?
👉 ಕಸಾಪ ಸ್ಥಾಪಕರಲ್ಲಿ ಒಬ್ಬರಾದ, #ಕನ್ನಡದ ಮೊದಲ ವಿಜ್ಞಾನ ಪತ್ರಿಕೆ “ವಿಜ್ಞಾನ”ವನ್ನು ಹೊರತಂದ ಬೆಳ್ಳಾವೆ ವೆಂಕಟನಾರಣಪ್ಪನವರು ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಸ್ಥಾಪಕರೂ ಹೌದು ಎಂದು ನಿಮಗೆ ಗೊತ್ತೇ?
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
👉 "ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು, ನಡು ಮಧ್ಯದಲಿ ಅಡಕೆ ತೆಂಗುಗಳ ಮಡಿಲು, ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ, ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ" ಎಂದು ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಬರೆದ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಇಲ್ಲಿನ ಸಂಸದರಾಗಿ ಚುನಾಯಿತರಾಗಿದ್ದರು, ಗೊತ್ತಾ ?
👉 ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಶುರುವಾದದ್ದು ಎಲ್ಲಿ ಗೊತ್ತಾ?
👉 ಬ್ರಿಟಿಷರು ಬಾಲಕ್ಕೆ ಎರಡು ಆಣೆಯಂತೆ ಪ್ರತಿ ದನಕ್ಕೂ ಕರವಿಧಿಸಿದ್ದರು, ಗೊತ್ತಾ?
👉 ಶಿರಸಿಯ ಶ್ರೀ ಮಾರಿಕಾಂಬಾ ಗುಡಿಯಲ್ಲಿ ಚಳವಳಿಗಾರರ ಸಭೆ ನಡೆದಿದ್ದವು, ಗೊತ್ತಾ?
👉 ಲಿಲಾವಿನಲ್ಲಿ ಜಪ್ತಿ ಮಾಡಿದ ಎಮ್ಮೆ ಕೊಂಡವರ ಮನೆಮುಂದೆ ಸತ್ಯಾಗ್ರಹ ಮಾಡಿದ ಮಹಿಳೆಯರು ಮನೆಯವರ ಹೃದಯ ಪರಿವರ್ತನೆ ಮಾಡಿ ಎಮ್ಮೆಯನ್ನು ಮೆರವಣಿಗೆಯಲ್ಲಿ ವಾಪಸು ತೆಗೆದುಕೊಂಡು ಹೋದದ್ದು ಗೊತ್ತಾ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ನಮ್ಮ ಈ ಸಲದ ದನಿಪಯಣ ಕೇಳಿ.
ಲಾಲ್ಬಾಗ ಇತಿಹಾಸ ನಿಮಗೆಷ್ಟು ಗೊತ್ತು ?
👉 ಗದುಗಿಗೆ ಕೃತುಪುರ ಎಂದು ಹೆಸರು ಬರಲು ಕಾರಣ ಏನು ಗೊತ್ತಾ?
👉 "ಗದುಗು" ಎನ್ನುವ ಹೆಸರಿಗೆ ಕನಿಷ್ಟ 800 ವರ್ಷದ ಹಿನ್ನೆಲೆ ಇದೆ ಗೊತ್ತಾ?
👉 ಗದುಗಿನ ತ್ರಿಕೂಟೇಶ್ವರ ವೀರನಾರಾಯಣ ಪ್ರಸಿದ್ಧ, ಆದರೆ ಹಾವಳಿ ತ್ರಿಕೂಟೇಶ್ವರ , ಹಾವಳಿ ನಾರಾಯಣ ಗೊತ್ತಾ?
👉 ಬೆಟಗೇರಿಯ ಹಿಂದಿನ ಹೆಸರು ಬಟ್ಟಗೆರೆ ಅಂತ ನಿಮಗೆ ಗೊತ್ತಿತ್ತಾ?























