Discoverದನಿಪಯಣದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ
ದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ

ದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ

Update: 2020-06-28
Share

Description

ಈ ಸಲ ನಾವು ನಮ್ಮ ಧಾರವಾಡದ "ರ್‍ಯಾಂಕುಗಳ ಬ್ಯಾಂಕು" ಕೆಇಬೋರ್ಡ ಸಂಸ್ಥೆಯ ಶಾಲೆಗಳಿಗೆ ಪಯಣ ಹೊರಟಿದ್ದೇವೆ:

👉 ಧಾರವಾಡದ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ, ಕರ್ನಾಟಕ ಕಾಲೇಜಿನ ಸ್ಥಾಪಕರಾಗಿ, ಧಾರವಾಡವನ್ನು ವಿದ್ಯಾಕಾಶಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾವ್ ಬಹಾದ್ದೂರ್ ಶ್ರೀ ರೊದ್ಧ ಶ್ರೀನಿವಾಸರಾಯರೇ ಕರ್ನಾಟಕ ಪ್ರೌಢಶಾಲೆಯ, ಕೆಇಬೋರ್ಡ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು.

👉 ಕೆಇಬೋರ್ಡ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರ ತವರು ಇದ್ದಂತೆ. ಇಲ್ಲಿಯ ಡಾ.ಕಬ್ಬೂರ, ಶ್ರೀ ಕರಮರಕರ, ಶ್ರೀ ಕೆ.ಜಿ. ಜೋಷಿ ಕರನಿರಾಕರಣೆ/ಕಾನೂನು ಭಂಗ ಚಳುವಳಿಗಳಲ್ಲಿ ಮುಂದಾಳತ್ವ ವಹಿಸಿದ್ದರು.
ಇಲ್ಲಿ ಮುಖ್ಯೋಪಾಧ್ಯಯರಾಗಿದ್ದ ಶ್ರೀ ಶನೋಲಕರರು ಶ್ರೀ ಎಸ್‌ಜಿ ನಾಡಗೇರರು ಭೂಗತ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಕರಪತ್ರಗಳು ಆಗಾಗ ಈ ಸಂಸ್ಥೆಯ ಕರ್ನಾಟಕ ಹೈಸ್ಕೂಲಿನಲ್ಲಿ ಅಚ್ಚಾಗುತ್ತಿದ್ದವು.

👉 ಈಗ ಜೆಎಸ್‌ಎಸ್ ಕಾಲೇಜೆಂದು ಪ್ರಸಿದ್ಧವಾಗಿರುವ ಕಾಲೇಜು, ಈಗ ವಿದ್ಯಾರಣ್ಯ ಶಾಲೆ ಇರುವ ಜಾಗದಲ್ಲೇ ಶುರುವಾಗಿತ್ತು. ಖ್ಯಾತ #ಕನ್ನಡ ಕವಿ, #ಕನ್ನಡದ ಕಣ್ವ ಶ್ರೀ ಯವರು ಅದರ ಮೊದಲ ಪ್ರಾಂಶುಪಾಲರು.

👉 "ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ" ಎಂ ಖ್ಯಾತ ಕವಿ ಶ್ರೀ ಸಾಲಿ ರಾಮಚಂದ್ರ ರಾಯರು ಇಲ್ಲಿ ಸಾಲಿ ಕಲಿಸಿದ್ದರಷ್ಟೇ ಅಲ್ಲ, ಸಾಲಿಗೆ ಪ್ರಾರ್ಥನಾ ಪದ್ಯ ಬರೆದು ಕೊಟ್ಟಿದ್ದಾರೆ.

👉 ಬಿಎಂಶ್ರೀಯವರು, ಶ್ರೀ ಬೇಂದ್ರೆ, ಶ್ರೀ ಶಂಬಾ, ಶ್ರೀ ರಂಗನಾಥ ದಿವಾಕರ, ಶ್ರೀ ಕುಂದಣಗಾರ ಹೀಗೆ ಈ ಸಂಸ್ಥೆಗೆ ಸಂಬಂಧಿಸಿದ ಐವರು #ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿದ್ದರು.



ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.




ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ :
http://antarangada-mrudanga.blogspot.com/2020/06/blog-post.html?m=1
Comments 
loading
In Channel
loading
00:00
00:00
1.0x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ

ದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ

Gururaj Kulkarni